Advertisement
ಭಾರತೀಯ ಸೇನೆಯೂ ಭಾಗಿ: ಭೂಕುಸಿತದಲ್ಲಿ ಸಿಲುಕಿದವರ ರಕ್ಷಣೆ, ನಾಪತ್ತೆಯಾದವರ ಹುಡುಕಾಟಕ್ಕೆ ಭಾರತೀಯ ಸೇನೆಯೂ ಕೈಜೋಡಿಸಿದ್ದು ಮದ್ರಾಸ್ ಇನ್‌ಫ್ಯಾಂಟ್ರಿ ಬೆಟಾಲಿಯನ್‌ನ ಸೆಕೆಂಡ್ ಇನ್ ಕಮಾಂಡ್‌ನ 43 ಯೋಧರ ತಂಡ ವಯನಾಡ್‌ನಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಇದರಲ್ಲಿ ಓರ್ವ ಮೆಡಿಕಲ್ ಆಫೀಸರ್, ಇಬ್ಬರು ಜೂನಿಯರ್ ಕಮಿಷನ್x ಅಧಿಕಾರಿ, 40 ಯೋಧರಿದ್ದು ತೀವ್ರ ಕಠಿನ ಪ್ರದೇಶದಲ್ಲಿ ನೆರವು ನೀಡಲು ಅಗತ್ಯ ಉಪಕರಣಗಳನ್ನು ಈ ತಂಡ ಹೊಂದಿದೆ. ಇದರ ಜತೆಗೆ ಸೇನಾ ಎಂಜಿನಿಯರಿಂಗ್ ತಂಡ ಕೂಡ ವಯನಾಡಿಗೆ ಬಂದಿದೆ. ಜತೆಗೆ 67 ಮಂದಿ ಡಿಫೆನ್ಸ್ ಸೆಕ್ಯುರಿಟಿ ಕಾಪ್ಸ್ì ಯೋಧರು ಕಣ್ಣೂರಿನಿಂದ ಆ್ಯಂಬುಲೆನ್ಸ್, 3 ಟ್ರಕ್ ಲೋಡ್ ಸಾಮಗ್ರಿಗಳ ಜತೆ ಬಂದಿದ್ದಾರೆ. ಇದಲ್ಲದೆ ಎಳಿಮಾಲಾ ನೌಕಾ ಅಕಾಡೆಮಿಯ ನೌಕಾ ತಂಡ ಕೂಡ ವಯನಾಡಿಗೆ ಆಗಮಿಸಿದೆ. ಡ್ರೋನ್ ಮತ್ತು ಪೊಲೀಸ್ ಶ್ವಾನದಳವನ್ನು ರಕ್ಷಣ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ.
Advertisement
Wayanad; ಯುದ್ದೋಪಾದಿಯಲ್ಲಿ ರಕ್ಷಣೆ ಕಾರ್ಯಾಚರಣೆ, ಪರಿಹಾರ; ಎನ್‌ಡಿಆರ್‌ಎಫ್, ಸೇನೆ ಭಾಗಿ
12:02 AM Jul 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.