Advertisement
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ಪರೀಕ್ಷೆ ಅಕ್ರಮದ ಬಗ್ಗೆ ಪ್ರಾಮಾಣಿಕ ತನಿಖೆ ನಡೆಯುತ್ತಿದೆ. ಆರೋಪಿಗಳ ಬಂಧನ ಕೂಡ ಮಾಡಲಾಗಿದೆ. ಬೇರೆ ಬೇರೆ ರೀತಿಯಲ್ಲಿ ತಂತ್ರಜ್ಞಾನ ಬಳಸಿ, ಅಕ್ರಮ ಮಾಡಿದ್ದಾರೆ. ಮರುಪರೀಕ್ಷೆ ಮಾಡೋದು ಸರ್ಕಾರಕ್ಕೆ ಅನಿವಾರ್ಯ ಎಂದರು.
Related Articles
Advertisement
ಅಕ್ರಮ ಮಾಡುವವರಿಗೆ ತಕ್ಕ ಪಾಠ ಆಗಬೇಕು. ಆ ನಿಟ್ಟಿನಲ್ಲಿ ಸಹ ಕಾನೂನು ತಿದ್ದುಪಡಿ ಮಾಡುತ್ತೇವೆ. ಕಷ್ಟಪಟ್ಟು ಓದಿದವರಿಗೆ ಅನುಕೂಲ ಆಗಬೇಕು. ಹಣ ಕೊಟ್ಟು ಕೊಂಡು ಕೊಳ್ಳುವವರಿಗೆ ಅಲ್ಲ ಎಂದು ಗೃಹ ಸಚಿವರು ಹೇಳಿದರು.
ನನ್ನನ್ನು ಅರೆಸ್ಟ್ ಮಾಡಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಉತ್ತರಿಸಿದ ಗೃಹ ಸಚಿವರು, ಪ್ರಿಯಾಂಕ್ ಖರ್ಗೆ ಸಿಐಡಿ ನೋಟಿಸ್ ನೀಡಿದರು ಬಂದಿಲ್ಲ. ಅವರ ಬಳಿ ಸಾಕ್ಷಿಗಳಿದ್ದರೆ ಸಿಐಡಿಗೆ ನೀಡಲಿ. ಮಾಧ್ಯಮದವರ ಮುಂದೆ ಅಲ್ಲ. ಅದನ್ನು ಬಿಟ್ಪು ಕೇವಲ ಈ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ದಾಖಲೆಗಳನ್ನು ತನಿಖಾಧಿಕಾರಿಯ ಮುಂದೆ ಕೊಡದೇ ಪಲಾಯನ ಮಾಡುತ್ತಿದ್ದಾರೆ. ಅವರಿಗೆ ರಾಜಕೀಯ ಲಾಭ ಬೇಕು. ಪ್ರಾಮಾಣಿಕ ತನಿಖೆ ಅವರಿಗೆ ಬೇಡವಾಗಿದೆ ಎಂದು ಟೀಕಿಸಿದರು.