Advertisement

ಚೀನ ಏಕಪಕ್ಷೀಯವಾಗಿ ಎಲ್‌ಎಸಿ ಬದಲಾಯಿಸಿದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಭಾರತ ಸ್ಪಷ್ಟನೆ

08:22 PM Sep 29, 2020 | Karthik A |

ಮಣಿಪಾಲ: 1959ರಲ್ಲಿ ಚೀನ ಏಕಪಕ್ಷೀಯವಾಗಿ ನಿರ್ಧರಿಸಿದ ಎಲ್‌ಎಸಿಯನ್ನು ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಭಾರತ ಮಂಗಳವಾರ ಚೀನಕ್ಕೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ. ಮಾಧ್ಯಮ ವರದಿಯೊಂದರಲ್ಲಿ ಕೇಳಿದ ಪ್ರಶ್ನೆಯೊಂದರಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಈ ವಿಷಯ ತಿಳಿಸಿದೆ.

Advertisement

ಎಲ್‌ಎಸಿ ಬಗ್ಗೆ ನಮ್ಮ ನಿಲುವು ಬಹಳ ಹಿಂದಿನಿಂದಲೂ ಒಂದೇ ಆಗಿದೆ‌. ಮಾತ್ರವಲ್ಲದೇ ಅದು ಅದು ಚೀನಕ್ಕೆ ತಿಳಿದಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.

1993ರಲ್ಲಿ ಎಲ್‌ಎಸಿಯಲ್ಲಿ ಶಾಂತಿ ಕಾಪಾಡುವ ಒಪ್ಪಂದ ಮಾಡಿಕೊಂಡಿತ್ತು. 1996ರಲ್ಲಿ ಉಭಯ ದೇಶಗಳು ಯುದ್ಧ ವಲಯದಲ್ಲಿ ಶಾಂತಿ ಸ್ಥಾಪಿಸುವ ಒಪ್ಪಂದಕ್ಕೆ ಬಂದವು. 2005ರಲ್ಲಿ ಭಾರತ-ಚೀನ ನಡುವೆ ಗಡಿ ಸಮಸ್ಯೆಯನ್ನು ಪರಿಹರಿಸಲು ಮಾರ್ಗಸೂಚಿಗಳನ್ನು ರೂಪಿಸುವ ಒಪ್ಪಂದ ಏರ್ಪಟ್ಟಿತ್ತು. ಈ ಒಪ್ಪಂದಗಳಲ್ಲಿ ಉಭಯ ದೇಶಗಳು ಎಲ್‌ಎಸಿಯ ಸಾಮಾನ್ಯ ಸ್ವರೂಪವನ್ನು ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ.

2003ರ ವರೆಗೆ ಎಲ್‌ಎಸಿಯನ್ನು ನಿರ್ಧರಿಸಲು ಉಭಯ ದೇಶಗಳು ಪ್ರಯತ್ನ ಪಟ್ಟಿದ್ದವು. ಆದರೆ ಅನಂತರ ಈ ಪ್ರಕ್ರಿಯೆಯು ಮುಂದುವರಿಯಲಿಲ್ಲ.  ಏಕೆಂದರೆ ಚೀನ ಅದನ್ನು ಮುಂದೆ ತೆಗೆದುಕೊಳ್ಳಲು ಆಸಕ್ತಿ ತೋರಿಸಿಲ್ಲ. ಈಗ ಕೇವಲ ಒಂದು ಎಲ್‌ಎಸಿ ಇದೆ ಎಂದು ಚೀನ ಹೇಳುತ್ತಿದ್ದು, ಇದು ಮೊದಲು ಮಾಡಿದ ಒಪ್ಪಂದಗಳ ಉಲ್ಲಂಘನೆಯಾಗಿದೆ. ಮತ್ತೂಂದೆಡೆ ಭಾರತ ಯಾವಾಗಲೂ ಈ ಒಪ್ಪಂದಗಳನ್ನು ಗೌರವಿಸುತ್ತಾ ಬಂದಿದೆ ಮತ್ತು ಗಡಿಯಲ್ಲಿ ಶಾಂತಿಯನ್ನು ಕಾಪಾಡುತ್ತಾ ಬಂದಿದೆ ಎಂದು ಶ್ರೀವಾಸ್ತವ್‌ ಹೇಳಿದ್ದಾರೆ.

ಎಲ್‌ಎಸಿಯನ್ನು ಅನೇಕ ಸ್ಥಳಗಳಲ್ಲಿ ಬದಲಾಯಿಸಲು ಮತ್ತು ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಚೀನ ಹಲವು ಯತ್ನಗಳನ್ನು ನಡೆಸಿವೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸಂಸತ್ತಿನಲ್ಲಿ ಹೇಳಿದ್ದರು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next