Advertisement
ಆದರೂ ಹೊಸ ವರ್ಷ ಎಂಬುದು ಹೊಸತನದ ರೂಢಿಯಲ್ಲಿರಬೇಕು. ಕ್ಯಾಲೆಂಡರಿನ ಬದಲಾವಣೆಗೆ ಮಾತ್ರ ಸೀಮಿತವಾಗಿಯಲ್ಲ. ದಿನ ದಿನವೂ ಹೊಸ ಬದಲಾವಣೆಗಳು ಜೀವನದಲ್ಲಿ ಹಾಸುಹೊಕ್ಕಾಗಿರಬೇಕು. ಪ್ರತೀ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮುಂದಿನ ವರ್ಷದ ಆಲೋಚನೆ ಜನವರಿಯಿಂದ ಎಲ್ಲವನ್ನು ಎಲ್ಲ ಕೆಲಸವನ್ನು ಹಾಗೆ ಮಾಡುತ್ತೇನೆ.
Related Articles
Advertisement
ಒಂದಿಷ್ಟು ಒಳ್ಳೆಯ ನಿರ್ಧಾರಗಳ ಜತೆ, ಕೆಟ್ಟ ಭಾವನೆಗಳು ನಮ್ಮಿಂದ ದೂರವಾಗಲಿ. ದಿನ ದಿನವೂ ಹೊಸತಾಗಿರಬೇಕು. ದಿನದ ಮುಂಜಾವೂ ಕೂಡ ಹೊಸ ತನದಲ್ಲಿ ಕೂಡಿದ್ದರೆ ಪ್ರತೀ ದಿನ, ತಿಂಗಳು, ವರ್ಷವೂ ಹಸನಾಗಿರುತ್ತದೆ. ಹಾಗೆಯೆ ಇದು ಕ್ಯಾಲೆಂಡರ್ ಬದಲಾವಣೆಯ ಈ ಸಂದರ್ಭ ಕೂಡ ಹೊಸ ರೀತಿಯಲ್ಲಿ ಹೊಸ ತನದಲ್ಲಿ ಪ್ರಾರಂಭವಾಗಲಿ. ಎಲ್ಲರ ಬದುಕು ಈ ವರ್ಷ ಹಸಿರಾಗಲಿ.
ಒಂದು ವರ್ಷದಲ್ಲಿ ಮುನ್ನೂರ ಅರವತೈದು ದಿನಗಳು ಅವು ಯಾಂತ್ರಿಕವಾಗಿ ಸಾಗದೆ ಸತ್ವಯುತವಾಗಿರಬೇಕು. ಇಂದಿನ ಕಾಲಮಾನದಲ್ಲಿ ಎಲ್ಲರೂ ಬ್ಯುಸಿಯಾಗಿಬಿಟ್ಟಿದ್ದಾರೆ. ಹಣ ಮಾಡುವ ಸಲುವಾಗಿಯೊ ಅಥವಾ ಕೆಲಸದ ಒತ್ತಡದಲ್ಲಿಯೊ ಇಂದಿನ ಯೋಚನೆ ಮತ್ತು ಯೋಜನೆ ಹೇಗೆ ಎಂದರೆ ನಾನು ಈ ವರ್ಚ ಒಂದಷ್ಟು ಹಣ ದುಡಿಯುತ್ತೇನೆ ಎನ್ನುವುದಾಗಿ ಬಿಟ್ಟಿದೆ. ಆದರೆ ಮತ್ತೆ ಬರುತ್ತಿರೊ ಹೊಸ ವರ್ಷ ಹೊಸತನದಲ್ಲಿರಲಿ.
ಹೇಗೆಂದರೆ ಅದು ಹಣಕ್ಕಿಂತ ಹೆಚ್ಚಿನ ಮೌಲ್ಯಯುತವಾದ ಜೀವನ ನಮ್ಮದಾಗಬೇಕು. ಅಂದರೆ ಹಣ ಕೊಟ್ಟರೂ ಸಿಗದ ಆಸ್ತಿಗಳಾದ ನಗು, ಪ್ರೀತಿ, ಸ್ನೇಹ, ಕುಟುಂಬ. ಅವುಗಳ ಬೆಲೆ ತಿಳಿಯುವಂತಾಗಲಿ. ಮೌಲ್ಯಯುತವಾಗಿರಲಿ ಬರುವ ದಿನಗಳಲ್ಲಿ ಕುಟುಂಬದ ಜತೆ ನಮ್ಮ ಬಾಂಧವ್ಯ ಇನ್ನೂ ಗಟ್ಟಿಯಾಗಲಿ, ನಗು ಮನೆಯಲ್ಲಿ ಮೊಳಗಲಿ, ಸಂತೋಷ ದಿನ ದಿನವೂ ಚಿಮ್ಮಬೇಕಿದೆ. ಹೀಗೆ ಹೊಸ ವರ್ಷ ಹಸನಾಗಬೇಕಿದೆ.
ಹೊಸ ವರ್ಷ ಬಂದಾಗ ಮಾತ್ರ ನೆನಪಾಗದೇ ದಿನ ದಿನವೂ ಹೊಸ ವರ್ಷದ ಉತ್ಸಾಹದಲ್ಲಿ ನಾವೆಲ್ಲರೂ ಇರಬೇಕಿದೆ.
ನೆನಪಿನ ಬುತ್ತಿಗೆ ಮತ್ತೂಂದು ಹಳೆ ವರುಷ ಜಾರುತಲಿದೆ. ಹೊಸ ವರ್ಷ ಸೇರ್ಪಡೆಯಾಗಲಿದೆ ಅದು ಕಹಿಯೇ ಆಗಿರಲಿ, ಸಿಹಿಯೇ ಆಗಿರಲಿ, ಅದು ಈ ವರ್ಷದ ಚೀಲದಲ್ಲಿ ಭದ್ರವಾಗಿ ಇರುತ್ತದೆ. ಮುಂದಿನ ದಿನಗಳನ್ನು ನಮ್ಮ ಜೋಳಿಗೆಯಲ್ಲಿ ಹೊಸತನದ ನಗು ತುಂಬಿಸುವ ಕೆಲಸ ನಮ್ಮದು ಅದರ ಕತೃìರೂ ನಾವೇ ಆಗಿದ್ದೇವೆ ಹಾಗಾಗಿ ಬರುವ ಹೊಸ ಕ್ಯಾಲಂಡರ್ ವರ್ಷವನ್ನು ಪ್ರೀತಿಯಿಂದ ಬರಮಾಡಿಕೊಂಡು ಹೊಸ ಕೆಲಸಗಳಿಗೆ ಹೊಸ ರೀತಿಯಲ್ಲಿ ಚಾಲನೆ ಸಿಗುವಂತಾಗಲಿ.
ಬಂದಿದೆ ಹೊಸ ವರುಷ
ತರುತಿದೆ ಸಂತೋಷ
ವರುಷ ಹಸಿರಾಗಲಿ
ಹರುಷ ಮನೆ ತುಂಬಲಿ.
-ದಿವ್ಯಾ ಹೆಗಡೆ
ಎಸ್.ಡಿ.ಎಂ., ಉಜಿರೆ