Advertisement
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸುವ ಕಾರ್ಯಕ್ರಮವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. ಕಂದಾಯ ದಾಖಲೆ ಪಡೆಯುವುದು ಸಾಮನ್ಯ ಜನರಿಗೆ ರೈತರಿಗೆ ಸಮಸ್ಯೆ ಆಗಿತ್ತು. ಕಚೇರಿಗೆ ಅಲೆದಾಟ, ದಾಖಲೆಗಳನ್ನು ಕೊಡಲು ವಿಳಂಬ, ತಪ್ಪು ದಾಖಲೆ ಕೊಡುವುದು, ಭ್ರಷ್ಟಾಚಾರದಿಂದ ಕಷ್ಟ ಆಗಿತ್ತು. ಈಗ ನಮ್ಮ ಸರ್ಕಾರದಿಂದ ಮನೆ ಬಾಗಿಲಿಗೆ ದಾಖಲೆಗಳನ್ನು ವಿತರಿಸುವ ಮೂಲಕ ಕಂದಾಯ ಕ್ರಾಂತಿ ಮಾಡಿದ್ದೇವೆ ಎಂದರು.
Related Articles
Advertisement
ಬಜೆಟ್ ಗೆ ಎಲ್ಲ ವರ್ಗದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ. ರೈತ ಯಶಸ್ವಿನಿ ಕಾರ್ಯಕ್ರಮ ಪುನಾರಂಭಿಸಿದ್ದೇವೆ. 33 ಲಕ್ಷ ರೈತರಿಗೆ ಸಾಲ ಕೊಡುವ ವ್ಯವಸ್ಥೆ ಮಾಡಿದ್ದೇವೆ.
ಹಾಲು ಉತ್ಪಾದಕ ರೈತರಿಗೆ ಆರ್ಥಿಕ ಉತ್ತೇಜನ ನೀಡಲು ಅವರಿಗ ಒಂದು ಬ್ಯಾಂಕ್ ಆರಂಭಿಸಿದ್ದೇವೆ. ಏ. 1 ಕೇಂದ್ರ ಗೃಹ ಸಚಿವ ಅಮಿತ್ ಶಾ ಬ್ಯಾಂಕ್ ಲೋಗೋ ಬಿಡುಗಡೆ ಮಾಡಲಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಹಾಲು ಉತ್ಪಾದಕರಿಗೆ ಬ್ಯಾಂಕ್ ಆರಂಭಿಸಿದ್ದೇವೆ ಎಂದರು.
ಇಂದು ಕ್ಷೇತ್ರದ ಜನರು ಮತ ಹಾಕಿದ್ದಾಗಿ ಶಾಸಕ, ಮಂತ್ರಿಯಾಗಿ, ಈಗ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸುತ್ತಿದ್ದೇನೆ.
150ಕೋಟಿ ಗೂ., ಹೆಚ್ಚು ರಸ್ತೆ ಅಭಿವೃದ್ಧಿಗೆ, 250 ಬೆಡ್ ಆಸ್ಪತ್ರೆ, ಶಿಗ್ಗಾವಿ ಡಿಪೋ, ಕೆರೆ ತುಂಬಿಸುವ ಕಾರ್ಯಕ್ರಮ, ಜಿಟಿಟಿಸಿ ಮಂಜೂರಾತಿ ಆಗಿದೆ. ಆರ್ಯುವೇದಿಕ್ ಮೆಡಿಕಲ್ ಕಾಲೇಜು, ಬಂಕಾಪುರ ಡಿಪ್ಲೊಮಾ ಕಾಲೇಜ್ ಅನ್ನು ಎಂಜಿನಿಯರಿಂಗ್ ಕಾಲೇಜ್ ಆಗಿ ಮೇಲ್ದರ್ಜೆಗೆ ಏರಿಸಲಾಗುವುದು. ಹೀಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧನಾಗಿದ್ದೇನೆ ಎಂದರು.
1,23,180 ದಾಖಲೆಗಳನ್ನು ಶಿಗ್ಗಾವಿ ಕ್ಷೇತ್ರದ ಜನರಿಗೆ ತಲುಪಿಸಿದ್ದೇವೆ. ಗ್ರಾಮ ಒನ್ಎ ನಲ್ಲಿ 75 ಸಾವಿರ ಅರ್ಜಿ ಕೊಟ್ಟಿದ್ದೇವೆ. 56ಸಾವಿರ ಅರ್ಜಿ ಇತ್ಯರ್ಥ ಮಾಡಿದ್ದೇವೆ.ಆಡಳಿತದಲ್ಲಿ ಬದಲಾವಣೆ ಮಾಡಿದ್ದೇವೆ. ಜನಸ್ಪಂದನಾ ಸರ್ಕಾರ ನೀಡಿದ್ದೇವೆ.ಬಜೆಟ್ ನಲ್ಲಿ ನಮ್ಮ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಏ.1 ರಿಂದ ಪ್ರಾರಂಭವಾಗಲಿದೆ. ಯಾವುದಕ್ಕೆ ಹೋರಾಟ ಮಾಡಿದ್ದೇನೋ ಅದಕ್ಕೆ ಆಜ್ಞೆ ಮಾಡಿದ್ದೇನೆ. ಹಾಲು ಉತ್ಪಾದನೆ ಹೆಚ್ಚಿಸಲು ಆಕಳು ಕೊಡಲು ಪ್ರೋತ್ಸಾಹ ಧನ ಕೊಟ್ಟಿದ್ದೇವೆ. ಪ್ರತಿ ಗ್ರಾಪಂಗೆ ಮತ್ತೆ 50 ಮನೆ ಕೊಡಲಿದ್ದೇವೆ ಎಂದರು.
ನಮ್ಮ ಜಿಲ್ಲೆಗೆ ಮೆಗಾ ಡೈರಿ ಅಲ್ಲದೇ ರೇಷ್ಮೆ ಉತ್ಪಾದಕರಿಗೆ ರೇಷ್ಮೆ ಮಾರುಕಟ್ಟೆ ಮಾಡಲಿದ್ದೇವೆ. ಕೈಗಾರಿಕಾ ಟೌನ್ ಶಿಪ್ ಮಾಡಿದ್ದೇವೆ. ಬಹುತೇಕ ಆರ್ಥಿಕ ಅಭಿವೃದ್ಧಿ ನಮ್ಮ ಜಿಲ್ಲೆಯಲ್ಲಿ ಆಗಲಿದೆ ಎಂದರು.
ರೈತರ ಬೆಳೆಗಳಿಗೆ ಹೆಚ್ಚಿನ ಬೆಲೆ ಕೊಡಲು ಕಾರ್ಯಕ್ರಮ ರೂಪಿಸಲಿದ್ದೇವೆ. ತಿಮ್ಮಾಪುರ ಜನ ಬಹಳ ಬೆರಕಿ ಇದ್ದೀರಿ. ಪ್ರೀತಿಯಿಂದ ಒಂದಾಗಿ ಎಲ್ಲ ಕೆಲಸ ಮಾಡಿಸಿಕೊಂಡಿದ್ದೀರಿ. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ದ್ವೇಷದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದರು.
ಈ ವೇಳೆ ಡಿಸಿ ಸಂಜಯ ಶೆಟ್ಟಣ್ಣವರ, ಜಿಪಂ ಸಿಇಒ ಮಹಮ್ಮದ್ ರೋಷನ್, ಎಸಿ ಅನ್ನಪೂರ್ಣ ಮುದಕ್ಕಮ್ಮನವರ ಇತರರು ಇದ್ದರು.