Advertisement

ಭಾರತೀಯ ಕ್ರಿಕೆಟಿಗರ ಸುರಕ್ಷೆಗೆ ನಾವು ಬದ್ಧ: ದಕ್ಷಿಣ ಆಫ್ರಿಕಾ

11:29 PM Nov 30, 2021 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿಕೊಂಡ ಒಮಿಕ್ರಾನ್‌ ವೈರಸ್‌ ಭೀತಿಯಿಂದಾಗಿ ಭಾರತದ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸ ಇನ್ನೂ ಖಚಿವಾಗಿಲ್ಲ. ಆದರೆ ಟೀಮ್‌ ಇಂಡಿಯಾ ಕ್ರಿಕೆಟಿಗರ ಸಂಪೂರ್ಣ ಸುರಕ್ಷೆೆಗೆ ದಕ್ಷಿಣ ಆಫ್ರಿಕಾ ಸರಕಾರ ಭರವಸೆ ನೀಡಿದೆ.

Advertisement

ಭಾರತೀಯ ಕ್ರಿಕೆಟ್‌ ತಂಡಕ್ಕೆ ಸಂಪೂರ್ಣ ಬಯೋಬಬಲ್‌ ವಾತಾವರಣವನ್ನು ನಿರ್ಮಿಸಲಾಗು ವುದು ಎಂದು ದಕ್ಷಿಣ ಆಫ್ರಿಕಾದ ವಿದೇಶಾಂಗ ವ್ಯವ ಹಾರಗಳ ಸಚಿವಾಲಯ ಹೇಳಿದೆ. ಜತೆಗೆ ಕೊರೊನಾ ರೂಪಾಂತರಿಯ ಆತಂಕವಿದ್ದರೂ ಭಾರತ “ಎ’ ತಂಡದ ಪ್ರವಾಸದಿಂದ ಹಿಂದೆ ಸರಿಯದಿದ್ದುದಕ್ಕಾಗಿ ಸಚಿವಾಲಯವು ಬಿಸಿಸಿಐಗೆ ಕೃತಜ್ಞತೆ ಸಲ್ಲಿಸಿದೆ.

ಭಾರತ ತಂಡ ಡಿ. 17ರಿಂದ ದ. ಆಫ್ರಿಕಾದಲ್ಲಿ 3 ಟೆಸ್ಟ್‌, 3 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಲಿದೆ.

ಡಿ. 9ಕ್ಕೆ ಆರಂಭ
ಹಿಂದಿನ ವೇಳಾಪಟ್ಟಿಯಂತೆ ಟೀಮ್‌ ಇಂಡಿಯಾ ಡಿ. 9ರಂದು ದಕ್ಷಿಣ ಆಫ್ರಿಕಾವನ್ನು ತಲುಪಲಿದೆ. ಆದರೆ ಅಲ್ಲಿ ಒಮಿಕ್ರಾನ್‌ ಕಂಡುಬಂದ ಬಳಿಕ ಪ್ರವಾಸದ ಬಗ್ಗೆ ಆತಂಕ ಎದುರಾಗಿದೆ. ಅನೇಕ ದೇಶಗಳು ಪ್ರಯಾಣ ನಿರ್ಬಂಧಗಳನ್ನು ವಿಧಿಸಿವೆ.

ಭಾರತ “ಎ’ ತಂಡದ ಪ್ರವಾಸವನ್ನು ಮುಂದುವ ರಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸುವ ಭಾರತದ ನಿರ್ಧಾರವು ತಮ್ಮ ಗಡಿಗಳನ್ನು ಮುಚ್ಚಲು ಮತ್ತು ದ.ಆಫ್ರಿಕಾದಿಂದ ಪ್ರಯಾಣವನ್ನು ಮಿತಿಗೊಳಿಸಲು ನಿರ್ಧರಿಸಿದ ಹಲವಾರು ದೇಶಗಳಿಗೆ ವ್ಯತಿರಿಕ್ತವಾಗಿದೆ ಎಂದು ಸಚಿವಾಲಯ ಹೇಳಿದೆ.

Advertisement

ಇದನ್ನೂ ಓದಿ:ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

30ನೇ ವಾರ್ಷಿಕೋತ್ಸವ
“ಪ್ರವಾಸವನ್ನು ಮುಂದುವರಿಸಿದ ಬಿಸಿಸಿಐ ನಿರ್ಧಾರಕ್ಕೆ ದಕ್ಷಿಣ ಆಫ್ರಿಕಾ ಸರಕಾರ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಹಾಗೆಯೇ ದ.ಆಫ್ರಿಕಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರ ಳಿದ 30ನೇ ವಾರ್ಷಿಕೋತ್ಸವನ್ನು ಭಾರತ ವಿರುದ್ಧವೇ ಆಚರಿಸಲು ಕಾತರವಾಗಿದ್ದೇವೆ’ ಎಂದು ಸಚಿವಾಲಯ ತಿಳಿಸಿದೆ. 1970ರಲ್ಲಿ ವರ್ಣಭೇದ ನೀತಿಯಿಂದಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿತ್ತು. ಬಳಿಕ 1991ರಲ್ಲಿ ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಾಪಸಾದಾಗ ಇವರೆದುರು ಮೊದಲ ಸರಣಿ ಆಯೋಜಿಸಿದ ಹೆಗ್ಗಳಿಕೆ ಭಾರತದ್ದಾಗಿದೆ.

ಅಭಿನಂದನಾ ಸಮಾರಂಭ
2022ರ ಜನವರಿ 2ರಂದು ಕೇಪ್‌ಟೌನ್‌ನಲ್ಲಿ ನಡೆಯುವ ಅಭಿನಂದನಾ ಸಮಾರಂಭದೊಂದಿಗೆ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಜತೆಗೆ ಈ ಸರಣಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಬಲವಾದ ಸಂಬಂಧವನ್ನು ಪ್ರದರ್ಶಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next