Advertisement

Mangaluru ಹಿಂದಿನ ಸರಕಾರದ ತಪ್ಪನ್ನು ಸರಿಪಡಿಸಿದ್ದೇವೆ: ಬೈರತಿ ಸುರೇಶ್‌

11:14 PM Nov 24, 2023 | Team Udayavani |

ಮಂಗಳೂರು: ಡಿ.ಕೆ. ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಸರಕಾರ ನೀಡಿದ್ದ ಅನುಮತಿಯನ್ನು ವಾಪಸ್‌ ಪಡೆಯಲು ಸಚಿವ ಸಂಪುಟ ನಿರ್ಧರಿಸಿರುವುದು ಸೂಕ್ತವಾಗಿದೆ. ತಪ್ಪು ನಿರ್ಧಾರವನ್ನು ಹಿಂದಿನ ಸರಕಾರ ಕೈಗೊಂಡಿತ್ತು ಎಂದು ಅಡ್ವೊಕೇಟ್‌ ಜನರಲ್‌ ವರದಿ ನೀಡಿದ್ದಾರೆ. ಸಚಿವ ಸಂಪುಟಕ್ಕೂ ಇದು ಹೌದು ಅನಿಸಿದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್‌ ಬಿ.ಎಸ್‌. ಹೇಳಿದರು.

Advertisement

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ನಿರ್ಧಾರ ಸಿಬಿಐಗೆ ಬಿಟ್ಟದ್ದು, ಅವರು ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಬಿಜೆಪಿಯವರು ಪ್ರಾಮಾಣಿಕರಾಗಿದ್ದರೆ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯ ಕೇಳಬೇಕಿತ್ತು ಎಂದರು.

ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ ಸೇರ್ಪಡೆಗೆ ನಿರ್ಧಾರ ಕೈಗೊಂಡವರು ಹಿಂದೇಟು ಹಾಕುತ್ತಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಒಬ್ಬ ವ್ಯಕ್ತಿಯಿಂದ ಆ ರೀತಿಯ ಬದಲಾವಣೆಯಾಗದು. ಕಾಂಗ್ರೆಸ್‌ ಸೇರಲು ಮನಸ್ಸು ಮಾಡಿದವರು ಬಂದೇ ಬರುತ್ತಾರೆ ಎಂದರು.

ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ಮತ್ತು ಸರಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಜಾತಿಗಣತಿ ವರದಿಯ ಮೂಲಪ್ರತಿ ಕಾಣೆಯಾಗಿಲ್ಲ. ವರದಿ ಸರಕಾರ ಕೈಸೇರಿದ ಬಳಿಕವೇ ಯಾವ ಜಾತಿಯ ಎಷ್ಟು ಜನಸಂಖ್ಯೆ ಇದೆ ಎಂಬುದು ತಿಳಿಯಲಿದೆ. ವರದಿ ಪಡೆದು ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next