Advertisement

Politics; ನಮ್ಮಲ್ಲಿ ಸಿಎಂ ಕುರ್ಚಿ ಖಾಲಿಯಿಲ್ಲ: ಸಚಿವ ಎಚ್.ಕೆ ಪಾಟೀಲ್

11:57 AM Nov 04, 2023 | Team Udayavani |

ಕೊಪ್ಪಳ: ಕಾಂಗ್ರೆಸ್ ಸರಕಾರದಲ್ಲಿ ನಾಯಕತ್ವ ಗೊಂದಲವಿಲ್ಲ. ಇದು ಮಾಧ್ಯಮಗಳ ಸೃಷ್ಠಿಯಷ್ಟೇ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಮಾಡುವ ನಿರ್ಧಾರಕ್ಕೆ ನಾವು ಚರ್ಚಿಸಬಾರದು ಎಂದು ಕಾನೂನು ಸಚಿವ ಹೆಚ್ ಕೆ ಪಾಟೀಲ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿಯಿಲ್ಲ. ಹೀಗಾಗಿ ಆ ಚರ್ಚೆ ಅನಗತ್ಯ. ಈ ರೀತಿ ಚರ್ಚೆ ಪಕ್ಷದ ಘನತೆ ಹಾಗು ಬಲ ಕುಂದುತ್ತದೆ ಎಂದರು.

ಸಚಿವರಿಗೆ ಸಿಎಂ ಮನೆಯಲ್ಲಿ ಉಪಹಾರಕ್ಕೆ ಆಹ್ವಾನದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ಕುರಿತು ನನಗೆ ಆಹ್ವಾನವಿಲ್ಲ. ನಾನು ಅಲ್ಲಿ ಇಲ್ಲದೆ ಇರುವದರಿಂದ ಭಾಗವಹಿಸಲು ಆಗುವುದಿಲ್ಲ ಎಂದರು.

ಸಿಎಂ ಆಗುವುದಕ್ಕೆ ನೀವು ರೇಸ್ ನಲ್ಲಿ ನೀವು ಇದ್ದಿರಾ ಪ್ರಶ್ನೆಗೆ ಉತ್ತರಿಸಿ, ಜನರ ಬೆಂಬಲ ಹಾಗು ಹೈಕಮಾಂಡ್ ಆಶೀರ್ವಾದ ಮುಖ್ಯ. ಸಿಎಂ ಹುದ್ದೆ ಕೇಳಿ ಪಡೆಯುವುದಲ್ಲ, ಆ ಎತ್ತರಕ್ಕೆ ಬೆಳೆಯಬೇಕು ಎಂದರು.

ಗ್ರಾಮ ನ್ಯಾಯಾಲಯ: ನ್ಯಾಯದಾನಕ್ಕೆ ಬಲ ತುಂಬಲು ನಮ್ಮ ಸರಕಾರ ಬದ್ದ. ಜನವರಿ 26 ರ ವೇಳೆಗೆ ರಾಜ್ಯದಲ್ಲಿ ಗ್ರಾಮ ನ್ಯಾಯಲಯ ಸ್ಥಾಪನೆಗೆ ಸಿದ್ದತೆ ಮಾಡಲಾಗಿದೆ. ಮುಖ್ಯ ನ್ಯಾಯಾಧೀಶರೊಂದಿಗೆ ಚರ್ಚಿಸಿ ಅಂತಿಮ ರೂಪರೇಷ ನೀಡಲಾಗುವುದು. ನ್ಯಾಯಲಯಗಳಿಗೆ ಮೂಲಭೂತ ಸೌಲಭ್ಯ ನೀಡಲು ಆದ್ಯತೆ ಕಲ್ಪಿಸಲಾಗುವುದು ಎಂದು ಎಚ್ ಕೆ ಪಾಟೀಲ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next