Advertisement

ನಾವು ಈ ದೇಶದ ರಾಜಕೀಯವನ್ನು ಬದಲಾಯಿಸುತ್ತೇವೆ: ಕೇಜ್ರಿವಾಲ್

05:18 PM Mar 10, 2022 | Team Udayavani |

ನವದೆಹಲಿ : ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಬಳಿಕ ನಾವು ಈ ದೇಶದ ರಾಜಕೀಯವನ್ನು ಬದಲಾಯಿಸುತ್ತೇವೆ ಎಂದು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ಗೆಲುವಿನ ಸಂಭ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ಮುಖ್ಯಮಂತ್ರಿಯಾಗುತ್ತಿರುವ ನನ್ನ ಕಿರಿಯ ಸಹೋದರ ಭಗವಂತ್ ಮಾನ್ ಅವರನ್ನು ಅಭಿನಂದಿಸುತ್ತೇನೆ. ಆಪ್ 90 ಸ್ಥಾನಗಳನ್ನು ದಾಟಿದೆ, ಫಲಿತಾಂಶಗಳು ಇನ್ನೂ ಬರುತ್ತಿವೆ, ಜನರು ನಮ್ಮ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ, ನಾವು ಅದನ್ನು ಮುರಿಯುವುದಿಲ್ಲ ಎಂದರು.

ಬ್ರಿಟಿಷರು ಹೋದ ನಂತರ ನಾವು ವ್ಯವಸ್ಥೆಯನ್ನು ಬದಲಾಯಿಸದಿದ್ದರೆ ಏನೂ ಆಗುವುದಿಲ್ಲ ಎಂದು ಭಗತ್ ಸಿಂಗ್ ಒಮ್ಮೆ ಹೇಳಿದ್ದರು. ದುಃಖಕರವೆಂದರೆ ಕಳೆದ 75 ವರ್ಷಗಳಲ್ಲಿ, ಈ ಪಕ್ಷಗಳು ಮತ್ತು ನಾಯಕರು ಅದೇ ಬ್ರಿಟಿಷ್ ವ್ಯವಸ್ಥೆಯನ್ನು ಹೊಂದಿದ್ದರು, ಅವರು ದೇಶವನ್ನು ಲೂಟಿ ಮಾಡುತ್ತಿದ್ದಾರೆ, ಯಾವುದೇ ಶಾಲೆಗಳು/ಆಸ್ಪತ್ರೆಗಳನ್ನು ಮಾಡಲಾಗಿಲ್ಲ. ಆದರೆ ಆಪ್ ವ್ಯವಸ್ಥೆಯನ್ನು ಬದಲಾಯಿಸಿದೆ ಎಂದರು.

ಹಲವು ದಿಗ್ಗಜ ನಾಯಕರನ್ನು ಜನರು ಸೋಲಿಸಿ ಮನೆಗೆ ಕಳುಹಿಸಿದ್ದಾರೆ.ಇದು ಪಂಜಾಬ್ ಜನತೆಯ ಸಾಮರ್ಥ್ಯವನ್ನು ತೋರಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next