Advertisement

ಯಾವದೇ ಪಕ್ಷದೊಂದಿಗೆ ವಿಲೀನವಿಲ್ಲ, 2023ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ: ಎಚ್ ಡಿಕೆ

01:31 PM Jan 04, 2021 | Team Udayavani |

ಬೆಂಗಳೂರು: ಮುಂದಿನ ಬಾರಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಮುಂದಿನ 2023ರ ವೇಳೆಗೆ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಇವತ್ತಿನಿಂದಲೇ ಜೆಡಿಎಸ್ ಸಂಘಟನೆ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿ ನಂತರ ಪಕ್ಷದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಲು ನಿರ್ಧಾರ ಮಾಡಿದ್ದೇವೆ. ಆ ಹಿನ್ನೆಲೆಯಲ್ಲಿ ಮೊದಲ ಸಭೆ ನಡೆಸಿದ್ದೇವೆ. ಜೆಡಿಎಸ್ ಅನ್ನು ಯಾವುದೇ ಪಕ್ಷದೊಂದಿಗೆ ವಿಲೀನ ಮಾಡುವ ಅಥವಾ ಬೆಂಬಲಿಸುವ ಉದ್ದೇಶವಿಲ್ಲ, ಸೀಟು ಹೊಂದಾಣಿಕೆ ವಿಚಾರವೂ ನಮ್ಮ ಮುಂದೆ ಇಲ್ಲ ಎಂದರು.

ಇವತ್ತಿನ ಬಿಜೆಪಿ ಆಡಳಿತ ಮತ್ತು ಕಾಂಗ್ರೆಸ್ ನಡವಳಿಕೆಯೂ ನನಗೆ ಗೊತ್ತು. ಮುಂದಿನ ದಿನಗಳಲ್ಲಿ ಜೆಡಿಎಸ್ ಗೆ ಸ್ವಂತಂತ್ರವಾಗಿ ಅಧಿಕಾರ ಕೊಟ್ಟರೆ ಏನೆಲ್ಲಾ ಕೆಲಸ ಮಾಡುತ್ತೇವೆ ಎನ್ನುವ ಯೋಜನೆ ಮುಂದಿಟ್ಟಿದ್ದೇವೆ ಎಂದ ಅವರು, ಬಿಜೆಪಿಯವರು ಗ್ರಾಮ ಸ್ವರಾಜ್ ಮಾಡಿದರು. ಈಗ ಗ್ರಾಮ ಪಂಚಾಯತ್ ನಲ್ಲಿ ಪಾಪದ ಹಣ ಚೆಲ್ಲಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಇವತ್ತಿನ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ಸಿಗುತ್ತಿಲ್ಲ ಎಂದರು.

ಇದನ್ನೂ ಓದಿ:ಲಾಕ್‌ಡೌನ್‌ ತೆರವು: ಚೇತರಿಕೆ ಕಾಣದ ಕರಾವಳಿಯ ಸಿಂಗಲ್‌ ಥಿಯೇಟರ್‌!

ಜೆಡಿಎಸ್ ನ ಸ್ವಾಭಿಮಾನವನ್ನು ಬೇರೆ ಪಕ್ಷಕ್ಕೆ ಅಡ ಇಡಲು ಸಾಧ್ಯವೇ? ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ನಾನೇನಾದರೂ ಬೇಡಿಕೆ ಇಟ್ಟಿದ್ದೇನಾ? ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಶಾಸಕರ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತ್ರ. ಅಷ್ಟಕ್ಕೆ ನಮ್ಮ ಪಕ್ಷ ಮುಗಿದೇ ಹೋಯ್ತು ಎಂದು ಹೇಳುತ್ತಾರೆ ಎಂದರು.

Advertisement

ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷರು ಶೇ 50ರಷ್ಟು ಸ್ಥಾನ ಗೆದ್ದಿದ್ದೇವೆ ಎಂದು ಹೇಳುತ್ತಾರೆ. ಕಾಂಗ್ರೆಸ್ ನವರು ನಾವು ಹೆಚ್ಚಿನ ಸ್ಥಾನ ಗೆದ್ದಿದ್ದೇವೆ ಎಂದು ಹೇಳುತ್ತಾರೆ. ಆದರೆ ನಾವು ಆ ರೀತಿ ಹೇಳುವುದಿಲ್ಲ. ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಿಜವಾದ ರಾಜಕೀಯ ಅಖಾಡ ಸಿದ್ದವಾಗಲಿದೆ ಎಂದರು.

ಇದನ್ನೂ ಓದಿ: ಆಸ್ಪತ್ರೆಯಲ್ಲಿರುವ ಸಚಿವ ಸದಾನಂದ ಗೌಡ ಆರೋಗ್ಯ ವಿಚಾರಿಸಿದ ಯಡಿಯೂರಪ್ಪ, ಸಚಿವರು

ಕಾಂಗ್ರೆಸ್ ಶಾಲಿನ ಬಗ್ಗೆ ಕುಮಾರ ಸ್ವಾಮಿ ಮಾತನಾಡಬಾರದು ಎಂಬ ಡಿಕೆಶಿ ಹೇಳಿಕೆಗೆ ನಾನು ಹಿಂದಿನ ಕಾಂಗ್ರೆಸ್ ಶಾಲಿನ ಬಗ್ಗೆ ಮಾತನಾಡಿಲ್ಲ, ಈಗಿನ ಶಾಲಿನ ಬಗ್ಗೆ ಮಾತನಾಡಿದ್ದೇನೆ. ಹಿಂದಿನ ಶಾಲಿನ ಬಗ್ಗೆ ನನಗೆ ಗೌರವ ಇದೆ. ಇನ್ನು ಮುಂದೆ ಶಾಲಿನ ಬಗ್ಗೆ ಮಾತಾಡೊಲ್ಲ ಬಿಡಿ ಎಂದು ಎಚ್ ಡಿಕೆ ಪ್ರತಿಕ್ರಿಯೆ ನೀಡಿದರು.

ದೇವೇಗೌಡರ ಮನೆ ಬಾಗಿಲಿಗೆ ಬಂದಿದ್ದು ಕಾಂಗ್ರೆಸ್ ನವರು. ನಾನು ದೆಹಲಿಗೆ ಹೋಗಲ್ಲ ಎಂದು ದೇವೇಗೌಡರು ಹೇಳಿದ್ದರು. ಆದರೆ ಕಾಂಗ್ರೆಸ್ ನವರೇ ದೇವೇಗೌಡರಿಗೆ ಒತ್ತಾಯ ಮಾಡಿದ್ದರು, ನಾನು ಸಿಎಂ ಆಗಲು ಇವರ ಮನೆ ಬಾಗಿಲಿಗೆ ಹೋಗಿರಲಿಲ್ಲ, ಅವರೇ ನನ್ನ ಮನೆ ಬಾಗಿಲಿಗೆ ಬಂದು ಸಿಎಂ ಆಫರ್ ನೀಡಿದ್ದರು ಎಂದು ಎಚ್ ಡಿಕೆ ಕಾಂಗ್ರೆಸ್ ಟೀಕೆಗಳಿಗೆ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next