Advertisement

ನಮಗೆ ಮನ್‌ ಕೀ ಬಾತ್‌ ಬೇಕಿಲ್ಲ,ಕಾಮ್‌ ಕೀ ಬಾತ್‌ ಬೇಕಿದೆ: ಜಮೀರ್‌

06:10 AM Sep 06, 2018 | Team Udayavani |

ಹುಬ್ಬಳ್ಳಿ: “ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಗಗನಕ್ಕೇರುತ್ತಿದೆ. ಆದರೂ ಕೇಂದ್ರ ಸರಕಾರ ಅದನ್ನು ನಿಯಂತ್ರಿಸುವ ಗೋಜಿಗೆ ಹೋಗಿಲ್ಲ. ಪ್ರಧಾನಿ ಮೋದಿ ಅಚ್ಛೇ ದಿನ್‌ ಆಯೇಗಾ ಅಂದಿದ್ದರು. ಇದೇನಾ ಅವರ ಅಚ್ಛೇ ದಿನ್‌’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪ್ರಶ್ನಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಮನ್‌ ಕೀ ಬಾತ್‌ ಅಂತಿದ್ದಾರೆ. ನಮಗೆ ಮನ್‌ ಕೀ ಬಾತ್‌ ಬೇಕಿಲ್ಲ. ಕಾಮ್‌ ಕೀ ಬಾತ್‌ ಬೇಕಿದೆ. ತೈಲ ಬೆಲೆ ಏರಿಸುತ್ತಿರುವ ಬಗ್ಗೆ ನಾವು ಹಿಂದಿನಿಂದಲೂ ಪ್ರತಿಭಟಿಸುತ್ತಿದ್ದೇವೆ. 

ಕೇಂದ್ರ ಸರಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಸುತ್ತಿರುವ ಬಗ್ಗೆ ಜನರಿಗೆ ಅರ್ಥವಾಗಬೇಕು. ಇವರ ದುರಾಡಳಿತ ಜನರಿಗೆ ಗೊತ್ತಾಗಲಿ ಎಂದು ಸುಮ್ಮನಿದ್ದೇವೆ ಎಂದರು. ಬಿಜೆಪಿಯವರು ಮಾತೆತ್ತಿದರೆ ಸಮ್ಮಿಶ್ರ ಸರಕಾರ ಬೀಳುತ್ತೆ ಅಂತಿದ್ದಾರೆ. ಈ ಮೈತ್ರಿ ಸರಕಾರ ಬೀಳುವುದು ಕನಸಿನ ಮಾತು. ಸರಕಾರ ಯಶಸ್ವಿಯಾಗಿ ಐದು ವರ್ಷ ಪೂರ್ಣ ಆಡಳಿತ ನಡೆಸಲಿದೆ ಅದರಲ್ಲಿ ಯಾವುದೇ ಸಂಶಯವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಮಂಡಿಸಿದ ಎಲ್ಲಾ ಯೋಜನೆಗಳನ್ನು ಸಮ್ಮಿಶ್ರ ಸರಕಾರ ಮುಂದುವರಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next