Advertisement
ಕೃಷ್ಣಾಪುರ 7ನೇ ಬ್ಲಾಕ್‌ನಲ್ಲಿ ನಿರ್ಮಾ ಣಗೊಂಡ ಅಂಗನವಾಡಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಗನವಾಡಿ ಕೇಂದ್ರ ಇಂದು ಪ್ರಾಮುಖ್ಯವಾಗಿದ್ದು ಮಹಿಳೆಯರಿಗೆ ಅತೀ ಹೆಚ್ಚು ಸವಲತ್ತು ಇದೇ ಕೇಂದ್ರದಿಂದ ಸಿಗುತ್ತದೆ. ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರು ಮಾಡಿ ಕೊಡಲಾಗುತ್ತದೆ. ಹೀಗಾಗಿ ಇಂತಹ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಂತ ಕಟ್ಟಡ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಗಳಲ್ಲಿ ಐದು ಅತ್ಯಾಧುನಿಕ ಅಂಗನ ವಾಡಿ ಕೇಂದ್ರ ಸ್ಥಾಪಿಸಲಾಗುವುದು. ಇದಕ್ಕಾಗಿ ಶೀಘ್ರವಾಗಿ ಕೇಂದ್ರಗಳನ್ನು ಗುರುತಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಅಂಗನವಾಡಿ ಕೇಂದ್ರಗಳು ಮಕ್ಕಳ ಬೆಳವಣಿಗೆಯನ್ನು ಎಳವೆಯಲ್ಲಿ ತಿದ್ದಲು ಸಹಕಾರಿಯಾಗಿವೆ. ದೇಶಾದ್ಯಂತ ಸ್ವಚ್ಛತೆಯ ಅಭಿಯಾನ ನಡೆಯುತ್ತಿದ್ದು ಮುಂದಿನ ಜನಾಂಗಕ್ಕೆ ಸ್ವತ್ಛತೆಯನ್ನು ಜೀವನದ ಅವಿಭಾಜ್ಯ ಅಂಗವಾಗಿ ಬೆಳೆಸಿಕೊಳ್ಳುವಂತಹ ಶಿಕ್ಷಣವನ್ನು ನೀಡುವ ಜವಾಬ್ದಾರಿಯಿದೆ ಎಂದರು. ಸಮ್ಮಾನ
ಕಳೆದ ಹಲವಾರು ವರ್ಷಗಳಿಂದ ಅಂಗನವಾಡಿ ನಡೆಸಲು ಮನೆ ಯಲ್ಲಿ ಸ್ಥಳಾವಕಾಶ ಒದಗಿಸಿ ಸಹ ಕರಿಸಿದ ಗೋಪಾಲ್ ಅವರನ್ನು ಸಮ್ಮಾನಿ ಸಲಾಯಿತು. ಸ್ಥಳೀಯ ಮಾಜಿ ಮನಪಾ ಸದಸ್ಯರಾದ ಅಯಾಝ್ ಕೃಷ್ಣಾಪುರ, ಗುಣಶೇಖರ ಶೆಟ್ಟಿ, ಇಲಾಖೆಯ ಅ ಧಿಕಾರಿಗಳಾದ ಅನುಪಮಾ, ಶೋಭಾ, ಸ್ಥಳೀಯ ಮುಖಂಡರಾದ ಶಿವಪ್ರಸಾದ್ ಶೆಟ್ಟಿ, ಹಸನ್, ಖಾಲಿದ್, ಭರತ್‌ರಾಜ್ ಕೃಷ್ಣಾಪುರ, ತಿಲಕ್‌ರಾಜ್ ಅಮೀನ್, ಸುರೇಶ್, ಲೋಕೇಶ್ ಬೊಳ್ಳಾಜೆ, ಜಯಕುಮಾರ್, ಗೋಪಾಲ್, ಗುತ್ತಿಗೆದಾರ ಕಬೀರ್, ಅಂಗನವಾಡಿ ಸಹಾಯಕಿ ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.