Advertisement
ಪ್ರಬಲವಾಗಿರುವ ಮೈತ್ರಿಕೂಟ ರಚಿಸುವುದೇ ಕಾಂಗ್ರೆಸ್‌ನ ಆದ್ಯತೆ. ಪ್ರಧಾನಿ ಹುದ್ದೆಗೆ ಯಾರು ಎಂಬ ಬಗ್ಗೆ ಚುನಾವಣೆಯ ಬಳಿಕ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ ಚಿದಂಬರಂ. ಎರಡು ದಶಕಗಳ ಅವಧಿಯಲ್ಲಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳು ಹೊಂದಿರುವ ಮತ ಬ್ಯಾಂಕ್‌ಗೆ ಸೆಡ್ಡು ಹೊಡೆದಿವೆ. ಹೀಗಾ ಗಿಯೇ ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಿರುವ ಮತ ಪ್ರಮಾಣ ಶೇ.50ಕ್ಕಿಂತ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಪಾಟ್ನಾ: ಬಿಹಾರದ 42 ಲೋಕಸಭಾ ಕ್ಷೇತ್ರಗಳ ಸ್ಥಾನ ಹಂಚಿಕೆ ಬಿಜೆಪಿ-ಜೆಡಿಯು ನಡುವೆ ಕೊನೆಗೂ ಮುಕ್ತಾಯವಾಗಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ 16 ಜೆಡಿಯುಗೆ, 17 ಬಿಜೆಪಿಗೆ, 5 ಎಲ್‌ಜೆಪಿಗೆ, 2 ಸ್ಥಾನ ಸಚಿವ ಉಪೇಂದ್ರ ಖುಶ್ವಾಹರಿಗೆ ನೀಡಲು ನಿರ್ಧರಿಸಲಾಗಿದೆ. ಪ್ರಿಯಾಂಕಾ ಪೋಸ್ಟರ್: ರಾಯ್ ಬರೇಲಿಯಲ್ಲಿ “ಪ್ರಿಯಾಂಕಾ ವಾದ್ರಾ ಕಾಣೆಯಾಗಿದ್ದಾರೆ’ ಎಂಬ ಪೋಸ್ಟರ್ ಗಳು ಸೋಮವಾರ ಕಾಣಿಸಿ ಕೊಂಡಿದೆ.
Related Articles
2019ರ ಲೋಕಸಭೆ ಚುನಾವಣೆಯಲ್ಲಿ ಕ್ರಿಕೆಟಿಗರಾದ ಎಂ.ಎಸ್.ಧೋನಿ ಮತ್ತು ಗೌತಮ್ ಗಂಭೀರ್ ಬಿಜೆಪಿ ಟಿಕೆಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿವೆ. ಜಾರ್ಖಂಡ್‌ನಿಂದ ಕಣಕ್ಕಿಳಿಯುವಂತೆ ಧೋನಿ ಜತೆ ಬಿಜೆಪಿ ಮಾತುಕತೆ ನಡೆಸುತ್ತಿದೆ ಹಾಗೂ ಗಂಭೀರ್‌ಗೆ ದೆಹಲಿ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
Advertisement