Advertisement

ಮೈತ್ರಿ ಮುಂದುವರಿಕೆ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ : ದೇವೇಗೌಡ

09:33 AM Jul 29, 2019 | Hari Prasad |

ಬೆಂಗಳೂರು: ರಾಜ್ಯದಲ್ಲಿ ‌ಮೈತ್ರಿ ಮುಂದುವರಿಕೆ ಕುರಿತು ಕಾಂಗ್ರೆಸ್ ನಾಯಕರ ತೀರ್ಮಾನ ನೋಡಿ ಮುಂದಿನ ನಿರ್ಧಾರ ಮಾಡ್ತೇವೆ ಎಂದು ಮಾಜೀ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ನಂತರದ ಪರಿಸ್ಥಿತಿಯಲ್ಲಿ  ಸೋನಿಯಾಗಾಂಧಿ, ರಾಹುಲ್ ಗಾಂಧಿಯವರು ಮೈತ್ರಿ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದರು. ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಬೇಕು ಎಂದು‌ ತೀರ್ಮಾನ ಮಾಡಿದ್ದರು. ಹದಿನಾಲ್ಕು ತಿಂಗಳು ಸರ್ಕಾರ ಮಾಡಿದೆವು. ಇದೀಗ ಸರ್ಕಾರ ಪತನಗೊಂಡಿದೆ. ಮೈತ್ರಿ ಮುಂದುವರಿಕೆ ವಿಚಾರದಲ್ಲಿ ಈಗಲೂ ಕಾಂಗ್ರೆಸ್ ನಾಯಕರ ತೀರ್ಮಾನ ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ‌ ಸಿದ್ದರಾಮಯ್ಯ ಅಧಿಕೃತ ಪ್ರತಿಪಕ್ಷ ನಾಯಕರಾಗಿರುತ್ತಾರೆ, ಕುಮಾರಸ್ವಾಮಿ ಜೆಡಿಎಸ್ ನಾಯಕರಾಗಿ ಸದನದಲ್ಲಿ ಕೆಲಸ ಮಾಡ್ತಾರೆ ಎಂದು ಹೇಳಿದರು. ವಿಧಾನಸಭೆಯಲ್ಲಿ ಸೋಮವಾರ ಹಣಹಾಸು ಮಸೂದೆಗೆ ನಾವು ಅಡ್ಡಿ‌ಮಾಡುವುದಿಲ್ಲ, ಒಪ್ಪಿಗೆ ನೀಡ್ತೇವೆ ಎಂದರು.

ಅತೃಪ್ತ ಶಾಸಕರು ಅನರ್ಹ ಆಗಿದ್ದಾರೆ. ನಾಳೆ ಅಥವಾ ನಾಳಿದ್ದು ಬಂದು ಎಲ್ಲಾ ಹೇಳ್ತೇವೆ ಅಂತ ಹೇಳಿದ್ದಾರೆ. ನನ್ನ ಮೇಲೆ ಮತ್ತು ನನ್ನ ಮಗನ ಮೇಲೆ ಏನೆಲ್ಲಾ ಆರೋಪ ಮಾಡ್ತಾರೋ ನೋಡೋಣ ಎಂದು ಮಾಜೀ ಪ್ರಧಾನಿಯವರು ಮಾರ್ಮಿಕವಾಗಿ ಹೇಳಿದರು.

ಪರಿಸ್ಥಿತಿ ತೀರಾ ಕಠಿಣವಾಗಿದ್ದ ಕಾರಣ, ನನಗಾಗಿ ಹೋರಾಟ ಮಾಡಿದ ಪಕ್ಷದ ಕಾರ್ಯಕರ್ತರಿಗೆ ಈ ಮೈತ್ರಿ ಸರ್ಕಾರದಲ್ಲಿ ನ್ಯಾಯ ಕೊಡಿಸಲು ಆಗಲಿಲ್ಲ ಎಂದು ಹೇಳಿ ದೇವೇಗೌಡರು ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.

Advertisement

ಅತೃಪ್ತರ ಕ್ಷೇತ್ರದ ಮುಖಂಡರ ಸಭೆ
ಇವೆಲ್ಲದರ ನಡುವೆ ದೇವೇಗೌಡರು, ಭಾನುವಾರ ಅತೃಪ್ತ ಶಾಸಕರ ಕ್ಷೇತ್ರಗಳಾದ ಮಹಾಲಕ್ಷ್ಮಿ ಲೇ ಔಟ್, ಯಶವಂತಪುರ ಕ್ಷೇತ್ರಗಳ ಕಾರ್ಯಕರ್ತರು ಮುಖಂಡರ ಸಭೆ ನಡೆಸಿದರು.  ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದಿಂದ ಸಮರ್ಥ  ಅಭ್ಯರ್ಥಿಗಳನ್ನು ಹಾಕೋಣ, ‘ನಾನು ನಿಮ್ಮ ಜತೆ ಇರ್ತೇನೆ  ಸೂಕ್ತ ಅಭ್ಯರ್ಥಿ ಹುಡುಕಿ. ನನಗೆ ಪಕ್ಷ ಉಳಿಯುವುದು ಮುಖ್ಯ…’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next