ಹೊಸದಿಲ್ಲಿ: ಕಾಂಗ್ರೆಸ್ ಪಕ್ಷ ದೇಶದಲ್ಲಿ ಮತ್ತೆ ಯಶಸ್ಸು ಕಾಣಲು ಬಿಜೆಪಿಯಂತೆ ದೊಡ್ಡ ಮಟ್ಟದಲ್ಲಿ ಯೋಚನೆ ಮಾಡಬೇಕಾಗತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅಭಿಪ್ರಾಯಪಟ್ಟಿದ್ದಾರೆ.
ನೀವು ಸಣ್ಣವರು, ನಿಮ್ಮ ಗಾತ್ರ ಚಿಕ್ಕದು ಅಥವಾ ಒಂದು ಪ್ರದೇಶದಲ್ಲಿ ದೊಡ್ಡದಾಗಿ ಏನೂ ಸಾಧಿಸಲು ಸಾಧ್ಯವಾಗದು ಎಂದು ನಾವು ಯಾವತ್ತೂ ಭಾವಿಸಬಾರದು. ಇದು ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಚುನಾವಣೆಯಿಂದ ನಾವು ಅರ್ಥಮಾಡಿಕೊಳ್ಳಬೇಕು ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಬ್ಲ್ಯಾಕ್ ಫಂಗಸ್ ಬಾಧೆ ಹೆಚ್ಚಳ : 98 ಮಂದಿಯಲ್ಲಿ ಕಪ್ಪು ಶಿಲೀಂಧ್ರ ರೋಗ ಪತ್ತೆ
ಬಿಜೆಪಿಯವರು ದೊಡ್ಡ ಮಟ್ಟದಲ್ಲಿ ಯೋಚನೆ ಮಾಡುತ್ತಿದ್ದಾರ. ತಮ್ಮ ಅಸ್ತಿತ್ವವೇ ಇಲ್ಲದ ಕಡೆಯಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲು ಅವರು ಪ್ರಯತ್ನ ಪಡುತ್ತಿದ್ದಾರೆ ಎಂದು ಖುರ್ಷಿದ್ ಹೇಳಿದ್ದಾರೆ.
ನಾವು ಹಲವು ಕಡೆ ಸೋತಿದ್ದೇವೆಂದು ಅಥವಾ ಇನ್ನೆಂದೂ ಮೇಲೇಳಲಾಗದು ಎಂದು ನಿರಾಶಾವಾದದ ಧೋರಣೆ ಕಾಂಗ್ರೆಸ್ ಗೆ ಸಲ್ಲದು. ನಾವು ಆತ್ಮವಿಶ್ವಾಸದಿಂದ ಮತ್ತು ಬದ್ಧತೆಯಿಂದ ಯೋಚಿಸಬೇಕಿದೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.