Advertisement

ನನಗೆ “ಈ ದಿನ’ವೇ ಇಷ್ಟ!

06:39 AM Feb 09, 2018 | |

ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 11ರಿಂದ 13ರವರೆಗೆ ದುಬೈನಲ್ಲಿ ನಡೆಯಲಿರುವ “ವಿಶ್ವ ಸರಕಾರಿ ಶೃಂಗ’ದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ದುಬೈ ಆಂಗ್ಲ ಪತ್ರಿಕೆ “ಗಲ್ಫ್ ನ್ಯೂಸ್‌’ಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ…

Advertisement

ಮುಂಬರಲಿರುವ ಯುಎಇ ಭೇಟಿಯ ಬಗ್ಗೆ ಹೇಳಿ
 ವಿಶ್ವ ಸರಕಾರಿ ಶೃಂಗವನ್ನು(ಫೆ.11-13 ದುಬೈ) ಉದ್ದೇಶಿಸಿ ಮಾತನಾಡಲು ನನಗೆ ಆಹ್ವಾನ ಬಂದಿದೆ. ಈ ವರ್ಷ ಭಾರತಕ್ಕೆ “ಗೌರವಾನ್ವಿತ ಅತಿಥಿ ರಾಷ್ಟ್ರ’ದ ಸ್ಥಾನ ನೀಡಲಾಗಿದೆ. ನಮ್ಮ ದೇಶಕ್ಕೆ ನೀಡಲಾಗಿರುವ ಈ ಗೌರವವಿದೆಯಲ್ಲ, ಇದು ಎರಡೂ ರಾಷ್ಟ್ರಗಳ ನಡುವಿನ ಬಲಿಷ್ಟ ಸ್ನೇಹದ ದ್ಯೋತಕವಾಗಿದೆ.  
ನಾನು ಯುಎಇಯ ಪ್ರಧಾನಿ ಸನ್ಮಾನ್ಯ ಶೇಖ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಕೊ¤àಮ್‌ರೊಂದಿಗೆ ಮತ್ತು ಅಬುಧಾ ಬಿಯ ರಾಜಕುಮಾರ-ಯುಎಇ ಭದ್ರತಾಪಡೆಗಳ ಉಪ ಸರ್ವೋಚ್ಚ ಕಮಾಂಡರ್‌ ಸನ್ಮಾನ್ಯ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ರೊಂದಿಗೆ ಸಭೆ ನಡೆಸಲಿದ್ದೇನೆ. 
ಯುಎಇಯಲ್ಲಿ 30 ಲಕ್ಷಕ್ಕಿಂತಲೂ ಹೆಚ್ಚು ಭಾರತೀಯ ಮೂಲದ ಜನರಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ದಲ್ಲಿ ಭಾರತೀಯರ ಈ ಸಮುದಾಯವು ಸೇತುವೆಯಾಗಿ ಪಾತ್ರ ವಹಿಸುತ್ತಿದೆ. ನನ್ನ ಭೇಟಿಯು ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂದು ಆಶಿಸುತ್ತೇನೆ. 

ನಿಮಗೆ ರಜೆಯ ಮಜಾ ಸಿಗುತ್ತದಾ? 
ನಾನು ಮುಖ್ಯಮಂತ್ರಿಯಾಗಿದ್ದಾಗಲೂ ರಜೆ ತೆಗೆದುಕೊಂಡಿರ ಲಿಲ್ಲ,  ಪ್ರಧಾನಿಯಾದ ಮೇಲೂ ಇಲ್ಲ. ಆದಾಗ್ಯೂ ಕೆಲಸದ ನಿಮಿತ್ತ ದೇಶಾದ್ಯಂತ ಸಂಚರಿಸಬೇಕಾಗುತ್ತದೆ. ಆಗ ಜನ ರೊಂದಿಗೆ ಒಡನಾಡುತ್ತೇನೆ, ಅವರ ಸುಖ-ದುಃಖಗಳು, ಆಕಾಂಕ್ಷೆಗಳ ಬಗ್ಗೆ ತಿಳಿದುಕೊಳ್ಳುತ್ತೇನೆ. ಇದು ನನಗೊಂದು ರೀತಿಯಲ್ಲಿ ರಿಫ್ರೆಷಿಂಗ್‌ ಆಗಿರುತ್ತದೆ. ನಾನು ಗುಜರಾತ್‌ನ ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ, ಅಂದರೆ 2001ರಲ್ಲಿ ಭಾರತದ ಜಿಲ್ಲೆಗಳಿಗೆಲ್ಲ ಪ್ರಯಾಣ ಮಾಡಿದೆ. ಇವೆಲ್ಲವೂ ನನಗೆ ಉತ್ಕೃಷ್ಟ  ಅನುಭವಗಳು, ಏಕೆಂದರೆ ಇದರಿಂದ ನಾನು ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ತಿಳಿದುಕೊಳ್ಳುವಂತಾಯಿತು. 

ನೀವು ಭಾರತದಿಂದ ಹೊರಗಿದ್ದಾಗ ನಿಮ್ಮೊಂದಿಗೆ ವಿಶೇಷ ಅಡುಗೆಯವರನ್ನು ಕರೆದೊಯ್ಯುತ್ತೀರಾ?
ಖಂಡಿತ ಇಲ್ಲ. ನನ್ನೊಂದಿಗೆ ಯಾವ ವಿಶೇಷ ಅಡುಗೆಯವರೂ ಇರುವುದಿಲ್ಲ.  ಆತಿಥೇಯರು ಏನನ್ನು ಸಿದ್ಧಪಡಿಸುತ್ತಾರೋ ಅದೇ ಆಹಾರವನ್ನೇ ನಾನು ತಿನ್ನುತ್ತೇನೆ ಮತ್ತು ಬಡಿಸಿದ್ದನ್ನೆಲ್ಲ ಎಂಜಾಯ್‌ ಮಾಡುತ್ತೇನೆ. 

ದಿನಕ್ಕೆ ಎಷ್ಟು ಹೊತ್ತು ನಿದ್ದೆ ಮಾಡುತ್ತೀರಿ?
ಕೆಲಸಕ್ಕೆ ಅನುಗುಣವಾಗಿ ನನ್ನ ನಿದ್ದೆ ಸಮಯ ಏರುಪೇರಾಗು ತ್ತದೆ. ಸಾಮನ್ಯವಾಗಿ 4ರಿಂದ 6 ತಾಸು. ಆದರೆ  ಪ್ರತಿ ರಾತ್ರಿಯೂ ನಾನು ಚೆನ್ನಾಗಿ ನಿದ್ದೆ ಮಾಡುತ್ತೇನೆ. ಹಾಸಿಗೆಗೆ ಒರಗಿದ ಕೆಲವೇ ನಿಮಿಷಗಳಲ್ಲಿ ನಿದ್ರೆಗೆ ಜಾರಿಬಿಡುತ್ತೇನೆ. ನಾನು ಚಿಂತೆಯ ಭಾರ ಹೊತ್ತು ಮಲಗುವುದಿಲ್ಲ ಮತ್ತು ಪ್ರತಿ ದಿನವೂ ಫ್ರೆಷ್‌ ಆಗಿ ಎದ್ದು, ಬದುಕಿನ ಹೊಸ ದಿನವನ್ನು ಸ್ವಾಗತಿಸುತ್ತೇನೆ. ನಿದ್ದೆಯೆನ್ನುವುದು ಮನಸ್ಸಿಗೆ ಮತ್ತು ದೇಹಕ್ಕೆ ಅತ್ಯಂತ ಅವಶ್ಯಕ. ಇತ್ತೀಚೆಗೆ ನಾನು ಮಕ್ಕಳಿಗಾಗಿ “ಎಕ್ಸಾಮ್‌ ವಾರಿಯರ್ಸ್‌’ ಎನ್ನುವ ಪುಸ್ತಕ ಬರೆದೆ. ಅದರಲ್ಲೂ ಕೂಡ ಉತ್ತಮ ನಿದ್ರೆಯ ಮಹತ್ವಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇನೆ.

Advertisement

ನೀವು ಬೆಳಗ್ಗೆ ಎದ್ದಾಕ್ಷಣ ಮಾಡುವ ಮೊದಲ ಮತ್ತು ರಾತ್ರಿ ಮಲಗುವ ಮುನ್ನ ಮಾಡುವ ಕೊನೆ ಕೆಲಸವೇನು? 
ನನ್ನ ದಿನ ಆರಂಭವಾಗುವುದು ಯೋಗದ ಮೂಲಕ. ಯೋಗ ನಮ್ಮನ್ನು ದಿನವಿಡೀ ಚಟುವಟಿಕೆಯಿಂದ ಇಟ್ಟಿರುತ್ತದೆ. 
ಆಮೇಲೆ ದಿನಪತ್ರಿಕೆಗಳನ್ನು, ಇ-ಮೇಲ್‌ಗ‌ಳನ್ನು ಚೆಕ್‌ ಮಾಡುತ್ತೇನೆ. ಅನಂತರ ಫೋನ್‌ ಕರೆಗಳನ್ನು ಮಾಡುತ್ತೇನೆ. 
ಇನ್ನು ನರೇಂದ್ರ ಮೋದಿ ಮೊಬೈಲ್‌ ಆ್ಯಪ್‌ಗೆ ಬಂದ ಕಮೆಂಟ್‌ಗಳನ್ನೂ ಓದುತ್ತೇನೆ. ಭಾರತದಾದ್ಯಂತ ಜನರೊಂದಿಗೆ ಈ ರೀತಿ ಸಂಪರ್ಕದಲ್ಲಿರುವುದು ಅದ್ಭುತವೆನಿಸುತ್ತದೆ. ದಿನವಿಡೀ ಬಂದ ಡಾಕ್ಯುಮೆಂಟ್‌ಗಳನ್ನೆಲ್ಲ ರಾತ್ರಿ ಮಲಗುವ ಮುನ್ನ ಓದುತ್ತೇನೆ ಹಾಗೂ ಮರುದಿನದ ಸಭೆಗಳು ಮತ್ತು ಕೆಲಸಗಳ ತಯಾರಿ ಮಾಡಿಕೊಳ್ಳುತ್ತೇನೆ. 

ನಿಮ್ಮ ಇಷ್ಟದ ತಿನಿಸು ಯಾವುದು? ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಏನಿಷ್ಟ? 
ನಾನೇನೂ ಅಂಥ ತಿಂಡಿಪೋತನಲ್ಲ. ಪ್ರತಿ ದಿನ ಸರಳ ಸಸ್ಯಾಹಾರ ವನ್ನು ಎಂಜಾಯ್‌ ಮಾಡುತ್ತೇನೆ. ಆಹಾರ ಪ್ರಿಯರಿಗೆ ಭಾರತ ಅದ್ಭುತ ಪ್ರದೇಶ. ಪ್ರತಿಯೊಂದು ರಾಜ್ಯವೂ ಅದ್ಭುತ ಆಹಾರ ಪದ್ಧತಿಯನ್ನು ಹೊಂದಿದೆ. ಭಾರತದಾದ್ಯಂತ ಸಂಚರಿ ಸುವ ಅವಕಾಶ ನನಗೆ ದೊರೆಯುವುದರಿಂದ ವೈವಿಧ್ಯಮಯ ತಿನಿಸುಗಳನ್ನು ಸವಿಯುವ ಸದವಕಾಶ ನನಗೆ ಸಿಕ್ಕಿದೆ. 

ನಿಮಗೆ ವಾರದಲ್ಲಿ ಯಾವ ದಿನ ಇಷ್ಟ? ಏಕೆ?
“ಈ’ ದಿನವೇ ನನ್ನ ಇಷ್ಟದ ದಿನ! ಸರಳ ತತ್ವವೊಂದರಲ್ಲಿ ನನಗೆ ನಂಬಿಕೆಯಿದೆೆ-ಈಗ ನಮ್ಮ ಕೈಯಲ್ಲಿರುವ ದಿನವನ್ನು ವ್ಯರ್ಥ ಮಾಡಬಾರದು, ಜೀವನವನ್ನು ಪೂರ್ಣವಾಗಿ ಬದುಕಬೇಕು. ಪರಿಶ್ರಮ ಪಡಲು, ಅಂದುಕೊಂಡದ್ದನ್ನು ಮಾಡಲು ನಮಗೆ “ಈ ದಿನ’ ಮಾತ್ರ ಸಾಧ್ಯವಾಗುತ್ತದೆ.

ನಿಮಗೆ ಅತಿ ಹೆಚ್ಚು ಸ್ಫೂರ್ತಿ ನೀಡಿದ ವ್ಯಕ್ತಿ ಯಾರು? 
ಅನೇಕರಿದ್ದಾರೆ. ಕೆಲವರ ಬಗ್ಗೆ ಹೇಳುತ್ತೇನೆ. ಚಿಕ್ಕ ವಯಸ್ಸಿ ನಿಂದಲೂ ನಾನು ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದಿ ದ್ದೇನೆ. ಅವರಿಗೆ ವಿಶ್ವ ಸಾಮರಸ್ಯ ಮತ್ತು ಸಹೋದರತ್ವದ ಮೌಲ್ಯ ಗಳಲ್ಲಿ ಅಚಲ ನಂಬಿಕೆಯಿತ್ತು. ಇನ್ನು ನಾನು ಇಷ್ಟಪಡುವ ಮತ್ತೂಬ್ಬ ವ್ಯಕ್ತಿತ್ವವೆಂದರೆ ಮಹಾತ್ಮಾ ಗಾಂಧಿಯವರದ್ದು. ಬಡವರ ವಿಷಯದಲ್ಲಿ ಅವರಿಗಿದ್ದ ಬದ್ಧತೆ, ಶಾಂತಿ ಮತ್ತು ಅಹಿಂಸೆಯ ಮೇಲೆ ಅವರಿಗಿದ್ದ ಅಚಲ ನಂಬಿಕೆ, ಸ್ವಾತಂತ್ರ್ಯ ಹೋರಾಟದ ವೇಳೆ ದೇಶದ ಪ್ರತಿಯೊಬ್ಬ ನಾಗರಿಕರನ್ನು ಒಂದಾಗಿಸಿದ ಅವರ ಸಾಮರ್ಥಯ ಬಹಳ ಪ್ರೇರಣೆ ನೀಡುತ್ತದೆ.
ಭಾರತವನ್ನು ಒಗ್ಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಸರ್ದಾರ್‌ ವಲ್ಲಭಭಾಯ್‌ ಪಟೇಲರೂ ನನಗೆ ಸ್ಫೂರ್ತಿಯೇ. ಶಹೀದ್‌ ಭಗತ್‌ ಸಿಂಗ್‌ ತನ್ನ ಶೌರ್ಯದ ಮೂಲಕ ನನ್ನ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದ್ದಾರೆ. ಅನೇಕ ಭಾರತೀಯರಿಗೆ ಪ್ರೇರಣೆಯಾಗಿರುವ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರೂ ನನಗೆ ಪ್ರೇರಣೆ.  ದೃಢ ನಿಲುವಿನ ಮಹತ್ವವನ್ನು ಅವರು ನಮಗೆ ಕಲಿಸಿದ್ದಾರೆ.  ಇನ್ನು ನಾನು ತುಂಬಾ ಗೌರವಿಸುವ ಮತ್ತೂಬ್ಬ ವ್ಯಕ್ತಿ ಎಂದರೆ ಬೆಂಜಮಿನ್‌ ಫ್ರಾಂಕ್ಲಿನ್‌.

ಸಂವಹನದ ವಿಷಯಕ್ಕೆ ಬಂದರೆ ನೀವೆಷ್ಟು ಟೆಕ್‌ ಸೇವಿ? 
ನನಗೆ ತಂತ್ರಜ್ಞಾನದ ಶಕ್ತಿಯ ಮೇಲೆ ಬಹಳ ನಂಬಿಕೆಯಿದೆ. ಏಕೆಂದರೆ ಅದು ಜನರನ್ನು ಸಬಲೀಕರಣಗೊಳಿಸುತ್ತದೆ. ಯುವ ಭಾರತದೊಂದಿಗೆ ನಿರಂತರ ಸಂಪರ್ಕದಲ್ಲಿರಲು ತಂತ್ರಜ್ಞಾನ ಅದ್ಭುತ ಮಾರ್ಗ. ಇದಷ್ಟೇ ಅಲ್ಲದೆ ಆಧುನಿಕ ತಂತ್ರಜ್ಞಾನವು ನಮಗೆ ಯುವಜನತೆಯ ಆಕಾಂಕ್ಷೆಗಳ ಪರಿಚಯ ಮಾಡಿಸು ತ್ತದೆ. ವೈಯಕ್ತಿಕವಾಗಿ ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯ ನಾಗಿದ್ದೇನೆ. ಅವು ಬಹಳ ವೈಬ್ರೆಂಟ್‌ ಆಗಿವೆ ಎಂದು ನನಗನ್ನಿಸುತ್ತದೆ. ನಾನು “ನರೇಂದ್ರ ಮೋದಿ ಮೊಬೈಲ್‌ ಆ್ಯಪ್‌’ಗೆ ಬರುವ ಸಂದೇಶಗಳನ್ನು ನಿರಂತರ ಓದುತ್ತಿರುತ್ತೇನೆ. ಈ ಆ್ಯಪ್‌ನಲ್ಲಿ ಅನೇಕಾನೇಕ ವಿಷಯಗಳ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು, ಸಲಹೆಗಳು ಮತ್ತು ಐಡಿಯಾಗಳು ಇರುತ್ತವೆ. 

Advertisement

Udayavani is now on Telegram. Click here to join our channel and stay updated with the latest news.

Next