Advertisement

ಲೋಕಾಯುಕ್ತ ದಾಳಿ ವೇಳೆ ಸಿಕ್ಕ ಹಣ ನಾವು ಸಂಪಾದಿಸಿದ್ದು;ಗಳಗಳನೆ ಅತ್ತ ಮಾಡಾಳ್ ವಿರೂಪಾಕ್ಷಪ್ಪ!

06:27 PM Mar 07, 2023 | Team Udayavani |

ದಾವಣಗೆರೆ:ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಮಂಗಳವಾರ (ಮಾರ್ಚ್ 07) ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಮಂಜೂರಾದ ಬೆನ್ನಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ನಾನೆಲ್ಲೂ ಓಡಿ ಹೋಗಿಲ್ಲ, ಊರಿನಲ್ಲೇ ಇದ್ದೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಇದನ್ನೂ ಓದಿ:ನೆಲದ ಸೊಗಡಿನ ಪ್ರಿ ವೆಡ್ಡಿಂಗ್ ಫೋಟೋ ಶೂಟ್; ನೋಡಿದವರಿಗೆ ಮೋಡಿ ಮಾಡಿದ‌ ಜೋಡಿ

ಲೋಕಾಯುಕ್ತ ದಾಳಿ ನಡೆಸಿದ ವೇಳೆ ಮನೆಯಲ್ಲಿ ಪತ್ತೆಯಾಗಿರುವ ನಗದು ನಾವು ಸಂಪಾದಿಸಿದ ಹಣವಾಗಿದೆ. ಅದಕ್ಕೆ ಅಗತ್ಯವಾದ ದಾಖಲೆ ಒದಗಿಸಲು ನಾನು ಸಿದ್ಧನಿದ್ದೇನೆ ಎಂದು ಮಾಡಾಳ್ ತಿಳಿಸಿದ್ದಾರೆ.

ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿರುವ ಸುದ್ದಿ ತಿಳಿದ ನಂತರ ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿದ್ದ ಮಾಡಾಳ್ ವಿರೂಪಾಕ್ಷಪ್ಪ ಹುಟ್ಟೂರು ಚನ್ನೇಶಪುರದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಡಾಳ್ ಬೆಂಬಲಿಗರು ಹೂ ಹಾರ ಹಾಕಿ ಸ್ವಾಗತಿಸಿ ಮೆರವಣಿಗೆ ಮೂಲಕ ಕರೆದುಕೊಂಡು ಬಂದಿದ್ದಾರೆ.

“ನಾನು ಕೆಎಸ್ ಡಿಎಲ್ ಅಧ್ಯಕ್ಷನಾಗಿ ಯಾವುದೇ ಅಕ್ರಮ ವಹಿವಾಟು ನಡೆಸಿಲ್ಲ. ನಮ್ಮ ಅಡಕೆ ತೋಟ, ಕ್ರಷರ್ ನಿಂದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೇವು. ಲೋಕಾಯುಕ್ತ ದಾಳಿ ವೇಳೆ ಈ ಹಣವನ್ನು ಪತ್ತೆಹಚ್ಚಿದ್ದಾರೆ. ಆ ಹಣಕ್ಕೆ ನನ್ನ ಬಳಿ ದಾಖಲೆ ಇದ್ದು, ಅದನ್ನು ನೀಡುತ್ತೇನೆ” ಮಾಡಾಳ್ ತಿಳಿಸಿದ್ದಾರೆ.

Advertisement

ಪ್ರಕರಣದ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದು, ಹೈಕೋರ್ಟ್ ಆದೇಶದಂತೆ 48ಗಂಟೆಯೊಳಗೆ ತನಿಖಾಧಿಕಾರಿ ಎದುರು ಹಾಜರಾಗುತ್ತೇನೆ ಎಂದು ಮಾಡಾಳ್ ಹೇಳಿದರು.

ಮೆರವಣಿಗೆ ನಿಲ್ಲಿಸಿ-ಕಟೀಲ್ ಸೂಚನೆ; ಗಳಗಳನೆ ಅತ್ತ ಮಾಡಾಳ್

ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಮಾಡಾಳ್ ವಿರೂಪಾಕ್ಷಪ್ಪ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂದರ್ಭದಲ್ಲಿ ಬೆಂಬಲಿಗರು ಹೂ ಹಾರ ಹಾಕಿ ಸ್ವಾಗತಿಸಿ, ಮೆರವಣಿಗೆ ಮೂಲಕ ಕರೆತಂದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ದೂರು ಕರೆ ಮಾಡಿ, ಮೆರವಣಿಗೆ ಕೂಡಲೇ ನಿಲ್ಲಿಸಿ ಎಂದು ಸೂಚನೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತ, ನನ್ನನ್ನು ಪಕ್ಷದಿಂದ ಉಚ್ಛಾಟಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದರು. ನನ್ನ ಪಕ್ಷದಿಂದ ಉಚ್ಛಾಟಿಸಿದರೂ ಬೇಸರವಿಲ್ಲ. ನನಗೆ ಬಿಜೆಪಿ ಪಕ್ಷ ತಾಯಿ ಇದ್ದಂತೆ ಎಂದು ಹೇಳುತ್ತಾ ಗಳಗಳನೆ ಅತ್ತ ಪ್ರಸಂಗ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next