Advertisement

“ನಮ್ಮ ಭಾವನೆ, ಮನಸ್ಸು ನಿಯಂತ್ರಕರು ನಾವೇ ಆಗಿರಬೇಕು’: ವಾಗ್ಮಿ ಬಿ. ಕೆ. ಶಿವಾನಿ

12:01 AM Feb 12, 2024 | Team Udayavani |

ಮಣಿಪಾಲ : ನಮ್ಮೊಳಗಿನ ಭಾವನೆ, ಮನಸ್ಸನ್ನು ನಾವೇ ನಿಯಂತ್ರಿ ಸಬೇಕು. ಇದರ ಕೀಲಿ ಕೈ ಇನ್ನೊಬ್ಬರಿಗೆ ಕೊಡಬಾರದು. ಪ್ರತಿ ವಿಷಯದಲ್ಲೂ ವೈಯಕ್ತಿಕವಾಗಿ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳುವ ಮೂಲಕ ಕುಟುಂಬ ದಲ್ಲೂ ಸಕಾರಾತ್ಮಕತೆ ರೂಪಿಸುತ್ತ ಹೋಗಬೇಕು. ಈ ಪ್ರಕ್ರಿಯೆ ಮುಂದು ವರಿದಂತೆ ಸಮಾಜದಲ್ಲೂ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ ಎಂದು ಪ್ರಜಾಪಿತ ಬ್ರಹ್ಮ ಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ವಾಗ್ಮಿ ಬಿ.ಕೆ. ಶಿವಾನಿ ಅವರು ಹೇಳಿದರು.

Advertisement

ಮಣಿಪಾಲ ಶಾಖೆಯ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಅಪರಿಮಿತ ಸಂತೋಷಕ್ಕಾಗಿ ಪರಮಾತ್ಮನೊಂದಿಗೆ ಮನಸ್ಸನ್ನು ಜೋಡಿಸಿ’ ಎಂಬ ವಿಷಯದಲ್ಲಿ ಅವರು ಸ್ಫೂರ್ತಿದಾಯಕ ಪ್ರವಚನ ನೀಡಿದರು.

ನಾವು ಮಾಡುವ ಕಾರ್ಯ ದಲ್ಲಿ ಪರಿಪೂರ್ಣ ತೆಯನ್ನು ರೂಢಿಸಿಕೊಳ್ಳ ಬೇಕು. ಪರಿಪೂರ್ಣತೆಯಿದ್ದಂತೆ ಸಕಾರಾತ್ಮಕ ಚಿಂತನೆಗಳು ನಮ್ಮೆಡೆಗೆ ಬರುತ್ತವೆ. ಇನ್ನೊಬ್ಬರ ಕಾರಣದಿಂದ ನಮ್ಮೊಳಗೆ ನಾವು ಒತ್ತಡ ತಂದು ಕೊಳ್ಳಬಾರದು. ಇನ್ನೊಬ್ಬರಿಗೆ ನಾವೂಒತ್ತಡ ನೀಡಬಾರದು. ನಿತ್ಯ ಜೀವನದ ವ್ಯವಹಾರಿಕ ವಿಷಯಗಳು ನಮ್ಮ ಒತ್ತಡ ಹೆಚ್ಚಿಸದಂತೆ ನೋಡಿ ಕೊಳ್ಳಬೇಕು. ಎಲ್ಲ ಕಾಯಿಲೆಗಳನ್ನು ಬಗೆಹರಿಸಲು ವೈದ್ಯರು ಸಿಗುತ್ತಾರೆ. ಆದರೆ, ನಮ್ಮೊಳಗೆ ಭಾವನಾತ್ಮಕವಾಗಿ ಸುದೃಢ ಆರೋಗ್ಯ ಕಾಪಾಡಿಕೊಳ್ಳಲು ನಾವೇ ವೈದ್ಯರಾಗಬೇಕು. ನಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಬೇಕು. ಸಾಗುತ್ತಿರುವ ಮಾರ್ಗ ಸರಿಯಿಲ್ಲ ಎಂದಾಗ ತತ್‌ಕ್ಷಣವೇ ಯು-ಟರ್ನ್ ತೆಗೆದುಕೊಂಡು ಸರಿಯಾದ ಮಾರ್ಗದಲ್ಲಿ ಸಾಗಬೇಕು ಎಂದರು.

ಮಕ್ಕಳಲ್ಲಿ ಸಕಾರಾತ್ಮಕತೆ ಬೆಳೆಸಿ
ಪರೀಕ್ಷೆಯಲ್ಲಿ ಗಳಿಸುವ ಅಂಕದ ಕಾರಣಕ್ಕೆ ಎಲ್ಲವೂ ಸಾಧ್ಯವಾಗುತ್ತದೆ ಎಂದೇನೂ ಇಲ್ಲ. ಹೀಗಾಗಿ ಅಂಕಗಳ ಮೇಲೆ ಗಮನ ಮಾಡದೇ ಅವರಲ್ಲಿ ಪರೀಕ್ಷೆ ಭಯ ದೂರ ಮಾಡಬೇಕು. ವೃತ್ತಿಪರ ಏಳ್ಗೆಯ ಜತೆಗೆ ವೈಯಕ್ತಿಕ ಏಳ್ಗೆಯೂ ಅತಿ ಮುಖ್ಯ. ವೈಯಕ್ತಿಕವಾಗಿ ನಾವು ಬೆಳೆಯಬೇಕಾದರೆ ಬೌದ್ಧಿಕವಾಗಿ ಬೆಳೆಯಬೇಕು. ಮಕ್ಕಳಲ್ಲಿ ಸಕಾರಾತ್ಮಕ ಬೌದ್ಧಿಕತೆ/ಚಿಂತನೆ ತುಂಬಬೇಕು ಎಂದು ಸಲಹೆ ನೀಡಿದರು.

ಶಾಸಕ ಯಶ್‌ಪಾಲ್‌ ಎ. ಸುವರ್ಣ, ಐಎಂಎ ಉಡುಪಿ ಶಾಖೆ ಅಧ್ಯಕ್ಷೆ ಡಾ| ರಾಜಲಕ್ಷ್ಮೀ, ಮನೋವೈದ್ಯ ವಿರೂಪಾಕ್ಷ ದೇವರಮನೆ, ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ, ಎಂಎಂಎನ್‌ಎಲ್‌ನ ವನಿತಾ ಜಿ. ಪೈ, ಆಭರಣ ಸಮೂಹ ಸಂಸ್ಥೆಯ ಸಂಧ್ಯಾ ಕಾಮತ್‌, ಉದ್ಯಮಿಗಳಾದ ಅಜಯ್‌ ಪಿ. ಶೆಟ್ಟಿ, ರಮೇಶ್‌ ಬಂಗೇರ, ಬ್ರಹ್ಮಕುಮಾರೀಸ್‌ ಮಣಿಪಾಲ ಶಾಖೆಯ ಸಂಚಾಲಕಿ ಬಿ.ಕೆ.ಸೌರಭಾ, ಬಿ.ಕೆ. ಸುಜಾತಾ ಉಪಸ್ಥಿತರಿದ್ದರು. ಶ್ರೀನಿಧಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next