ಕೊಯಮತ್ತೂರು: ಈಶ ಫೌಂಡೇಶನ್ ಅನ್ನು ಜನರಿಗೆ ಯೋಗ ಮತ್ತು ಆಧ್ಯಾತ್ಮಿಕತೆಯನ್ನು ನೀಡಲು ಸದ್ಗುರುಗಳು ಸ್ಥಾಪಿಸಿದ್ದಾರೆ. ವಯಸ್ಕ ವ್ಯಕ್ತಿಗಳು ತಮ್ಮ ಮಾರ್ಗವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ಬುದ್ಧಿವಂತಿಕೆಯನ್ನು ಹೊಂದಿದ್ದಾರೆಂದು ನಾವು ನಂಬುತ್ತೇವೆ. ಮದುವೆಯಾಗಲು ಅಥವಾ ಸನ್ಯಾಸವನ್ನು ಸ್ವೀಕರಿಸಲು ನಾವು ಜನರನ್ನು ಕೇಳುವುದಿಲ್ಲ” ಎಂದು ಈಶ ಫೌಂಡೇಶನ್ ವಿವಾದದ ವೇಳೆ ಪ್ರಕಟಣೆ ಹೊರಡಿಸಿದೆ.
ಈಶ ಯೋಗ ಕೇಂದ್ರವು ಸನ್ಯಾಸಿಗಳಲ್ಲದ ಸಾವಿರಾರು ಮಂದಿ ಮತ್ತು ಬ್ರಹ್ಮಚರ್ಯ ಅಥವಾ ಸನ್ಯಾಸತ್ವವನ್ನು ಪಡೆದ ಕೆಲವರ ನೆಲೆಯಾಗಿದೆ. ಇದರ ಹೊರತಾಗಿಯೂ, ಸನ್ಯಾಸಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ಅರ್ಜಿದಾರರು ಬಯಸಿದ್ದರು, ಸನ್ಯಾಸಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ತಮ್ಮ ಸ್ವಂತ ಇಚ್ಛೆಯಿಂದ ಈಶ ಯೋಗ ಕೇಂದ್ರದಲ್ಲಿ ಉಳಿದುಕೊಂಡಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈಗ ಈ ವಿಷಯವನ್ನು ನ್ಯಾಯಾಲಯದಲ್ಲಿರುವುದರಿಂದ, ಸತ್ಯವು ಮೇಲುಗೈ ಸಾಧಿಸುತ್ತದೆ ಮತ್ತು ಹುಟ್ಟುಹಾಕಲಾಗಿರುವ ಎಲ್ಲ ಅನಗತ್ಯ ವಿವಾದಗಳಿಗೆ ಅಂತ್ಯವಿದೆ ಎಂದು ನಾವು ಭಾವಿಸುತ್ತೇವೆ” ಎಂದು ಪ್ರಕಟಣೆ ಹೊರಡಿಸಿದೆ.
ತನ್ನಿಬ್ಬರು ಹೆಣ್ಣು ಮಕ್ಕಳ ಮನಪರಿವರ್ತಿಸಿ ಸದ್ಗುರು ತಮ್ಮ ಆಶ್ರಮದಲ್ಲಿ ಬಂಧಿಯಾಗಿಟ್ಟುಕೊಂಡಿದ್ದಾರೆಂದು ನಿವೃತ್ತ ಪ್ರೊಫೆಸರ್ರೊಬ್ಬರು ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಕೋರ್ಟ್, ತಮಿಳುನಾಡು ಪೊಲೀಸರಿಗೆ ಶೋಧ ನಡೆಸುವಂತೆ ಸೂಚಿಸಿತ್ತು. ಮಂಗಳವಾರ ಕೊಯಮತ್ತೂರಿನ ಈಶ ಫೌಂಡೇಶನ್ಗೆ ನೂರಾರು ಪೊಲೀಸರು ತೆರಳಿದ್ದರು.
ಈಶ ಫೌಂಡೇಶನ್ ವಿರುದ್ಧ ತನಿಖೆ ನಡೆಸಲು ಹೇಳಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆನೀಡಿದ್ದು, ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ.ಹೈಕೋರ್ಟ್ ಆದೇಶದಂತೆ ತನಿಖೆ ನಡೆಸದಂತೆ ತಮಿಳುನಾಡು ಪೊಲೀಸರಿಗೆ ಸೂಚಿಸಿರುವ ಕೋರ್ಟ್, ವಾಸ್ತವ ಸ್ಥಿತಿವರದಿಯನ್ನು ಸಲ್ಲಿಸುವಂತೆ ತಿಳಿಸಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಈಶ ಫೌಂಡೇಶನ್ ಅರ್ಜಿ ವಿಚಾರಣೆ ನಡೆ ಸಿದ ಸುಪ್ರೀಂ, ಯಾವುದೇ ಹೆಚ್ಚುವರಿ ಕ್ರಮ ತೆಗೆದು ಕೊಳ್ಳದಂತೆ ತಮಿಳು ನಾಡು ಪೊಲೀಸರಿಗೆ ತಿಳಿಸಿತು. ಇದೇ ವೇಳೆ, ಬಂಧಿಯಾಗಿದ್ದಾರೆನ್ನಲಾದ ಇಬ್ಬರು ಮಹಿಳೆಯರೊಂದಿಗೂ ಪೀಠ ವೀಡಿಯೋ ಕಾನ್ಫರೆನ್ಸ್ ನಡೆ ಸಿತು.ತಮ್ಮ ಸ್ವಚ್ಛೆಯಿಂದ ಆಶ್ರಮದಲ್ಲಿರುವುದಾಗಿ ತಿಳಿಸಿದ್ದಾರೆಂದು ಹೇಳಿತು.