Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಸಮಾಜ , ದೇಶ, ವಿಶ್ವ ಕೋವಿಡ್ ಸಾಂಕ್ರಾಮಿಕ ರೋಗ ನಿವಾರಣೆ ಮಾಡುವ ಕಡೆ ಗಮನ ಕೊಡುತ್ತಿದೆ. ಎಲ್ಲಾ ರೀತಿಯ ಸೌಕರ್ಯ ಅವಶ್ಯಕತೆ ಇದೆ. ಬೇಡಿಕೆಗೆ ತಕ್ಕಂತೆ ಅವಶ್ಯಕತೆಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಕೆಲಸ ಸಮರ್ಥವಾಗಿ ನಡೆಯುತ್ತಿದೆ. ಪ್ರತಿಯೊಬ್ಬ ಸೋಂಕಿತನಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಮಾತ್ರೆ, ಔಷಧ, ಆಹಾರ ಎಲ್ಲವನ್ನು ನೀಡಲಾಗುತ್ತಿದೆ ಎಂದರು.
Related Articles
Advertisement
24 ಗಂಟೆ ಒಳಗೆ ಈ ಆರ್ ಟಿ ಪಿ ಎಸ್ ರಿಪೋರ್ಟ್ ಕೊಡಬೇಕು. ಇದನ್ನು ಕೆಲವು ಗಂಟೆಗಳಲ್ಲಿ ಕೊಡುವ ಕೆಲಸ ಆಗ್ತಿದೆ. ಕೋವಿಡ್ ಲಕ್ಷಣಗಳು ಮೀರಿ ಜೀವಕ್ಕೆ ಅಪಾಯ ಆಗುತ್ತಿದೆ. ಈ ಎಲ್ಲಾ ಸಮಸ್ಯೆ ನಿವಾರಣೆ ಮಾಡುತ್ತಿದ್ದೇವೆ. ರಾಜ್ಯದ ಎಲ್ಲಾ ಕಡೆ ಔಷಧ ಮಾತ್ರೆಗಳನ್ನು ಸಂಪೂರ್ಣವಾಗಿ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಇನ್ನೂ ಎರಡು ದಿನಗಳಲ್ಲಿ ಅದನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತೇವೆ.
15 ಕೋಟಿ ಲಸಿಕೆಗಳನ್ನು ಈಗಾಗಲೇ ಕೊಟ್ಟಿದೆ. 1 ಕೋಟಿ ಲಸಿಕೆ ನಮ್ಮ ರಾಜ್ಯಕ್ಕೆ ಕೊಟ್ಟಿದೆ. ಅಂಕಿಅಂಶಗಳನ್ನು ನೋಡಿದಾಗ ನಮಗೆ ಕಚ್ಚಾ ಮೆಟಿರಿಯಲ್ ಬೇರೆ ಬೇರೆ ದೇಶದ ಜೊತೆಗೆ ಮಾತಾಡಿ ನಮಗೆ ಕೊಟ್ಟಿದ್ದಾರೆ. ಎಲ್ಲಾ ವ್ಯಾಕ್ಸಿನ್ ಕೊಡಲು ಸರ್ಕಾರ ಆರ್ಥಿಕ ಸಹಾಯ ಮಾಡಿದೆ. ಜುಲೈ ತಿಂಗಳಿಗೆ ಹೆಚ್ಚು ಹೆಚ್ಚು ವ್ಯಾಕ್ಸಿನ್ ತಯಾರಿಗೆ ಮಾಡಲಾಗುತ್ತಿದೆ. 17 ರಿಂದ 18 ಕೋಟಿ ವ್ಯಾಕ್ಸಿನ್ ತಯಾರಿಕೆ ಆಗುತ್ತಿದೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಜನ ಸಂಖ್ಯೆ ಇದೆ. ಎಲ್ಲಾ ಸವಾಲುಗಳನ್ನು ಎದುರಿಸಲಾಗುತ್ತಿದೆ.
2000 ಕೋವಿಡ್ ಕೇರ್ ಸೆಂಟರ್ ಇವೆ ಅವೆಲ್ಲವೂ ಸ್ಟೆಪ್ ಡೌನ್ ಆಸ್ಪತ್ರೆಗಳು. ಸರ್ಕಾರ ಕೋವಿಡ್ ಕೇರ್ ಸೆಂಟರ್ ಗಳನ್ನು ಕೂಡ ಮಾಡಲಾಗಿದೆ. ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಮಾಡಿ ರೋಗಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ರೋಗಿಗಳು ನೇರ ಆಸ್ಪತ್ರೆಗಳು ಬರುವುದಕ್ಕೆ ಆಗಿಲ್ಲ ಅಂದ್ರೆ ಅವರಿಗೆ ನೇರ ಮನೆಗೆ ಹೋಗಿ ಟ್ರೀಟ್ಮೇಂಟ್ ಕೊಡುತ್ತೇವೆ.
ಖಾಸಗಿ ಆಸ್ಪತ್ರೆಗಳಿಗೆ ಕೂಡ ಆರ್ಥಿಕ ಸಹಾಯ ಮಾಡುತ್ತೇವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕೂಡ ಉತ್ತಮ ಕಾರ್ಯ ನಿರ್ವಹಿಸುತ್ತಿವೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದರು.