ಮೆಲ್ಬರ್ನ್: ಐಸಿಸಿ ಟೂರ್ನಮೆಂಟ್ ಗಳಲ್ಲಿನ ತಮ್ಮ ಅದೃಷ್ಟವನ್ನು ಬದಲಾಯಿಸಲು ಟೀಂ ಇಂಡಿಯಾ ತಮ್ಮ ಶಕ್ತಿ ಮೀರಿ ಎಲ್ಲವನ್ನೂ ಮಾಡಲಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪಂದ್ಯಕ್ಕೂ ಮುನ್ನ ಮಾತನಾಡುತ್ತಾ ರೋಹಿತ್, ಕಳೆದ ಒಂಬತ್ತು ವರ್ಷಗಳಲ್ಲಿ ಐಸಿಸಿ ಟ್ರೋಫಿಯನ್ನು ಗೆಲ್ಲದೆ ತಂಡವು ನಿರಾಶೆಗೊಂಡಿದೆ ಎಂದು ಹೇಳಿದರು.
“ಆದರೆ ಇದು ನಮಗೆ ಒತ್ತಡ ಹೆಚ್ಚಿಸುವುದಿಲ್ಲ, ಆದರೆ ಐಸಿಸಿ ಪಂದ್ಯಾವಳಿಗಳಲ್ಲಿ ಅಗ್ರಸ್ಥಾನಕ್ಕೆ ಬರುವುದು ನಮಗೆ ಸವಾಲಾಗಿದೆ. 9 ವರ್ಷಗಳಲ್ಲಿ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ನಾವು ಖಂಡಿತವಾಗಿಯೂ ಅದರಲ್ಲಿ ಸ್ವಲ್ಪ ನಿರಾಶೆಗೊಂಡಿದ್ದೇವೆ ಮತ್ತು ಈ ಪಂದ್ಯಾವಳಿಯಲ್ಲಿ ಮತ್ತೊಂದು ಅವಕಾಶ ಸಿಕ್ಕಿದೆ ಎಂದು ಶರ್ಮಾ ವಿವರಿಸಿದರು.
ಇದನ್ನೂ ಓದಿ:ಮಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ 2 ವರ್ಷದ ಬಾಲಕಿ
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದೆ. ಆದರೆ ಏಷ್ಯಾಕಪ್ ನಲ್ಲಿ ನಿರಾಶೆ ಅನುಭವಿಸಿತ್ತು.
ಐಸಿಸಿ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಅಭಿಯಾನ ಆರಂಭಿಸುತ್ತಿದೆ. ರವಿವಾರ ಮಧ್ಯಾಹ್ನ ಮೆಲ್ಬರ್ನ್ ನಲ್ಲಿ ಈ ಪಂದ್ಯ ನಡೆಯಲಿದೆ. ಆದರೆ ಮೆಲ್ಬರ್ನ್ ನಲ್ಲಿ ಸತತ ಮಳೆಯಾಗುತ್ತಿದ್ದು ಆತಂಕ ಹೆಚ್ಚಿಸಿದೆ.