Advertisement

ಇಂಗ್ಲಿಷ್‌ ಗೊತ್ತಿಲದಿದ್ರೂ ಬಿಜಿನೆಸ್‌ ಮಾಡಬಹುದು

01:18 PM Oct 22, 2018 | |

ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹಣ ಹೂಡಬೇಕೆಂದರೆ ಇಂಗ್ಲಿಷ್‌ ಜ್ಞಾನ ಅಗತ್ಯ ಎಂದು ಹಲವರು ಭಾವಿಸಿದ್ದಾರೆ. ಆದರೆ, ಈ ವಾದದಲ್ಲಿ ಹುರುಳಿಲ್ಲ. ಇಂಗ್ಲಿಷ್‌ ಜ್ಞಾನ ಇಲ್ಲದಿದ್ದರೂ ಷೇರು ಖರೀದಿ ವ್ಯವಹಾರ ಮಾಡಬಹುದು. ಮುಖ್ಯವಾಗಿ ಇರಬೇಕಾದುದು ನಿಯಮಿತ ಸಂಪಾದನೆ ಮತ್ತು ಉಳಿತಾಯ ಮಾಡಲೇಬೇಕು ಎಂಬ ಗಟ್ಟಿ ಮನಸ್ಸು.

Advertisement

ಹಣ ಹೂಡುವುದಕ್ಕೆ, ಷೇರು ಪೇಟೆಯ ಬಗೆಗೆ ತಿಳಿವಳಿಕೆ ಇರುವುದಕ್ಕೆ ಇಂಗ್ಲಿಷ್‌ ಬರಬೇಕಾ? ಉನ್ನತ ಶಿಕ್ಷಣ ಬೇಕಾ? ಬೇಡವೇ ಬೇಡ. ಇಂಗ್ಲಿಷ್‌ ಗೊತ್ತಿದ್ದವರು ಮಾತ್ರ ಷೇರುಪೇಟೆ ವ್ಯವಹಾರ ಮಾಡಬಹುದು ಅನ್ನುವುದೇ ತಪ್ಪುಕಲ್ಪನೆ. ಚೀಟಿಯಲ್ಲಿ ಹಣ ತೊಡಗಿಸುತ್ತಿರುವ ಮಹಿಳೆಯೊಬ್ಬರನ್ನು ಕೇಳಿದೆ, “ಸುಮ್ಮನೇ ಚೀಟಿ ಗೀಟಿ ಹಾಕಿ ಹಣ ಕಳಕೊಳ್ಳಬೇಡಿ. ಈಗ ನಿಮಗೆ ಬೇಕಾದ ಹಾಗೆ ಸುರಕ್ಷಿತ ಹೂಡಿಕೆ ಇದೆ. ಮ್ಯೂಚುವಲ್‌ ಫ‌ಂಡ್‌ನ‌ಲ್ಲಿಯೂ ಹಣ ಹೂಡಬಹುದು’. ಮಾತು ಮುಗಿಯುವ ಮೊದಲೇ ಅವರೆಂದರು: “ನಾನು ಹೆಚ್ಚು ಓದಿದವಳಲ್ಲ. ನನಗೆ ಇದೆಲ್ಲ ಅರ್ಥ ಆಗುವುದಿಲ್ಲ’. 

 ಈ ಉತ್ತರ ಕೇಳಿದ ಮೇಲೆ ಅನಿವಾರ್ಯವಾಗಿ ಮತ್ತೆ ನಾನು ಮಾತಾಡಲೇಬೇಕಾಯಿತು: “ನಿನ್ನ ಓದಿಗೂ ಇದಕ್ಕೂ ಸಂಬಂಧ ಇಲ್ಲ. ಇಷ್ಟಕ್ಕೂ ಇದು ಏನು ಎತ್ತ ಎಂದೂ ನೋಡದೇ ಅರ್ಥ ಆಗುವುದಿಲ್ಲ ಎಂದು ನಿರ್ಧರಿಸುವುದು ಯಾವ ನ್ಯಾಯ?’. ಹೆಚ್ಚಿನ ಸಂದರ್ಭಗಳಲ್ಲಿ ಆಗುವುದೇ ಹೀಗೆ. ನಾವು ಹಣಕಾಸು ಯೋಜನೆ, ಆರ್ಥಿಕ ನಿರ್ವಹಣೆ ಇತ್ಯಾದಿ ಪದಗಳನ್ನು ಬಳಸುಸತ್ತೇವಲ್ಲ; ಅದನ್ನು ಕೇಳುವಾಗ ಇದೇನೋ ಕಬ್ಬಿಣದ ಕಡಲೆ ಅನ್ನಿಸುತ್ತದೆ. 

ನಮ್ಮ ನಿತ್ಯದ ಬದುಕಿನ ಉದಾಹರಣೆಗಳ ಮೂಲಕವೇ ಎಲ್ಲವನ್ನೂ ಸರಳವಾಗಿ ಅರಿಯಬಹುದು. ಮೊದಲು, ವಿಷಯ ತಿಳಿದುಕೊಳ್ಳಲು ನಮಗೆ ಉತ್ಸಾಹ ಇರಬೇಕು. ಈ ಉತ್ಸಾಹ ತೋರದಿದ್ದರೆ ಪ್ರತಿಯೊಂದೂ ಕಷ್ಟವೇ. ಹಣ ಹೂಡಿಕೆಯ ವಿಷಯದಲ್ಲಿ ಗೊತ್ತಿಲ್ಲ, ಅರ್ಥ ಆಗುವುದಿಲ್ಲ ಎನ್ನುವ ಬದಲು, ಏನಿದೆ ನೋಡೋಣ ಎನ್ನಬಹುದಲ್ಲ? ಹಣ ಹೂಡಬೇಕು ಎಂದು ಯೋಚಿಸಿದರೆ ಅಲ್ಲಿ ಹಣ ಉಳಿಸುವುದಕ್ಕೆ ಮಾನಸಿಕವಾಗಿ, ನಮ್ಮೊಳಗೇ ಒಂದು ಸಿದ್ಧತೆ ಆಗುತ್ತದೆ. ಈ ತಯಾರಿಯ ಹಿಂದೆ ಖರ್ಚು ಕಡಿಮೆ ಮಾಡುವ ಸಂಕಲ್ಪ ಮೊಳೆಯುತ್ತದೆ. ಅಗತ್ಯ- ಅನಗತ್ಯ ಖರ್ಚುಗಳ ನಡುವಿನ ಅಂತರ ಗೊತ್ತಾಗುತ್ತದೆ.

ಬದುಕು ಸರಳ ಆಗುವುದು ಇಲ್ಲಿ. ಇಂಗ್ಲಿಷ್‌ ಬರಬೇಕು, ಓದಿರಬೇಕು ಎನ್ನುವುದು ಭಾಷೆಯ ಕಲಿಕೆ, ವಿಷಯದ ಕಲಿಕೆಯ ದೃಷ್ಟಿಯಿಂದ ಅಗತ್ಯ ನಿಜ. ಆದರೆ, ಅನುಭವದಿಂದ, ಬಲ್ಲವರಿಂದ ಕಲಿಯುವುದಿದೆಯಲ್ಲ; ಅದೇ ಉನ್ನತವಾದದ್ದು. ನಿತ್ಯದ ಬದುಕಿಗೆ ಅಗತ್ಯವಾದದ್ದು. ನಮ್ಮ ಬದುಕನ್ನು ಸುಂದರಗೊಳಿಸಲು ಇದು ಅನಿವಾರ್ಯವೂ ಆಗಿದೆ.

Advertisement

 ಸುಧಾಶರ್ಮಾ ಚವತ್ತಿ

Advertisement

Udayavani is now on Telegram. Click here to join our channel and stay updated with the latest news.

Next