Advertisement

ಸೂರ್ಯನಮಸ್ಕಾರ; ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ

01:32 PM Jan 15, 2021 | Team Udayavani |

ಬೇಗ ಮಲಗಿ, ಬೇಗ ಏಳುವ ಅಭ್ಯಾಸ ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಬಹುತೇಕ ಕಾಯಿಲೆಗಳನ್ನು ಇದರಿಂದ
ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಅದರಲ್ಲೂ ಬೇಗನೆ ಎದ್ದು ಸೂರ್ಯನಮಸ್ಕಾರ ಮಾಡಿದರೆ ಹಲವು ಲಾಭಗಳಿವೆ. ಸೂರ್ಯ ನಮಸ್ಕಾರ 12 ಯೋಗ ಭಂಗಿಯಾಗಿದ್ದು, ಪ್ರತಿಯೊಂದು ಭಂಗಿಯೂ ಆರೋಗ್ಯಕ್ಕೆ ಸಾಕಷ್ಟು ಲಾಭ ತಂದುಕೊಡುವಂಥದ್ದಾಗಿದೆ.

Advertisement

ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಿಂದ ತಲೆಯಿಂದ ಪಾದದವರೆಗೆ ಇಡೀ ದೇಹಕ್ಕೆ ಪ್ರಯೋಜನವಿದೆ. ಸೂರ್ಯ ನಮಸ್ಕಾರವು ದೇಹದಲ್ಲಿ
ರಕ್ತ ಪರಿಚಲನೆಯನ್ನು ಸುಧಾರಿಸುವುದು ಮಾತ್ರವಲ್ಲದೆ ವಾತ, ಪಿತ್ತ, ಕಫ‌ವನ್ನು ಸಮತೋಲನದಲ್ಲಿರಿಸುತ್ತದೆ. ಸೂರ್ಯ ನಮಸ್ಕಾರದಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಮತ್ತು ನರ ಮಂಡಲವನ್ನು ಸುಧಾರಿಸುತ್ತದೆ.

ಮನಸ್ಸನ್ನು ಶಾಂತಗೊಳಿಸಿ ಆತಂಕವನ್ನು ನಿವಾರಿಸುತ್ತದೆ. ಇದರಿಂದ ಹೆಚ್ಚು ಚುರುಕಾಗಿರಲು ಸಹಕಾರಿ. ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಹೊಟ್ಟೆಯ ಕೊಬ್ಬನ್ನು ನಿವಾರಿಸಲು ಸಾಧ್ಯವಾಗುತ್ತದೆ. ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಿ ಮುಖದ ಮೇಲೆ ಹೊಳಪು ತರುತ್ತದೆ. ಸುಕ್ಕು ಉಂಟಾಗದಂತೆ ತಡೆದು  ಚರ್ಮ ಕಾಂತಿಯುತವಾಗಿರುವಂñ ಮಾಡುತ್ತದೆ.  ಶ್ವಾಸಕೋಶಕ್ಕೆ ಶುದ್ಧ ಗಾಳಿ ಸಿಗುವುದರಿಂದ ರಕ್ತವು ಆಮ್ಲಜನಕ ಯುಕ್ತವಾಗಿರುತ್ತದೆ. ಇಂಗಾಲದ ಡೈ ಆಕ್ಸೆ„ಡ್‌ ಮತ್ತು ಇತರ ವಿಷಕಾರಿ ಅನಿಲಗಳನ್ನು ದೇಹದಿಂದ ಹೊರ ಹಾಕಲು ಈ ಆಸನ ಸಹಕಾರಿ.

ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಸ್ನಾಯು, ಕೀಲು, ಅಸ್ಥಿರಜ್ಜು ಮತ್ತು ಅಸ್ಥಿಪಂಜರದ ವ್ಯವಸ್ಥೆಯನ್ನು ಹಿಗ್ಗಿಸಲು, ಬಲಪಡಿಸಲು ಇದು ಅತ್ಯುತ್ತಮ ಯೋಗ ಭಂಗಿಯಾಗಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಯೋಗ ಭಂಗಿ ಮಾಡುವುದರಿಂದ ಜೀರ್ಣಕ್ರಿಯೆಯನ್ನು ಸುಸ್ಥಿತಿಯಲ್ಲಿಡಬಹುದು.

ಅನಿಯಮಿತ ಮುಟ್ಟಿನ ಚಕ್ರವನ್ನು ತೊಡೆದುಹಾಕುವ ಸೂರ್ಯನಮಸ್ಕಾರ ಸುಲಭ ಹೆರಿಗೆಗೂ ಸಹಾಯ ಮಾಡುತ್ತದೆ. ಸೂರ್ಯನಮಸ್ಕಾರದಿಂದ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ ಮಾತ್ರವಲ್ಲ, ಸಕಾರಾತ್ಮಕ ಭಾವನೆ ಬೆಳೆಸಲು ಸಹಕಾರಿಯಾಗಿದೆ.

Advertisement

ಯಾರು ಮಾಡಬಾರದು ರ್ಭಧಾರಣೆಯ ಮೂರನೇ ತಿಂಗಳ ಅನಂತರ ಸೂರ್ಯನಮಸ್ಕಾರವನ್ನು ಮಾಡಬಾರದು. ಅಂಡವಾಯು, ಅಧಿಕ ರಕ್ತದೊತ್ತಡವಿರುವವರು, ಬೆನ್ನುನೋವಿನಿಂದ ಬಳಲುತ್ತಿರುವವರು, ಮುಟ್ಟಿನ  ಅವಧಿಯಲ್ಲಿ ಮಹಿಳೆಯರು ಈ ಆಸನ ಮಾಡಬೇಕಾದರೆ ವೈದ್ಯರ ಸಲಹೆ ಪಡೆಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next