Advertisement

ಭೂಮಿ ತಾಯಿಯ ಮಕ್ಕಳು ನಾವು

06:00 AM Nov 23, 2018 | |

ನನಗೆ ಜನ್ಮ ಕೊಟ್ಟವಳು ನನ್ನನ್ನು ಒಂಬತ್ತು ತಿಂಗಳು ಹೊತ್ತ ತಾಯಿಯಾದರು, ಜೀವನ ನೀಡಿದವಳು ನಮ್ಮ ತಾಯಿ ಮಾತೃಭೂಮಿ. ಬದುಕುವ ಪಾಠ ಕಲಿಸಿದ್ದೂ ಜನ್ಮ ನೀಡಿದ ತಾಯಿಯಾದರು, ಬದುಕಲು ಅವಕಾಶ ಕೊಟ್ಟವಳು ನಮ್ಮ ತಾಯಿ ಮಾತೃಭೂಮಿ. ಹುಟ್ಟಿನಿಂದ ಸಾಯುವರೆಗೆ ನನಗೆ ಮಾತ್ರವಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಜೀವನ ಭಿಕ್ಷೆ ನೀಡಿ ನಮ್ಮನ್ನು ಸತ್ಕರಿಸುತ್ತಿರುವುದು ನಮ್ಮ ತಾಯಿ ಮಾತೃಭೂಮಿ.

Advertisement

ನಮ್ಮ ಭಾರವನ್ನು ಹೊತ್ತ ಮಾತೃಭೂಮಿಗೆ ನಾವೇನು ನೀಡಿದ್ದೇವೆ? ಅವಳ ಬೇಡಿಕೆಯನ್ನು ನಾವು ಪೂರೈಸಿದ್ದೆವಾ? ಅವಳ ಆಸೆ-ಆಕಾಂಕ್ಷೆಯಂತೆ ನಾವು ಬದುಕುತಿದ್ದೆವಾ? ಇಲ್ಲ , ಅವಳಿಗೆ ನಾವೇನು ನೀಡಿಲ್ಲ. ಅವಳ ಬೇಡಿಕೆಯನ್ನು ನಾವು ಪೂರೈಯಿಸಿಲ್ಲ. ಅವಳ ಆಕಾಂಕ್ಷೆಯಂತೆ ನಾವು ಬದುಕುತ್ತಿಲ್ಲ. ನಮ್ಮ ಸ್ವಾಥಕ್ಕಾಗಿ ನಾವು ಅವಳನ್ನು ನೆನೆಯುತ್ತೇವೆ ಹೊರತು, ಅವಳ ಕೊಡುಗೆಯನ್ನು ಬಯಸುತ್ತೇವೆಯೇ ಹೊರತು ನಿಜವಾಗಿಯೂ ಅವಳ ಮಗುವಾಗಿ ನಾವಿಲ್ಲ.

ಮಾತೃಭೂಮಿಯು ಕೋಟ್ಯಂತರ ಜನರ ಭಾರವನ್ನು ಹೊತ್ತು ನಿಂತಿದ್ದಾಳೆ, ಇದರಿಂದ ಅವಳು ಸೋತವಳಲ್ಲ. ಸಂತೋಷಕ್ಕಾಗಿ, ನೆಮ್ಮದಿಗಾಗಿ, ಹಣದ ವ್ಯಾಮೋಹಕ್ಕಾಗಿ ಅವಳನ್ನು ದುರುಪಯೋಗ ಪಡಿಸುತ್ತಿರುವ ಜನರನ್ನು ಕಂಡು ಅವಳು ಸೋತು ದುಃಖವನ್ನು ಅನುಭವಿಸಿ ಕಣ್ಣೀರಿಡುತ್ತಿದ್ದಾಳೆ. ಅವಳ ದುಃಖವನ್ನು ನೀಗಿಸಲು ನಾವು ಪಾತ್ರಧಾರಿಯಾಗುತ್ತಿಲ್ಲ.

ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗುತ್ತೇವೆಯೋ  ಗೊತ್ತಿಲ್ಲ , ಮತ್ತೂಬ್ಬರಿಗಿಂತ ಹೆಚ್ಚು ಹಣವನ್ನು ಸಂಪಾದಿಸಬೇಕು, ಅವರಿಗಿಂತ ಶ್ರೀಮಂತದ ಬದುಕನ್ನು ಎದುರಿಸಬೇಕು, ಕಾಡನ್ನು ನಾಶಪಡಿಸಿ ತಮ್ಮ ತಮ್ಮ ಹೆಸರಿಗೆ ಭೂಮಿಯನ್ನು ನೋಂದಾಯಿಸಿಕೊಳ್ಳಬೇಕು. ಬೆಟ್ಟ-ಗುಡ್ಡಗಳನ್ನು ಕೊರೆದು ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿಕೊಳ್ಳಬೇಕು, ಒಟ್ಟಾರೆಯಾಗಿ ಕೋಟಿ ಹಣ ಹೊತ್ತು ಮೆರೆಯಬೇಕು. ಇದು ನಮ್ಮ ಕಸನು.

ಕಣ್ಣಲ್ಲಿ ರಕ್ತವನ್ನೆ ಸುರಿಸುತ್ತ ನನ್ನನ್ನು ರಕ್ಷಿಸಿ, ನನ್ನನ್ನು ಕಾಪಾಡಿ, ದಯವಿಟ್ಟು ನನ್ನನ್ನು ನಾಶಪಡಿಸಬೇಡಿ ಎಂದು ಸೆರಗನ್ನೊಡ್ಡಿ ಬೇಡುವ ನಮ್ಮ ತಾಯಿಯ ಕೂಗು ನಮಗೆ ಕೇಳುತ್ತಿಲ್ಲ. ಯಾರೊ ಮಾಡಿದ ಫ್ಯಾಷನ್‌ ನಮ್ಮ ಕಣ್ಣಿಗೆ ಕಾಣಿಸುತ್ತದೆ, ಕೇಳಿಸುತ್ತದೆ. ಜೊತೆಗೆ ಅಚ್ಚಳಿಯದಂತೆ ಉಳಿಯುತ್ತದೆ. ಮನುಷ್ಯನಿಗೆ ಸ್ವಾರ್ಥ ಇರಬೇಕು ಇಷ್ಟರ ಮಟ್ಟಿಗೆ ಸ್ವಾರ್ಥ ಸರಿಯೇ? ಮಾತೃಭೂಮಿಗೆ ಕೇಳಿ-ಕೇಳಿ, ನೋಡಿ-ನೋಡಿ ಸೋತು ಸಾಕಾಗಿ ಎಂದು ಸೇಡನ್ನು ಬಯಸದ ನಮಗೆ ಇಂದು ನಮಗೆ ಸರಿಯಾದ ಪಾಠ ಕಲಿಸುತಿದ್ದಾಳೆ. ಎಲ್ಲಿಯವರೆಗೆ ನನ್ನ ಉದರವನ್ನು ಬಗೆಯುತ್ತಿರೊ, ಎಲ್ಲಿವರೆಗೆ ನನ್ನ ಜೀವನಾಡಿಗಳಾದ ಕಾಡನ್ನು ನಾಶ ಪಡಿಸುತ್ತಿರೊ ಅಲ್ಲಿವರೆಗೆ ನನ್ನಿಂದ ಶಿಕ್ಷೆಯಾಗುತ್ತಲೇ ಇರುತ್ತದೆ. ಅನುಭವಿಸಲು ಸಿದ್ಧರಾಗಿ ನಿಲ್ಲಿ ಎಂದು ನಮ್ಮ ತಾಯಿ ಮುನಿಸಿಕೊಂಡು ಎಚ್ಚರಿಕೆ ನೀಡುತ್ತಿದ್ದಾಳೆ.

Advertisement

ಭೂಮಿತಾಯಿಗೆ ನಮ್ಮ ಆವಶ್ಯಕತೆಯಿಲ್ಲ, ನಮಗೆ ಅವಳ ಅನಿವಾರ್ಯತೆ ಇದೆ ಎನ್ನುವ ವಿಚಾರ ಎಲ್ಲರೂ ಮನಗೊಂಡು ಅವಳ ಮುನಿಸು ಕಡಿಮೆಯಾಗಿ ನಾವು ಅವಳ ಮಗುವಾಗಬಹುದು.

ಸಂಧ್ಯಾ ಎ. ಟಿ.
ಪ್ರಥಮ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
 ಎಸ್‌. ಡಿ. ಎಂ. ಕಾಲೇಜು, ಉಜಿರೆ

 

Advertisement

Udayavani is now on Telegram. Click here to join our channel and stay updated with the latest news.

Next