ಬೆಂಗಳೂರು: ಮಿಷನ್ ದಕ್ಷಿಣ ಯೋಜನೆಯಲ್ಲಿ ದಕ್ಷಿಣ ರಾಜ್ಯ ಮಾತ್ರವಲ್ಲ ಬೇರೆ ಕಡೆಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಅಣ್ಣಾ ಮಲೈ ನೇತೃತ್ವದಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ತಮಿಳುನಾಡಿನಲ್ಲಿ ಜನರು ಬದಲಾವಣೆ ಬಯಸುತ್ತಾರೆ. ಪಾಂಡಿಚೇರಿಯಲ್ಲಿ ಆಡಳಿತದ ಪಾಲುದಾರರು ನಾವು. 70%ರಷ್ಟು ಕೇಂದ್ರ ಯೋಜನೆ ಫಲಾನುಭವಿಗಳಿಗೆ ಮುಟ್ಟಬೇಕು. ದಲಿತರಿಗೆ, ಹಿಂದುಳಿದವರಿಗೆ ಯೋಜನೆ ಮುಟ್ಟಬೇಕು. ದಕ್ಷಿಣ ರಾಜ್ಯ ಸೇರಿದಂತೆ ಬೇರೆ ರಾಜ್ಯದಲ್ಲೂ ಬಿಜೆಪಿ ಬರುವುದು ಖಂಡಿತ ಎಂದು ಹೇಳಿದರು.
ನಮ್ಮ ಸರ್ಕಾರದ ಯೋಜನೆ ಜನರಿಗೆ ಮುಟ್ಟಿಸಬೇಕು ಎಂಬುದು ನಿನ್ನೆ ಸಭೆಯಲ್ಲಿ ತೀರ್ಮಾನವಾಗಿದೆ. ಅಲ್ಪಸಂಖ್ಯಾತರಿರುವ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಅವರನ್ನು ರಾಯಭಾರಿಯಾಗಿ ಬಳಸಿಕೊಳ್ಳುವ ತೀರ್ಮಾನ ಮಾಡಲಾಗಿದೆ. ದೇಶದಲ್ಲಿ ಧ್ರುವಿಕರಣ ರಾಜಕಾರಣ ವ್ಯವಸ್ಥೆಯಿದೆ. ಕೇಡರ್ ಗಳೇ ಲೀಡರ್ ಆಗಿರುವ ಬಿಜೆಪಿ ಪಾರ್ಟಿಯಾಗಿದೆ. ಪರಿವಾರದ ಮೂಸೆಯಿಂದ ಅಜ್ಜ, ಮುತ್ತಜ್ಜ ಎಂದು ಪರಿತಪಿಸುತ್ತಿರುವ ರಾಜಕಾರಣ ಮತ್ತೊಂದು ಕಡೆ. ರಾಷ್ಟ್ರವಾದ ಹಿನ್ನಲೆಯಲ್ಲಿ ರಾಷ್ಟ್ರೀಯತೆ ಹಂಚುವ ಕೆಲಸ ಬಿಜೆಪಿ ಮಾಡ್ತಿದೆ. ಪರಿವಾರ ರಾಜಕಾರಣದಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡಲು ಕಾಲ ಕಾಲಕ್ಕೆ ಮುಖವಾಡ ಹಾಕುತ್ತಾರೆ. ಜಾತ್ಯಾತೀತ ಘೋಷಣೆ ಹಾಕುವ ಬಹುತೇಕ ಜನ ರಾಜಕೀಯವಾಗಿ ಬದುಕುಳಿಯಲು ಸಾಧ್ಯವಿಲ್ಲ ಎಂದರು.
ರಾಜ್ಯಸ್ಥಾನದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಆರೋಪಿಗಳು ಬಿಜೆಪಿ ಪಕ್ಷದ ಮೆಂಬರ್ ಆಗಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಆನ್‌ಲೈನ್ ಮೆಂಬರ್ ಶಿಪ್ ಇದೆ. ಸೆಲ್ಫಿ ಯಾರು ಬೇಕಾದರೂ ತಗೆಯಬಹುದು. ಪೋಟೋ ತಗೊಂಡವರೆಲ್ಲ ಬಿಜೆಪಿ ಲೀಡರಾಗಲ್ಲ. ಕನ್ಹಯ್ಯ ಹತ್ಯ ಮಾಡಿದವನು ಆಮೇಲೆ ಯಾರ ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದನೆಂದು ಗೊತ್ತಲ್ವಾ? ದೆ ಆಲ್ ಮೈ ಬ್ರದರ್ಸ್ ಅಂತ ನಾವು ಹೇಳಿಕೆ ಕೊಟ್ಟಿಲ್ಲ. ಮಾಸ್ ಪಾರ್ಟಿ ಮಾಡಬೇಕಾದರೇ ಒಳ್ಳೆಯ ನೀರು ಮಾತ್ರವೇ ಇರಲ್ಲ. ಕಸ, ಕಡ್ಡಿಯೂ ಬರುತ್ತದೆ. ಆಮೇಲೆ ಫಿಲ್ಟರ್ ಆಗುತ್ತದೆ ಎಂದು ಹೇಳಿದರು.
ನೂಪುರ್ ಶರ್ಮಾಗೆ ಸುಪ್ರೀಂ ಕೋರ್ಟ್ ಚಾಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ಸತ್ಯದ ಪಕ್ಷ ಪಾತಿ. ಎಲ್ಲಾ ಮತಗಳ ಆಳವಾದ ಅಧ್ಯಯನ ಮಾಡಿ ಯಾವುದರಲ್ಲಿ ಎಷ್ಟು ಕೆಟ್ಟದಿದೆ ಅಂತ ಅವಲೋಕನದ ಮಾಡಿದೆ ಎಂದರು.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಶಿಂಧೆ ದರ್ಬಾರ್ ಶುರು: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಏಕನಾಥ ಶಿಂಧೆ
ಖಾಲಿ ಡಬ್ಬ ಜಾಸ್ತಿ ಸೌಂಡ್ ಮಾಡುತ್ತದೆ. ನಾವು ಹೇಳಿದ್ದು ಕಠಿಣ ಎನ್ನಬಹುದು. ಆದರೆ ಉತ್ತರಾಖಂಡ, ಗೋವಾ,ಪಂಜಾಬ್, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಯ್ತು. ಕಾಂಗ್ರೆಸ್ ಚುನಾವಣೆ ಮೊದಲು ಬಹಳ ಸೌಂಡ್ ಮಾಡುತ್ತದೆ. ಸಿದ್ದರಾಮಯ್ಯ ಏನ್ ಹೇಳುತ್ತಾರೋ ಅದೆಲ್ಲಾ ಉಲ್ಟಾ ಆಗುತ್ತದೆ. ಮೋದಿ ಪ್ರಧಾನಿ ಆಗಲ್ಲ ಎಂದಿದ್ದರು. ಎರಡು ಬಾರಿ ಪ್ರಧಾನಿಯಾದರು. ನಾನೇ ಸಿಎಂ ಆಗುವುದು ಅಂತ ಹೇಳಿದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತ್ರು. ಒಂದು ರೀತಿಯಲ್ಲಿ ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ ಎಂದು ವ್ಯಂಗ್ಯವಾಡಿದರು