Advertisement

ನಮ್ಮೂರಲ್ಲಿ ಕ್ವಾರಂಟೈನ್‌ ಕೇಂದ್ರ ಬೇಡ; ಸ್ಥಳೀಯರ ವಿರೋಧ, ಅಧಿಕಾರಿಗಳ ಮನವೊಲಿಕೆ ವಿಫ‌ಲ

11:45 AM Jul 23, 2020 | mahesh |

ನೆಲಮಂಗಲ: ವಿದೇಶದಿಂದ ಬಂದವರ ಕ್ವಾರಂಟೈನ್‌ಗೆ ತಾಲೂಕಿನ ಜನ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ನಗರದ ಜಯನಗರ ಹಾಗೂ ವಾಜರಹಳ್ಳಿಯ ಮಾರುತಿ ನಗರಗಳ ಹಾಸ್ಟೆಲ್‌ ನಲ್ಲಿ ವಿದೇಶದಿಂದ ಬಂದವರ ಕ್ವಾರಂಟೈನ್‌ಗೆ ವಿರೋಧ ವ್ಯಕ್ತಪಡಿಸಿ ಬಸ್‌ ತಡೆದು ಪ್ರತಿಭಟನೆ ಮಾಡಿದರು. ತಡವಾಗಿ ಬಂದ ಪೊಲೀಸರು, ತಹಶೀಲ್ದಾರ್‌ ಮಧ್ಯೆ ಪ್ರವೇಶಿಸಿ ಮನವೊಲಿಸಲು ಪ್ರಯತ್ನಪಟ್ಟರೂ ಜನ ಮಾತ್ರ ಕ್ವಾರಂಟೈನ್‌ಗೆ ಬಿಡುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾದಾಗ, ಲೋಹಿತ್‌ನಗರದ ಸರ್ಕಾರಿ ಹಾಸ್ಟೆಲ್‌ನಲ್ಲಿ 59ಜನರನ್ನು ಹಾಗೂ ದೊಡ್ಡಬಳ್ಳಾಪುರದ ಹಾಸ್ಟೆಲ್‌ಗೆ 20ಜನರನ್ನು
ಸ್ಥಳಾಂತರಿಸಲಾಗಿದೆ.

Advertisement

ಮಾಲಿಕರ ಬೀಗ: ತಾಲೂಕಿನ ಹಲವು ಸರ್ಕಾರಿ ಹಾಸ್ಟೆಲ್‌ಗ‌ಳನ್ನು ಖಾಸಗಿ ವ್ಯಕ್ತಿಗಳ ಕಟ್ಟಡಗಳಲ್ಲಿ ಬಾಡಿಗೆಗೆ ತೆಗೆದುಕೊಳ್ಳಲಾಗಿದೆ. ಆದರೆ, ವಿದೇಶದಿಂದ ಬಂದವರನ್ನು ಕ್ವಾರಂಟೈನ್‌ ಮಾಡುತ್ತಾರೆ ಎಂದು ಮಾಲಿಕರು ಕಟ್ಟಡವನ್ನು ಪ್ರವೇಶಿಸುವ ಬಾಗಿಲಿಗೆ ಬೀಗ ಹಾಕಿದ್ದು ಕ್ವಾರಂಟೈನ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮನವಿ: ಜನ ಹೆಚ್ಚು ವಾಸವಾಗಿರುವ ಪ್ರದೇಶದ ಹಾಸ್ಟೆಲ್‌ಗ‌ಳಲ್ಲಿ ವಿದೇಶದಿಂದ ಬಂದವರಿಗೆ ಕ್ವಾರಂಟೈನ್‌ ಮಾಡುತ್ತಿರುವುದು ಸರಿಯಲ್ಲ, ನಮ್ಮ ಭಾಗದಲ್ಲಿ ಸುರಕ್ಷತೆಯಿಂದ ಬದುಕುತ್ತಿದ್ದೇವೆ, ಬೇರೆ ಕಡೆಯಿಂದ ಬಂದವರನ್ನು ತಂದು ನಮಗೆ ಸಮಸ್ಯೆ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದರು.ತಹಶೀಲ್ದಾರ್‌ ಶ್ರೀನಿವಾಸ್‌ ಪ್ರತಿಕ್ರಿಯಿಸಿ, ಕ್ವಾರಂಟೈನ್‌ ಮಾಡುವವರಿಗೆ ಯಾವುದೇ ಕಾಯಿಲೆ ಇರಲ್ಲ, ಕಡ್ಡಾಯ ಕ್ವಾರಂಟೈನ್‌ ಇರುವುದರಿಂದ ಅವರಿಗೆ ಸೌಲಭ್ಯ ಮಾಡಲಾಗುತ್ತಿದೆ. ವಿದೇಶದಿಂದ ಬಂದ 79 ಜನರಲ್ಲಿ 59ಜನರನ್ನು ಕ್ವಾರಂಟೈನ್‌ ಮಾಡಿ ಉಳಿದವರನ್ನು ದೊಡ್ಡಬಳ್ಳಾಪುರಕ್ಕೆ ಕಳುಹಿಸಲಾಗಿದೆ. ಅವರು ನಮ್ಮಂತೆಯೇ ಅಲ್ಲವೇ ವಿರೋಧ ಮಾಡುವುದು ಸರಿಯಲ್ಲ ಎಂದರು.

ಅವ್ಯವಸ್ಥೆಗೆ ಆಕ್ರೋಶ
ದೇವನಹಳ್ಳಿ: ಕ್ವಾರಂಟೈನ್‌ ಕೇಂದ್ರದಲ್ಲಿ ಸರಿಯಾದ ಸೌಕರ್ಯಗಳಿಲ್ಲದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣ ಆಗಿರುವುದರಿಂದ ಬಿ.ಬಿ. ರಸ್ತೆಯ ಸಮಾಜ ಕಲ್ಯಾಣ ಇಲಾಖೆ ಬಾಲಕರ ಹಾಸ್ಟೆಲ್‌ ಮುಂಭಾಗದಲ್ಲಿ ಕ್ವಾರಂಟೈನ್‌ನಲ್ಲಿ ಇರುವವರು ಆಕ್ರೋಶ ವ್ಯಕ್ತಪಡಿಸಿದರು. ಒಂದೇ ಕೊಠಡಿಯಲ್ಲಿ 40 ಹಾಸಿಗೆ ಹಾಕಲಾಗಿದೆ. ತಹಶೀಲ್ದಾರ್‌ ಆಗಲಿ, ಯಾವುದೇ ಅಧಿಕಾರಿಗಳಾಗಲಿ ಕ್ವಾರಂಟೈನ್‌ ಕೇಂದ್ರಗಳಿಗೆ ಬರುತ್ತಿಲ್ಲ. 100 ಜನಕ್ಕೆ 4 ಶೌಚಾಲಯ, ಸ್ಯಾನಿ ಟೈಸರ್‌ ಇಲ್ಲ, ಮಾಸ್ಕ್ ಇಲ್ಲ, ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಸ್ವಚ್ಛತೆ ಇಲ್ಲ. ಈ ವೇಳೆ ಆರೋಗ್ಯ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next