Advertisement

45 ದಿನಗಳಲ್ಲಿ ಮಂಗಳನ ಅಂಗಳಕ್ಕೆ ಮಾನವ?

09:48 PM Jan 23, 2023 | Team Udayavani |

ವಾಷಿಂಗ್ಟನ್‌: ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕಾರ್ಗೊ ಮತ್ತು ಮಾನವರನ್ನು ಕರೆದೊಯ್ಯುವ ಅಂತರಿಕ್ಷ ನೌಕೆಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಉದ್ಯಮಿ ಎಲಾನ್‌ ಮಸ್ಕ್ ಮಾಲೀಕತ್ವದ ಸ್ಪೇಸ್‌ ಎಕ್ಸ್‌ ನಿರತವಾಗಿದೆ.

Advertisement

ಖಾಸಗಿ ಬಾಹ್ಯಾಕಾಶ ಕೇಂದ್ರವಾಗಿರುವ ಸ್ಪೇಸ್‌ ಎಕ್ಸ್‌ , ಆರಂಭಿಕವಾಗಿ ಈ ವರ್ಷದಲ್ಲಿ ಚಂದ್ರನಲ್ಲಿಗೆ ಉಪಗ್ರಹ ಕಳುಹಿಸುವ ಯೋಜನೆ ಪ್ರಗತಿಯಲ್ಲಿದೆ. ಆದರೆ ಅಂದುಕೊಂಡಂತೆ ಎಲ್ಲಾ ನಡೆದರೂ ಮಂಗಳ ಗ್ರಹಕ್ಕೆ ಮಾನವರು ತಲುಪಲು ದೀರ್ಘ‌ ಸಮಯ ಬೇಕಾಗುತ್ತದೆ. ಪ್ರಸ್ತುತ ಬಾಹ್ಯಾಕಾಶ ನೌಕೆಯು ಗಂಟೆಗೆ 39,600 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಇದರಿಂದ ಮಂಗಳನ ಅಂಗಳಕ್ಕೆ ತಲುಪಲು ಸುಮಾರು ಏಳು ತಿಂಗಳು ಬೇಕಾಗುತ್ತದೆ.

ಆದರೆ ವಿಜ್ಞಾನಿಗಳು ಆವಿಷ್ಕರಿಸುತ್ತಿರುವ ಪ್ರಸ್ತಾಪಿತ ನ್ಯೂಕ್ಲಿಯಾರ್‌ ಥರ್ಮಲ್‌ ಮತ್ತು ನ್ಯೂಕ್ಲಿಯಾರ್‌ ಎಲೆಕ್ಟ್ರಿಕ್‌ ಪ್ರೊಪಲ್ಶನ್‌ (ಎನ್‌ಟಿಎನ್‌ಇಪಿ) ಮೂಲಕ 45 ದಿನಗಳಲ್ಲಿ ಮಂಗಳ ಗ್ರಹಕ್ಕೆ ತಲುಪಲು ಸಾಧ್ಯ ಎನ್ನಲಾಗುತ್ತಿದೆ.

ನಾಸಾದ ಇನ್ನೊವೇಟಿವ್‌ ಅಡ್ವಾನ್ಸ್‌ ಕಾನ್ಸೆಪ್ಟ್(ಎನ್‌ಐಎಸಿ) ಅಡಿ ವಿಜ್ಞಾನಿಗಳು ಬಾಹ್ಯಾಕಾಶ ನೌಕೆಯ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next