ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪೆನ್ ಡ್ರೈವ್ ‘ಅಸ್ತ್ರ’ಕ್ಕೆ ಪ್ರತ್ಯಸ್ತ್ರ ಪ್ರಯೋಗಿಸಿರುವ ಕಾಂಗ್ರೆಸ್, ತನ್ನ ಬಳಿಯೂ ಬಿಜೆಪಿ ಮತ್ತು ಎಚ್ಡಿಕೆ ಸೇರಿದಂತೆ ಜೆಡಿಎಸ್ ನ ಕರ್ಮಕಾಂಡದ ಪೆನ್ ಡ್ರೈವ್ ಇದೆ ಎಂದು ತಿರುಗೇಟು ನೀಡಿದೆ.
ಕುಮಾರಸ್ವಾಮಿ ಬಿಡುಗಡೆ ಮಾಡಿದ ಒಂದೇ ತಾಸಿನಲ್ಲಿ ನಾವು ಕೂಡ ಪಂಚತಾರಾ ಹೋಟೆಲ್ ನಲ್ಲಿಯ ವಹಿವಾಟು ಏನು ಎಂಬುದನ್ನು ನಾವು ತೋರಿಸ್ತೀವಿ. ಈ ಪೆನ್ ಡ್ರೈವ್ ಗಳ ಪ್ರಸಾರದ ಜಾಗವನ್ನು ಸ್ವತಃ ಕುಮಾರಸ್ವಾಮಿ ನಿಗದಿಪಡಿಸಲಿ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಪಂಥಾಹ್ವಾನ ನೀಡಿದರು.
ಇದನ್ನೂ ಓದಿ:ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್; ಅಳುತ್ತಲೇ ನಿರ್ಧಾರ ಪ್ರಕಟಿಸಿದ ಬಾಂಗ್ಲಾ ನಾಯಕ
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯಿಂದ ಸುಪಾರಿ ತೆಗೆದುಕೊಂಡಿರುವ ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ಧ ಬೇಕಾಬಿಟ್ಟಿ ಆರೋಪ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಬುಟ್ಟಿಯಲ್ಲಿರುವ ಹಾವನ್ನು ಕುಮಾರಸ್ವಾಮಿ ಅವರು ಬಿಡಲಿ, ನಮ್ಮ ಬುಟ್ಟಿಯಲ್ಲಿರುವ ಹಾವನ್ನು ನಾವು ಬಿಡುತ್ತೇವೆ ಎಂದು ಸವಾಲು ಹಾಕಿದರು