ಬೆಂಗಳೂರು: ಹಲವು ದಶಕಗಳಿಂದ ಖರ್ಗೆ ಕುಟುಂಬ ಕಾಂಗ್ರೆಸ್ ಜೊತೆಗೆ ಇರುವವರು. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಈಗ ವಿಧಾನಸೌಧ ವ್ಯಾಪಾರಸೌಧ ಆಗಿಲ್ಲ. ಖರ್ಗೆ ಅವರು ಏನು ಎಂದು ನಾವು ಹೇಳಬೇಕಿಲ್ಲ. ಕಾಂಗ್ರೆಸ್ ಏನೆಂದು ನಾಡಿನ ಜನತೆಗೆ ಗೊತ್ತಿದೆ. ಅವರು ನಮಗೆ ಸರ್ಕಾರ ಹೇಗೆ ನಡೆಸಬೇಕೆಂದು ತಿಳಿಸುವುದು ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಆರ್‌ಟಿನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಿಯಾಂಕ್ ಖರ್ಗೆ ಟ್ವೀಟ್ ವಿಚಾರವಾಗಿ ತಿರುಗೇಟು ನೀಡಿದರು.
ಪಿಎಸ್‌ಐ ನೇಮಕಾತಿಯ ಅಕ್ರಮದಲ್ಲಿ ಯಾರ ಬಳಿ ಯಾವುದೇ ದಾಖಲೆಗಳು ಇದ್ದರು ನೀಡಲಿ. ಅದನ್ನು ಸಿಐಡಿ ಅಧಿಕಾರಿಗಳು ಪರಿಶೀಲಿಸುತ್ತಾರೆ. ಪ್ರಕರಣದ ಸಂಬಂಧ ಯಾವುದೇ ಹೇಳಿಕೆಗಳನ್ನು ನೀಡಿದರೂ, ಅವರೇ ಅದರ ಜವಾಬ್ದಾರಿ ಹೊರಬೇಕು ಎಂದರು.
ಇದನ್ನೂ ಓದಿ:ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ‘ಪೇಮೆಂಟ್ ಸೀಟಾ’?’ ಸಿದ್ದರಾಮಯ್ಯ ಪ್ರಶ್ನೆ
ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದ ಅವರು, ಅಮಿತ್ ಶಾ ಅವರು ಮಾತನಾಡಿ ಹೇಳುತ್ತೇವೆ ಎಂದಿದ್ದಾರೆ. ವರಿಷ್ಠರಿಂದ ಕರೆ ಬಂದರೆ ಖಂಡಿತಾ ಹೋಗುತ್ತೇನೆ ಎಂದರು.