ನವ ದೆಹಲಿ : ಮಕ್ಕಳಿಗಾಗಿ ಕೋವಿಡ್ ಸೋಂಕಿನ ಲಸಿಕೆ ಸಪ್ಟೆಂಬರ್ ಹಾಗೂ ಡಿಸೆಂಬರ್ ನಲ್ಲಿ ಬಳಕೆಗೆ ಬರಬಹುದು ಎಂದು ಐಸಿಎಂಆರ್ ನ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿಯ ನಿರ್ದೇಶಕಿ ಡಾ. ಪ್ರಿಯಾ ಅಬ್ರಾಹಮ್ ಹೇಳಿದ್ದಾರೆ.
ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಒಟಿಟಿ ಚಾನೆಲ್ ನಲಲಿ ನಡೆದ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕೋವ್ಯಾಕ್ಸಿನ್ ಲಸಿಕೆಯ ಎರಡನೇ ಹಾಗೂ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಫಲಿತಾಂಶವನ್ನು ನಿರೀಕ್ಷಿಸಬಹುದು. ಸಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಮಕ್ಕಳಿಗೆ ನೀಡುವ ಲಸಿಕೆ ಬಳಕೆಗೆ ಬರಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ನೀರಿನಲ್ಲಿ ಮೈಕ್ರೊ ಪ್ಲ್ಯಾಸ್ಟಿಕ್ ಅಂಶ ಪತ್ತೆಗೆ ವಾಟರ್ ಟ್ಯಾಪ್ ಪರೀಕ್ಷೆ: ದೀಪಕ್ ಪಾವುಸ್ಕರ್
ಆದಾಗ್ಯೂ, ಕೋವ್ಯಾಕಸ್ಇನ್, ಜೈಡಸ್ ಕ್ಯಾಡಿಲ್ಲಾ ಲಸಿಕೆಗಳ ಪ್ರಾಯೋಗಿಕ ಪರೀಕ್ಷೆಗಳು ಪ್ರಗತಿಯಲ್ಲಿದೆ. ಇದಲ್ಲದೇ, ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನ ಎಂ -ಆರ್‌ಎನ್‌ಎ, ಬಯೋಲಾಜಿಕಲ್ಕ -ಇ ಲಸಿಕೆ, ಸೀರಮ್ ಇನ್ ಸ್ಟಿಟ್ಯೂಟ್ ನ ನೊವೊವಾಕ್ಸ್ ಹಾಗೂ ಮೂಗಿನ ಹೊಳ್ಳೆಗಳ ಮೂಲಕ ನೀಡುವ ಭಾರತ್ ಬಯೋಟೆಕ್ ನ ಇಂಟ್ರಾನಾಸಲ್ ಲಸಿಕೆಗಳು ಕೂಡ ಲಭ್ಯವಾಗುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು, ಡೆಲ್ಟಾ ಪ್ಲಸ್ ರೂಪಾಂತರಿ ಕೋವಿಡ್ ಸೋಂಕಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡೆಲ್ಟಾ ಸೋಂಕಿನಷ್ಟು ಹರಡುವಿಕೆಯ ಸಾಮರ್ಥ್ಯವನ್ನು ಡೆಲ್ಟಾ ಪ್ಲಸ್ ರೂಪಾಂತರಿ ಕೋವಿಡ್ ಸೋಂಕು ಹೊಂದಿಲ್ಲ. ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಈ ಬಗ್ಗೆ ಸಂಶೋಧನಾ ಅಧ್ಯಯನವನ್ನು ಕೂಡ ನಡೆಸಿದ್ದು, ಲಸಿಕೆಗಳು ರೂಪಾಂತರಿ ಸೋಂಕಿನ ವಿರುದ್ಧ ಪರಿಣಾಮಕಾರಿತ್ವ ಗುಣಗಳನ್ನು ಹೊಂದಿವೆ ಎಂದಿದ್ದಾರೆ.
ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ವಿತರಣೆಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಗೆ ಆರ್ ಬಿ ಐ ಅನುಮತಿ..!?