Advertisement

ನಮಗೇ ಬಹುಮತ: ತಮಿಳುನಾಡು ಸಿಎಂ ಘೋಷಣೆ

08:05 AM Sep 06, 2017 | Harsha Rao |

ಚೆನ್ನೈ: ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಬಣ ವಿಧಾನಸಭೆಯಲ್ಲಿ ತಮಗೇ ಬಹುಮತ ಎಂದು ಮಂಗಳವಾರ ಘೋಷಿಸಿಕೊಂಡಿದೆ. ಒಟ್ಟು 124 ಶಾಸಕರ ಬೆಂಬಲ ತಮಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಮಾಜಿ ಸಿಎಂ ಪನ್ನೀರ್‌ಸೆಲ್ವಂ ಮತ್ತು ಹಾಲಿ ಸಿಎಂ ಬಣದ ಶಾಸಕರ ಸಭೆ ಚೆನ್ನೈನಲ್ಲಿ ಮಂಗಳವಾರ ನಡೆದಿತ್ತು.

Advertisement

ದಿನಕರನ್‌ ಬಣದಲ್ಲಿದ್ದ 24 ಶಾಸಕರ ಪೈಕಿ 9 ಮಂದಿ ಸಿಎಂ ಬಣಕ್ಕೆ ನಿಷ್ಠೆ ಬದಲು ಮಾಡಿದ್ದರಿಂದ ಈ ಬೆಳವಣಿಗೆಯಾಗಿದೆ. ಪಳನಿಸ್ವಾಮಿ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ನಡುವೆಯೇ ಸರ್ಕಾರದ ಪರ ಬೆಂಬಲ ಹೆಚ್ಚಿದೆ. ಆ.28ರಂದು ನಡೆದಿದ್ದ ಸಭೆಯಲ್ಲಿ ಹಾಜರಿದ್ದದ್ದು ಕೇವಲ 75 ಮಂದಿ ಮಾತ್ರ. ಆದರೆ, ಮಂಗಳವಾರದ ಸಭೆಯಲ್ಲಿ 111 ಮಂದಿ ಶಾಸಕರು ಭಾಗಿಯಾಗಿದ್ದರು.

ಇದೇ ವೇಳೆ ದಿನಕರನ್‌ ಬಣದ ಶಾಸಕರು ಸ್ಪೀಕರ್‌ ಮುಂದೆ ಹಾಜರಾಗಲು ಇನ್ನೂ 15 ದಿನಗಳ ಕಾಲಾವಕಾಶ ಕೇಳಿದ್ದಾರೆ. ಅವರನ್ನು ಏಕೆ ವಜಾ ಮಾಡಬಾರದೆಂದು ಸ್ಪೀಕರ್‌ ಧನಪಾಲನ್‌ ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸಿ, ಅವಧಿ ಕೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next