Advertisement
ಇಂಥದೊಂದು ಕೊರತೆ ನೀಗಿಸುವ ನಿಟ್ಟಿನಲ್ಲೇ ರಂಗತಂಡವೊಂದು ಶ್ರಮಿಸುತ್ತಿದೆ. 2000 ಇಸವಿಯ ಈಚಿನ ಹೊಸ ಕೃತಿಗಳನ್ನು ರಂಗಭೂಮಿ ಮೇಲೆ ತರಲೆಂದೇ ರಂಗತಂಡವೊಂದು ಪಣ ತೊಟ್ಟಿದೆ. ಇದರ ಹೆಸರೇ “ವಿಮೂವ್’. ಇದರ ರೂವಾರಿಗಳು ಅಭಿಷೇಕ್ ಐಯ್ಯಂಗಾರ್ ಮತ್ತು ರಂಗರಾಜ್ ಭಟ್ಟಾಚಾರ್ಯ ಎಂಬ ಇಬ್ಬರು ರಂಗಭೂಮಿ ಕಲಾವಿದರು. ವಿಮೋವ್ ರಂಗತಂಡ ಸ್ಥಾಪನೆಯಾಗಿದ್ದು 2006ರಲ್ಲಿ. ಇದುವರೆಗೂ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ನಾಟಕಗಳು ಸೇರಿ ಸುಮಾರು 162ಕ್ಕೂ ಹೆಚ್ಚು ನಾಟಕಗಳನ್ನು ಈ ತಂಡ ಪ್ರದರ್ಶಿಸಿದೆ. ಸದ್ಯ ಅಮೆರಿಕದಲ್ಲಿ “ಮಾಗಡಿ ಡೇಸ್’ ಎಂಬ ನಾಟಕದ ಪ್ರದರ್ಶನ ನೀಡುವಲ್ಲಿ ತಂಡ ನಿರತವಾಗಿದೆ. ಇದಲ್ಲದೇ ಈ ತಂಡ ಬೆಂಗಳೂರಿನ ರಂಗಾಸಕ್ತರು, ಕಲಾವಿದರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಂಗಭೂಮಿಗೆ ಸಂಬಂಧಿಸಿದ ಸಮಗ್ರ ಮಾಹಿತಿಗಳಿರುವ ವೆಬ್‌ಸೈಟೊಂದನ್ನೂ ತಂಡ ನಡೆಸುತ್ತಿದೆ. ಇತ್ತೀಚೆಗೆ ವಿಮೂವ್ “ನಮ್ಮ ಮೆಟ್ರೊ’ ಎಂಬ ನಾಟಕ ಪ್ರದರ್ಶಿಸಿತ್ತು. 4 ಪಾತ್ರಗಳನ್ನಿಟ್ಟುಕೊಂಡು ರಚಿಸಿದ್ದ ಈ ನಾಟಕ ಬೆಂಗಳೂರಿನ ಸದ್ಯದ ಜೀವನವನ್ನು ಬಿಂಬಿಸಿತ್ತು. ಈ ನಾಟಕಕ್ಕೆ ಅಪಾರ ಜನಮನ್ನಣೆಯೂ ದೊರೆಯಿತು. ಅದಲ್ಲದೇ ಛಿ=ಞc2 ಎಂಬ ಥ್ರಿಲ್ಲರ್ ನಾಟಕ ಪ್ರದರ್ಶಿಸಿದ್ದರು. ಇದೊಂದು ವಿಭಿನ್ನ ಪ್ರಯೋಗವಾಗಿತ್ತು. ಕೇವಲ ಸಿನಿಮಾಗಳಿಗೆ ಸೀಮಿತವಾಗಿದ್ದ ಥ್ರಿಲ್ಲರ್ ಸಬೆjಕ್ಟನ್ನು ಇವರು ರಂಗದ ಮೇಲೆ ತಂದಿದ್ದರು.
Related Articles
Advertisement
ಜನರಿಗೆ, ಅವರ ಜೀವನಕ್ಕೆ ಹತ್ತಿರವಾಗುವಂಥ ನಾಟಕಗಳನ್ನು ನೀಡುವುದೇ ನಮ್ಮ ಧ್ಯೇಯ ಎಂದು ಸಂಸ್ಥಾಪಕರೊಲ್ಲೊಬ್ಬರಾದ ಅಭಿಷೇಕ್ ಐಯ್ಯಂಗಾರ್ ಹೇಳುತ್ತಾರೆ. ನಾವು ವಿದೇಶಿ ಬರಹಗಾರರ ಕೃತಿಗಳ ಆಧಾರಿತ ನಾಟಕ ಮಾಡುವುದಿಲ್ಲ. ಭಾರತೀಯ ಬರಹಗಾರರ ಕೃತಿಗಳಿಗೇ ನಾವು ಪ್ರಾಮುಖ್ಯತೆ ನೀಡುವುದು. ಅದರಲ್ಲೂ ಆದಷ್ಟೂ ಹೊಸ ಬರಹಗಳನ್ನು ನಾವು ಆಯ್ದುಕೊಳ್ಳುತ್ತೇವೆ. ನಾವು ಆರಿಸಿಕೊಳ್ಳುವ ಕೃತಿಗಳು ಜನರ ಜೀವನಕ್ಕೆ ಹತ್ತಿರವಿರಬೇಕು. ವೇದಿಕೆ ಮೇಲೆ ತಮ್ಮನ್ನು ತಾವೇ ನೋಡಿಕೊಂಡ ಅನುಭೂತಿ ಜನರಿಗೆ ಸಿಗಬೇಕು ಎನ್ನುತ್ತಾರೆ ಅಭಿಷೇಕ್. ಆದಷ್ಟು ಹೊಸತನದ ನಾಟಕಗಳನ್ನು ನೀಡುವುದು ಈ ತಂಡದ ಧ್ಯೇಯಗಳಲ್ಲೊಂದು. ವಿಮೂವ್ ತಂಡ ಈಗ ಪ್ರದರ್ಶಿಸಿರುವ ಹಲವಾರು ನಾಟಕಗಳನ್ನು ಅಭಿಷೇಕ್ ಅವರೇ ರಚಿಸಿದ್ದಾರೆ.
ಥಿಯೇಟರ್ ಸರ್ಕಿಟ್: ಅಭಿಷೇಕ್ ಮತ್ತು ವಿಮೂವ್ ತಂಡದ ಮತ್ತೂಂದು ಕೊಡುಗೆ ಠಿಜಛಿಠಿrಛಿcಜಿrcuಜಿಠಿ.ಜಿn ಎಂಬ ವೆಬ್‌ಸೈಟ್. ಬೆಂಗಳೂರಿನ ರಂಗಭೂಮಿ ಕುರಿತ ಸಮಗ್ರ ಮಾಹಿತಿ ಈ ವೆಬ್‌ಸೈಟಲ್ಲಿ ಅಡಕವಾಗಿದೆ. ರಂಗಾಸಕ್ತರಿಗೆ ನಾಟಕ ಪ್ರದರ್ಶನ ಕುರಿತು ತಿಳಿಯಲು ಇದೊಂದು ಅತ್ಯುತ್ತಮ ವೆಬ್‌ಸೈಟ್. ಯಾವ ನಾಟಕಗಳು ಎಲ್ಲಿ ಪ್ರದರ್ಶನಗೊಳ್ಳುತ್ತಿವೆ. ನಾಟಕ ಕುರಿತ ಮಾಹಿತಿ. ಯಾವೆಲ್ಲ ಕಲಾವಿದರು ನಟಿಸುತ್ತಿದ್ದಾರೆ ಎಂಬ ಮಾಹಿತಿ ಜೊತೆ ನಾಟಕದ ವಿಮರ್ಶೆಯನ್ನು ಇಲ್ಲಿ ಓದಬಹುದು. ಅಲ್ಲದೇ ನೀವೂ ಕೂಡ ನೀವು ನೋಡಿದ ನಾಟಕದ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಇಲ್ಲಿ ಅವಕಾಶ ಇದೆ. ನೋಡುಗರಿಗಷ್ಟೇ ಅಲ್ಲ ಕಲಾವಿದರು, ರಂಗತಂಡಗಳಿಗೂ ಅಗತ್ಯ ಮಾಹಿತಿ ಇಲ್ಲಿ ಲಭ್ಯ. ನಾಟಕ ಪ್ರದರ್ಶಿಸಲು ಸಭಾಂಗಣಗಳ ಕುರಿತ ಮಾಹಿತಿ. ನಾಟಕಕ್ಕೆ ಅಗತ್ಯವಿರುವ ಪ್ರಸಾಧನ, ವಸ್ತುಗಳು ಎಲ್ಲಿ ದೊರಕುತ್ತವೆ ಮತ್ತು ಕಲಾವಿದರುಗಳ ಕುರಿತ ಮಾಹಿತಿ ಕೂಡ ಈ ವೆಬ್‌ಸೈಟ್‌ನಲ್ಲಿದೆ. -ಚೇತನ. ಜೆ.ಕೆ.