Advertisement
ವಾರಾಂತ್ಯ ಬಂದರೆ ಸಾಕು; ಮನಸ್ಸಿಗೆ ಅದೇನೋ ಖುಷಿ. ವಾರದಲ್ಲಿ ಈ ಎರಡು ದಿನಗಳು ರಜೆ ಇರದಿದ್ದರೇ…! ಐ.ಟಿ ಯಲ್ಲಿ ಕೆಲಸ ಮಾಡುವ ಸಾಕಷ್ಟು ಮಂದಿ ಇಷ್ಟೊತ್ತಿಗೆ ಅರೆ ಹುಚ್ಚರಾಗಿಬಿಡುತ್ತಿದ್ದರು.
Related Articles
Advertisement
ಆದ್ದರಿಂದಲೇ ವಾರದ ರಜೆಗೆ ಇಲ್ಲಿ ಬಲು ಮಹತ್ವ. ಆ ಎರಡು ದಿನವಾದರೂ ಆರಾಮಾಗಿ ಬೇಗ ಮಲಗಿ ಲೇಟಾಗಿ ಏಳುವ ಕನಸು. ಎರಡು ದಿನವಾದರೂ ಖುಷಿಯಾಗಿ ಎಲ್ಲರೊಂದಿಗೆ ಬೆರೆತು ಊಟ ಮಾಡುವ ಸಂತೋಷ. ಯಾವುದೋ ಪ್ರೀತಿಯ ಕಾದಂಬರಿಯ ಅರ್ಧ ಓದನ್ನು ಎರಡು ದಿನದಲ್ಲಿ ಮುಗಿಸುವ ಆತುರ.
ಒಂದು ಸಲ ಹೀಗಾಯ್ತು.ಇಂಥದ್ದೊಂದು ಶನಿವಾರ ತಾನೊಬ್ಬನೇ ಮನೆಯಲ್ಲಿ ಸಂಭ್ರಮಿಸುವಾ ಎಂದು ಎದ್ದಿದ್ದೇ ಮುಂಜಾನೆ 9ಕ್ಕೆ. ಸಧ್ಯ ಲ್ಯಾಪ್ ಟಾಪ್ ತೆಗೆದು ಇಶ್ಯೂ ಚೆಕ್ ಮಾಡುವ ಗೋಜು ಇರಲಿಲ್ಲ. ಹೊರಗಡೆ ವಾತಾವರಣ ಸುಂದರವಾಗಿ ಕಾಣುತ್ತಿತ್ತು. ಇದೀಗ ತಾನೇ ಸ್ನಾನ ಮಾಡಿದ ಪ್ರಕೃತಿ ಮಾತೆಯಂತೆ ಹಚ್ಚಹಸಿರಾಗಿ ಕಂಗೊಳಿಸುತ್ತಿತ್ತು. ಊಟ ಮಾಡಿ ಹೀಗೆ ವಾಕ್ ಹೋಗಿ ಬರೋಣವೆಂದುಕೊಂಡೆ. ಟೇಂಪರೇಚರ್ 23 ತೋರಿಸುತ್ತಿತು. ವಾಕಿಂಗ ಲೇನ್‌ನಲ್ಲಿ ಯಾರೊಬ್ಬರೂ ಇಲ್ಲ. ಅದು ದೂರದಲ್ಲಿ ಅಮೇರಿಕಾದ ಲೇಡಿ ರನ್ನಿಂಗ್ … ಮಾಡಿಕೊಂಡು ಬರುತ್ತಿದ್ದಳು. ಹತ್ತಿರಕ್ಕೆ ಬಂದಾಗ ಹಾಯ…! ಎಂದು ಹಾಗೆಯೇ ಓಡುತ್ತಾ ಮರೆಯಾದಳು. ನಿತ್ಯ ಹೋಗುತ್ತಿದ್ದಷ್ಟು ದೂರ ಹೋಗಲು ಸಾಧ್ಯವಿಲ್ಲವೆಂದು ನಡೆಯುತ್ತಾ ಸಾಗಿದೆ. ರಾತ್ರಿಗೆ ಏನು ಅಡುಗೆ ಮಾಡುವುದು? ಹೊಟ್ಟೆಯ ನೆನಪು ಮಾತ್ರ ಇರಲೇಬೇಕು. ಒಬ್ಬರೇ ಇದ್ದರೂ ಅಡುಗೆ ಇಬ್ಬರೂ ಇದ್ದರೂ ಅಡುಗೆ ಮಾಡಲೇಬೇಕು. ಅವಲಕ್ಕಿ ಮಾಡಿದರೇ ಭೇಷ್ ಅನಿಸಿತು. ಅದನ್ನು ಸುಲಭವಾಗಿ ಮಾಡಿದರಾಯ್ತು ಎಂದುಕೊಂಡೆ. ಪುನಃ ಲ್ಯಾಪ್ ಟಾಪ್ ಆನ್ ಮಾಡಿದೆ. ಹಾಗೆಯೇ, ಫೇಸುºಕ್ ಫ್ರೆಂಡ್‌ಲಿಸ್ಟ್‌ನಲ್ಲಿರುವ ಗೆಳೆಯ ಅವನ ಫ್ರೆಂಡ… ಗೆ ಕಾಮೆಂಟ್ ಹಾಕಿದ್ದಾ. ಉಫ್!
ಅವಲಕ್ಕಿ ರಡಿಯಾಯಿತು.
ಹಾಗೆಯೇ ನನ್ನ ಬ್ಲಾಗ್ ಕೊಂಡಿಯನ್ನು ಓಪನ್ ಮಾಡಿದೆ. ಅಲ್ಲಿರುವ ಮುಂದಿನ ಬ್ಲಾಗ… ಕೊಂಡಿಯನ್ನು ಕ್ಲಿಕ್ಕಿಸಿದೆ. ಇನ್ನೊಂದು ಕನ್ನಡ ಕವನಗಳ ಬ್ಲಾಗ್ ಬಂತು. ಸಾಹಿತ್ಯಕ್ಕೆ ಸಂಬಂಧಿಸಿದ್ದು ಇನ್ನೊಂದು. ಪಂಡಿತ್ ಎಂಬುವವರು ಉತ್ತಮ ಪುಸ್ತಕ ವಿಮರ್ಶೆಗಳನ್ನು ಮಾಡಿದ್ದರು. ಭೈರಪ್ಪನವರ ಉತ್ತರಕಾಂಡ ಕಾದಂಬರಿಯ ಬಗ್ಗೆ ಬರೆದಿರುವುದನ್ನು ಪೂರ್ತಿ ಓದಿದೆ. ಓದುವುದಕ್ಕೆ ಸಮಯವಿದ್ದರೆ, ಅವರೆಲ್ಲರ ಅನುಭವಗಳನ್ನು ನಮ್ಮದಾಗಿಸಿಕೊಳ್ಳಬಹುದು. ವಾರಾಂತ್ಯಕ್ಕೆ ಇದಕ್ಕಿಂತ ಉತ್ತಮವಾದ ಸಂಗತಿ ಇನ್ನು ಏನಿದೆ? ಶನಿವಾರದ ರಜೆ ಹೀಗೆ ಮುಗಿಯಿತು. ನಾಳೆ ಭಾನುವಾರ. 12 ಕ್ಕೆ .. ಗೆಟ್‌ಟುಗೆದರ್. ಆಫೀಸ್ ಗೆಳೆಯರೆಲ್ಲ ತಿಂಗಳಿಗೊಮ್ಮೆ ಒಟ್ಟಿಗೆ ಸೇರಿ ಕೆಲವು ಸಮಯವನ್ನು ಖುಷಿಯಾಗಿ ಕಳೆಯುವುದು. ನಾವುಗಳೇ ಮಾಡಿಕೊಂಡು ಬಂದಂಥ ವಿವಿಧ ಬಗೆಯ ಭಕ್ಷ್ಯಗಳನ್ನು ಹಂಚಿಕೊಂಡು ಒಟ್ಟಿಗೆ ತಿನ್ನುವುದು. ಈ ಭಾರಿಯ ನನ್ನ ಪಾಲಿನ ತಿನಿಸು ವೆನಿಲಾ ಐಸ್ ಕ್ರೀಮ….ನೆನಪಾಯಿತು. ಎಲ್ಲವೂ ಲೆಕ್ಕ ಹಾಕಿದ ಹಾಗೇ ನಡೆಯಿತು. ಬೆನ್ನಿಗೇ ಮಾರನೆ ದಿನ ಸೋಮವಾರ ಬಂದೇ ಬಿಟ್ಟಿತು. ಶಾಲೆಗೆ ಹೋಗಲ್ಲ ಅಂತ ಹಠ ಮಾಡುವ ಮಗುವಿನಂತೆ ಮನಸ್ಸು ಚಂಡಿ ಹಿಡಿಯಿತು, ಆಫೀಸಿಗೆ ಹೋಗಲ್ಲ ಅಂತ. ಸಾರಿ ಸಾರಿ ಹೇಳಿಯಾದ ಮೇಲೆ, ಕ್ಯಾಲೆಂಡರ್ ಮೇಲೆ ಮತ್ತೆ ಶನಿವಾರ, ಭಾನುವಾರ ಕಂಡಾಗ… ಐದು ದಿನ ಕೆಲಸ ಮಾಡಿದರೆ ಮತ್ತೆ ಎರಡು ದಿನ ರಜೆ ಅಂತ ಮನಸ್ಸು ಕುಣಿದಾಡಿತು. ಅದೇ ಉತ್ಸಾಹವಾಗಿ, ಆತ್ಮವಿಶ್ವಾಸವಾಗಿ ಆಫೀಸಿಗೆ ಹೋಗಲು ಎದ್ದು ನಿಂತೆ.
ಕಣ್ಣಲ್ಲಿ ಮತ್ತೆ ರಜೆ ಸಿಗುವ ಆಸೆಯಲಿ… ಸೌಮಿನಿ ಹನುಮಜೆ