ರಾಮನಗರ: ಶಿಕ್ಷಕರ ಕೊರತೆ ಇರುವುದು ನಿಜ. ನನ್ನ ಕ್ಷೇತ್ರ ಮಾತ್ರವಲ್ಲದೆ ಜಿಲ್ಲೆ, ರಾಜ್ಯದಲ್ಲೂ ಶಿಕ್ಷಕರ ಕೊರತೆಯಿದೆ. ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ನೇಮಕವಾಗಬೇಕು. ಅದನ್ನು ಕೂತು ಚರ್ಚೆ ಮಾಡುತ್ತೇವೆ. ಶಿಕ್ಷಣ ವ್ಯವಸ್ಥೆಗೆ ನಮ್ಮದೇಯಾದ ಆಲೋಚನೆಗಳಿವೆ. ಅದನ್ನು ಜಾರಿ ಮಾಡಲು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ಸಿಗಬೇಕು. ಸಣ್ಣಸಣ್ಣ ಶಾಲೆಗಳನ್ನು ಒಗ್ಗೂಡಿಸಿ ಪಬ್ಲಿಕ್ ಶಾಲೆ ಮಾದರಿ ಶಾಲೆಗಳ ನಿರ್ಮಾಣವಾಗಬೇಕು. ಇದಕ್ಕೆ ಸಿಎಸ್ಆರ್ ಫಂಡ್ ಹಾಗೂ ಸಂಘಸಂಸ್ಥೆಗಳ ಜೊತೆಗೂಡಿ ಯೋಜನೆ ಮಾಡುತ್ತೇವೆ ಎಂದರು.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರವಾಗಿ ಮಾತನಾಡಿದ ಅವರು, ಕನಕಪುರಕ್ಕೆ ಮೊದಲೇ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಎಚ್ಡಿಕೆ ಸಿಎಂ ಆಗಿದ್ದಾಗ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಎಸ್ಟಿಮೇಟ್, ಟೆಂಡರ್ ಆಗಿ ಎಲ್ಲಾ ಕೆಲಸ ಮುಗಿದಿತ್ತು. ಈಗ ಎರಡೂ ಕಡೆಗೂ ಮೆಡಿಕಲ್ ಕಾಲೇಜು ಅವಶ್ಯಕತೆಯಿದೆ. ಕನಕಪುರದಲ್ಲಿ ನಿರ್ಮಾಣವಾಗುತ್ತಿರುವ ಕಾಲೇಜು ರಾಮನಗರಕ್ಕೆ ಸಮೀಪವೇ ಇದೆ. ಅಲ್ಲೂ ಕಾಲೇಜು ಮಾಡಬೇಕು, ಇಲ್ಲೂ ಕಾಲೇಜು ಮಾಡಬೇಕು. ರಾಮನಗರದಲ್ಲಿ ಯೂರ್ನಿವರ್ಸಿಟಿ ಆಗುತ್ತದೆ. ಆದರೆ ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಎಂದಿದೆ. ಅದನ್ನು ಕನಕಪುರದಲ್ಲಾದರೂ ಮಾಡುತ್ತೇವೆ, ರಾಮನಗರದಲ್ಲಾದರೂ ಮಾಡುತ್ತೇವೆ. ಮೆಡಿಕಲ್ ಕಾಲೇಜಿಗೆ ರಾಮನಗರದಲ್ಲೂ ಟೆಂಡರ್ ಆಗಿದೆ, ಕನಕಪುರದಲ್ಲೂ ಟೆಂಡರ್ ಆಗಿದೆ. ನನ್ನ ಆದ್ಯತೆ ಮೊದಲು ರಾಮನಗರಕ್ಕೆ, ಕನಕಪುರಕ್ಕೆ ನಂತರ ಎಂದರು.
ಇದನ್ನೂ ಓದಿ:ODI World Cup: ಭಾರತ ತಂಡ ಪ್ರಕಟ; ಕೆಎಲ್ ರಾಹುಲ್ ಗೆ ಸ್ಥಾನ; ಅನುಭವಿಗಳಿಗೆ ಸಿಗದ ಅವಕಾಶ
ರಾಜಕೀಯಕ್ಕೆ ಬಂದ್ ಮಾಡ್ತಿದ್ದಾರೆ. ಬಂದ್ ಮಾಡುವವರನ್ನು ಬೇಡ ಎನ್ನಲು ಆಗುತ್ತಾ.? ಹಾದಿಲಿ ಬೀದಿಲಿ ಮಾತನಾಡುವವರಿಗೆ ಉತ್ತರ ಕೊಡಲ್ಲ. ರಾಮನಗರದಲ್ಲಿ ಈಗಾಗಲೇ ದೊಡ್ಡ ಆಸ್ಪತ್ರೆಯಿದೆ. ರಾಮನಗರ, ಕನಕಪುರ ಎರಡೂ ಕಡೆ ರಾಜೀವ್ ಗಾಂಧಿ ವಿವಿಯ ಕಟ್ಟಡ ಇರಲಿದೆ. ಅವರಿಗೆ ಸಿಗಬೇಕಾದುದ್ದು ಅವರಿಗೆ ಸಿಗುತ್ತದೆ, ನಮಗೆ ಸಿಗಬೇಕಾದುದ್ದು ನಮಗೆ ಸಿಗುತ್ತದೆ ಎಂದು ಮೆಡಿಕಲ್ ಕಾಲೇಜು ಸ್ಥಳಾಂತರದ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂಥಹ ಉತ್ತರ ನೀಡಿದರು.
ಸೆ.7ಕ್ಕೆ ಭಾರತ್ ಜೋಡೊ ಯಾತ್ರೆ ಒಂದು ವರ್ಷ ಪೂರ್ಣ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ಇದರ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಕಾಲ್ನಡಿಗೆ ಮಾಡಲಿದ್ದೇವೆ. ಸಿಎಂ ಸಿದ್ದರಾಮಯ್ಯ, ನಾನು ಹಾಗೂ ಕೆಲ ಸಚಿವರು ಒಂದು ಗಂಟೆಗಳ ಕಾಲ ನಡೆಯುತ್ತೇವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಹಿನ್ನೆಲೆ ರಾಮನಗರದಲ್ಲಿ ಕಾಲ್ನಡಿಗೆ ಮಾಡುತ್ತೇವೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಕಾಲ್ನಡಿಗೆ ಮಾಡಬೇಕು ಎಂದರು.