Advertisement

ಮಾನಸಿಕ ಒತ್ತಡ ನಿವಾರಿಸಿ ಏಕಾಗ್ರತೆ ವೃದ್ಧಿಸಿ

05:39 PM Dec 02, 2020 | Nagendra Trasi |

ವಿಶ್ರಾಂತಿ ರಹಿತ ದುಡಿಮೆ, ಒತ್ತಡದ ಜೀವನ ಶೈಲಿ, ಬದಲಾದ ಆಹಾರ ಸಂಸ್ಕೃತಿ ಇಂದು ಮಾನಸಿಕ ಒತ್ತಡ, ಖಿನ್ನತೆಯ ಜತೆಗೆ ಏಕತಾನತೆಯ ಜೀವನ ಶೈಲಿಗೆ ಕಾರಣವಾಗುತ್ತಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಇರುವ ಏಕೈಕ ಪರಿಹಾರ ಯೋಗ. ವಾಕಿಂಗ್‌, ಜಾಗಿಂಗ್‌, ಜಿಮ್‌… ಹೀಗೆ ಇವತ್ತು ಎಲ್ಲರೂ ಒಂದಲ್ಲ ಒಂದು ರೀತಿಯ ವ್ಯಾಯಾಮ ಮಾಡುತ್ತಾರೆ. ಆದರೆ ಇವುಗಳು ದೇಹದ ಬಾಹ್ಯ ಅಂಗಾಂಗಗಳ ಮೇಲೆ ಪರಿಣಾಮ
ಬೀರುತ್ತದೆಯೇ ಹೊರತು ಆಂತರಿಕವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ ಮನಸ್ಸಿನ ಒತ್ತಡ ನಿವಾ ರಣೆಗೆ ಯೋಗ, ಪ್ರಾಣಾಯಾಮ, ಧ್ಯಾನ ಬಹಳ ಅವಶ್ಯಕ.

Advertisement

ಯೋಗ
ಯೋಗವೆಂದರೆ ದೇಹದೊಂದಿಗೆ ಮನಸ್ಸು, ಬುದ್ಧಿ, ಭಾವನೆ, ಆತ್ಮವನ್ನು ಸೇರಿಸುವುದು. ಇದಕ್ಕಾಗಿ ಯಮ ಮತ್ತು ನಿಯಮ  ಪಾಲನೆ ಬಹುಮುಖ್ಯ. ಯಮ ಅಂದರೆ ಪಂಚೇಂದ್ರಿಯಗಳನ್ನು ನಿಯಂತ್ರಿಸುವುದು, ನಿಯಮ ವೆಂದರೆ ಅನುಷ್ಠಾನ ಏಕಾಗ್ರತೆ, ಶ್ರದ್ಧೆಯನ್ನಿರಿಸುವುದು. ಯೋಗದಲ್ಲಿ ಹಲವಾರು ಆಸನಗಳಿವೆ. ನಮ್ಮ ದೇಹ ಪ್ರಕೃ ತಿಗೆ ಸೂಕ್ತವಾದ ಮತ್ತು ಸುಲಭವಾಗಿ ಮಾಡಬಹುದಾದ ಆಸನಗಳನ್ನು ನಾವು ಆಯ್ದುಕೊಳ್ಳಬಹುದು.

ಯೋಗ ಮಾಡುವ ಮುಂಚೆ ಸ್ವಲ್ಪ ವ್ಯಾಯಾಮವನ್ನು ಮಾಡಬೇಕು. ಅನಂತರ ಸೂರ್ಯ ನಮಸ್ಕಾರ, ನಿಂತು ಮಾಡುವ ಆಸನ, ಕುಳಿತು ಮಾಡುವ ಆಸನ, ಕೊನೆಗೆ ಮಲಗಿ (ಅಂಗಾತ ಮತ್ತು ಹೊಟ್ಟೆಯ ಮೇಲೆ) ಮಾಡುವ ಆಸನ ಮಾಡಬೇಕು. ಯೋಗಾಸನಕ್ಕೆ ಬೆಳಗ್ಗಿನ ವಾತಾವರಣ ಬಹ ಳ ಉತ್ತಮ. ನಗರ ವಾಸಿಗಳಲ್ಲಿ ಹೆಚ್ಚಿನ ಮಂದಿ ರಾತ್ರಿ ಪಾಳಿ ಕೆಲಸ ಮಾಡುವುದರಿಂದ ಕೆಲಸ ಮುಗಿಸಿ ಬಂದು ಒಂದು ಗಂಟೆ ಯೋಗ ಮಾಡಿ ಮಲಗಬಹುದು. ಇದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಉತ್ತಮವಾಗಿರುವುದು.

ಇದನ್ನೂ ಓದಿ:ಪುತ್ತೂರಿನಿಂದ ಕೇವಲ 4 ಗಂಟೆ 20 ನಿಮಿಷದಲ್ಲಿ ಬೆಂಗಳೂರು ತಲುಪಿದ ಆಂಬ್ಯುಲೆನ್ಸ್

ಧ್ಯಾನ
ನಮ್ಮ ಬಹುತೇಕ ಸಮಸ್ಯೆಗಳಿಗೆ ಮುಖ್ಯ ಕಾರಣ ಆತ್ಮವಿಶ್ವಾಸದ ಕೊರತೆ. ಇದನ್ನು ಧ್ಯಾನದಿಂದ ವೃದ್ಧಿಸಿಕೊಳ್ಳ ಬಹುದು. ಧ್ಯಾನವೆಂದರೆ ಏಕಮಾನಸ್ಸಿನಿಂದ ಚಿತ್ತವೃತ್ತಿಗಳನ್ನು ಕೇಂದ್ರೀಕರಿಸುವುದು. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಕಾಯಿಲೆಗಳನ್ನು ದೂರ ಮಾಡಿ, ನಮ್ಮೊಳಗೆ ಸಕರಾತ್ಮಕತೆ ತುಂಬಿ ಅಂತರಿಕವಾಗಿ ಪರಿಶುದ್ಧಗೊಳಿಸುತ್ತದೆ.

Advertisement

ಉತ್ತಮ ಆರೋಗ್ಯಕ್ಕಾಗಿ ಯೋಗ ಮಾತ್ರ ಸಾಲದು ಆಹಾರ, ನಿದ್ದೆಯ ಮೇಲೂ ಕಾಳಜಿ ವಹಿಸಬೇಕು. ದಿನದಲ್ಲಿ 6- 8 ಗಂಟೆ ನಿದ್ದೆ ಎಲ್ಲರಿಗೂ ಅಗತ್ಯ. ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಿಕೊಂಡರೆ ಉತ್ತಮ. ಆಹಾರದಲ್ಲಿ ಹಸುರು ತರಕಾರಿ, ಮೊಳಕೆ ಬರಿಸಿದ ಕಾಳುಗಳ ಸೇವನೆ ಅಧಿಕವಾಗಿರಲಿ. ಕರಿದ ತಿಂಡಿಗಳಿಂದ ದೂರವಿದ್ದರೆ ಉತ್ತಮ.

*ಸಂಜೀವಣ್ಣ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next