Advertisement

ಪಾಕ್‌ ಲಿಫ್ಟರ್‌ಗೆ ಚಾನು ಸ್ಫೂರ್ತಿ!

08:31 PM Aug 04, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಪ್ರಸಕ್ತ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾಕಿಸ್ಥಾನಕ್ಕೆ ಮೊದಲ ಚಿನ್ನದ ಪದಕ ತಂದಿತ್ತದ್ದು ವೇಟ್‌ಲಿಫ್ಟರ್‌ ನೂಹ್‌ ದಸ್ತಗೀರ್‌ ಬಟ್‌. ಅವರು 109 ಪ್ಲಸ್‌ ಕೆಜಿ ವಿಭಾಗದಲ್ಲಿ ಹಲವು ದಾಖಲೆಗಳ ಸಮೇತ ಬಂಗಾರ ಗೆದ್ದರು.

Advertisement

ಅವರ ಸಾಧನೆಗೆ ಮೊದಲ ಶುಭಾಶಯ ಹೇಳಿದ್ದು ಯಾರು ಗೊತ್ತೇ? ಭಾರತದ ಲಿಫ್ಟಿಂಗ್‌ ಸೂಪರ್‌ಸ್ಟಾರ್‌ ಮೀರಾಬಾಯಿ ಚಾನು!

ಇದರಿಂದ ದಸ್ತಗೀರ್‌ ಬಹಳ ಸಂಭ್ರಮಪಟ್ಟಿದ್ದಾರೆ. “ನಮಗೆಲ್ಲರಿಗೂ ಮೀರಾಬಾಯಿ ಚಾನು ಒಂದು ಸ್ಫೂರ್ತಿ. ದಕ್ಷಿಣ ಏಷ್ಯಾ ರಾಷ್ಟ್ರಗಳೂ ವೇಟ್‌ಲಿಫ್ಟಿಂಗ್‌ನಲ್ಲಿ ಒಲಿಂಪಿಕ್‌ ಪದಕ ಗೆಲ್ಲಬಹುದೆಂಬುದನ್ನು ತೋರಿಸಿಕೊಟ್ಟಿದ್ದೇ ಚಾನು. ಅವರು ನನಗೆ ಶುಭಾಶಯ ಕೋರಿದ್ದು ಹೆಮ್ಮೆಯ ಗಳಿಗೆ’ ಎಂದು ದಸ್ತಗೀರ್‌ ಹೇಳಿದ್ದಾರೆ.

“ನಾನು ಭಾರತೀಯ ಲಿಫ್ಟರ್‌ಗಳೊಂದಿಗೆ ವಿದೇಶಗಳಲ್ಲಿ ಹಲವು ಬಾರಿ ಅಭ್ಯಾಸ ನಡೆಸಿದ್ದೇನೆ. ಅವರೆಲ್ಲ ನನಗೆ ಅತ್ಯುತ್ತಮ ಗೆಳೆಯರು. ನಾನು ಭಾರತೀಯರೊಂದಿಗೆ ಸ್ಪರ್ಧಿಸುತ್ತಿದ್ದೇನೆಂಬ ಭಾವನೆಯೇ ಇರಲಿಲ್ಲ’ ಎನ್ನುವುದು ದಸ್ತಗೀರ್‌ ನುಡಿ.

Advertisement

Udayavani is now on Telegram. Click here to join our channel and stay updated with the latest news.

Next