Advertisement
ಅಭಿಮಾನಿಗಳು ಪ್ರತೀ ವರ್ಷವೂ “ಕಪ್ ನಮ್ದೆ” ಎಂದು ಹೇಳುತ್ತ ಆರ್‌ಸಿಬಿ ಮೇಲೆ ಅಪಾರ ಪ್ರೀತಿ, ನಂಬಿಕೆ ಇರಿಸಿ ಹುರಿದುಂಬಿಸಿದರೂ ಕರ್ನಾಟಕದ ಫ್ರಾಂಚೈಸಿ ಮಾತ್ರ ಇದನ್ನೆಲ್ಲ ನೆಲಸಮ ಮಾಡುತ್ತಲೇ ಬಂದಿದೆ. ಈ ಸಂದರ್ಭದಲ್ಲಿ ತಂಡದ ಹೀನಾಯ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ, ನಾವು ತಂಡವಾಗಿ ಆಡಲು ವಿಫಲರಾದೆವು ಎಂದಿದ್ದಾರೆ.
Related Articles
Advertisement
ಜೋಶ್ ಇಲ್ಲದ ಬ್ಯಾಟಿಂಗ್
ಉಳಿದಂತೆ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಯಾವುದೇ ಜೋಶ್ ಇರಲಿಲ್ಲ. ಅದು ಸೊನ್ನೆಗೆ 3 ವಿಕೆಟ್ ಉದುರಿಸಿಕೊಂಡ ಡೆಲ್ಲಿಗಿಂತಲೂ ಕಳಪೆ ಆಟವಾಡಿತು. ಎಲಿಮಿನೇಟರ್‌ನಂಥ ನಿರ್ಣಾಯಕ ಪಂದ್ಯದಲ್ಲಿ 130 ಚಿಲ್ಲರೆ ರನ್ ಯಾವ ಹೋರಾಟಕ್ಕೂ ಸಾಲುತ್ತಿರಲಿಲ್ಲ. ಹಾಗೆಯೇ ಆಯಿತು. ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ ಆರಂಭಿಕನಾಗಿ ಬಂದ ಉದ್ದೇಶ ಅರ್ಥವಾಗಲಿಲ್ಲ. “ಡ್ಯಾರಿಂಗ್ ಕ್ರಿಕೆಟರ್’ ಪಾರ್ಥಿವ್ ಪಟೇಲ್ ಅವರನ್ನು ಕೂಟದುದ್ದಕ್ಕೂ ಬೆಂಚ್ ಬಿಸಿ ಮಾಡಲು ಕೂರಿಸಿದ್ದು ಕೂಡ ಸರಿಯಾದ ನಡೆ ಎನಿಸಲಿಲ್ಲ. ಮ್ಯಾಚ್ ವಿನ್ನರ್ ಮತ್ತು ಮ್ಯಾಚ್ ಫಿನಿಶರ್‌ಗಳ ಕೊರತೆ ತೀವ್ರ ಮಟ್ಟದಲ್ಲಿತ್ತು.
ಕೊಹ್ಲಿ ಸೇರಿದಂತೆ ಫಿಂಚ್, ಮಾರಿಸ್, ದುಬೆ, ಮಾನ್, ಅಲಿ, ಸ್ಟೇನ್, ಉಮೇಶ್ ಯಾದವ್, ಉದಾನ ಅವರೆಲ್ಲರ ವೈಫಲ್ಯ ಎನ್ನುವುದು ಆರ್‌ಸಿಬಿಯನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಬೇಕು ಎನ್ನುವುದು ಅಭಿಮಾನಿಗಳ ವಾದ