Advertisement

Wayanad landslides; ಉಳಿದವರ ಬದುಕು ಕಟ್ಟುವ ಹರಸಾಹಸ

12:01 AM Aug 01, 2024 | Team Udayavani |

ವಯನಾಡ್‌: ಕೇರಳದ ವಯನಾಡ್‌ನ‌ಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕುಸಿತದಲ್ಲಿ ಅಸುನೀಗಿದವರನ್ನು ಪತ್ತೆ ಹಚ್ಚುವುದರ ಜತೆಗೆ, ಅಲ್ಲಿ ಉಳಿದಿರುವವರನ್ನು ಪಾರು ಮಾಡಿ ಅವರಿಗೆ ಸೂಕ್ತ ಬದುಕು ಕಲ್ಪಿಸಿ ಕೊಡು ವುದರ ಬಗ್ಗೆಯೇ ಕೆಲಸ ಕಾರ್ಯಗಳು ಚುರುಕಾಗಿವೆ. ಈ ನಿಟ್ಟಿ ನಲ್ಲಿ ಸೇನೆ, ಐಎಎಫ್, ನೌಕಾಪಡೆಯ ಯೋಧರು, ಎನ್‌ಡಿಆರ್‌ಎಫ್ ಸಿಬಂದಿ ಕೇರಳ ಸರಕಾರದ ಮುಂದೆ ಇದೆ.

Advertisement

ಭೂಕುಸಿತದಿಂದ ಹಾನಿಗೀಡಾಗಿರುವ ಚೂರಲ್‌ವುಲ, ಮುಂಡಕೈ, ಪಟ್ಟಮಲ ಸೇರಿ ಬಾಧಿತ ಪ್ರದೇಶ ಗಳಲ್ಲಿ ಜನರ ಬದುಕು ಮೊದಲಿನ ಸ್ಥಿತಿಗೆ ಮರಳಲು ಮತ್ತೆ ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ. ಇಡೀ ಊರಿಗೆ ಊರೇ ಕೊಚ್ಚಿಕೊಂಡು ಹೋಗಿರು ವುದರಿಂದ ಬದುಕುಳಿದವರಿಗೆ ಆಶ್ರಯ ಕಲ್ಪಿಸುವುದು ಸವಾಲಿನ ಕೆಲಸವಾಗಲಿದೆ.

5,000ಕ್ಕೂ ಅಧಿಕ ಜನರ ರಕ್ಷಣೆ: 2 ದಿನಗಳ ರಕ್ಷಣ ಕಾರ್ಯಾಚರಣೆಯಲ್ಲಿ 5500ಕ್ಕೂ ಅಧಿಕ ಜನರನ್ನು ಭೂ ಕುಸಿತದಿಂದ ರಕ್ಷಿಸಲಾಗಿದೆ. ಮೊದಲ ಹಂತದಲ್ಲಿ 68 ಕುಟುಂಬಗಳ 206 ಜನರನ್ನು ರಕ್ಷಿಸಲಾಗಿದೆ. ಭೂಕುಸಿತದ ಬಳಿಕ 1,386 ಜನರು ತಮ್ಮ ಮನೆಗಳಲ್ಲಿ ಸಿಲುಕಿದ್ದರು. ಅವರನ್ನು ರಕ್ಷಣೆ ಮಾಡಲಾಗಿದೆ. ವಯನಾಡಿನ 82 ಶಿಬಿರಗಳಲ್ಲಿ 8,017 ಜನರು ಆಶ್ರಯ ಪಡೆದಿದ್ದಾರೆ.

400 ಮನೆ ಪೈಕಿ ಉಳಿದಿರುವುದು 30 ಮಾತ್ರ: ಮುಂಡಕೈ ನಲ್ಲಿ 400 ಮನೆಗಳಿದ್ದವು. ಆದರೆ ಈಗ ಕೇವಲ 30 ಮನೆಗಳಿವೆ ಎಂದು ಗ್ರಾಮ ಪಂಚಾಯತ್‌ ಸಿಬಂದಿ ತಿಳಿಸಿದ್ದಾರೆ. ಮುಂಡಕೈಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಬೇಲಿ ಬ್ರಿಡ್ಜ್ (ತುರ್ತು ಪರಿಸ್ಥಿತಿ ವೇಳೆ ನಿರ್ಮಾಣ ಮಾಡಲಾಗುವ ಸೇತುವೆ) ಮಾಡಲಾಗಿದ್ದು, ರಕ್ಷಣ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಕುಸಿದ ಬೇಲಿ ಸೇತುವೆ: ಈ ಮಧ್ಯೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಕ್ಷಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಕನ್ನಡಿಪುಳಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ್ದರಿಂದ ಚೂರನ್‌ಮಲದಲ್ಲಿ ರಕ್ಷಣೆಗೆ ಭಾರೀ ಕಷ್ಟವಾಗುತ್ತಿದೆ. ಚೂರಲ್‌ವುಲದಲ್ಲಿ ಮತ್ತೆ ಭೂಕುಸಿತದ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ. ರಕ್ಷಣ ಕಾರ್ಯಾ ಚರಣೆಗೆ ಸೇನೆ ತಾತ್ಕಾಲಿವಾಗಿ ನಿರ್ಮಿಸಿದ ಬೇಲಿ ಸೇತುವೆ ಕುಸಿದು, ನೀರಿನಲ್ಲಿ ಕೊಚ್ಚಿಕೊಂಡ ಹೋಗಿದೆ. ಬಳಿಕ, ಮತ್ತೆ ಸೇತುವೆ ನಿರ್ಮಾಣ ಕಾರ್ಯವನ್ನು ಸೇನೆ ಕೈಗೆತ್ತಿಕೊಂಡಿದೆ.

Advertisement

ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೆರವಿನ ಮಹಾಪೂರ!
ವಯನಾಡ್‌: ಭೂಕುಸಿತದ ಹಿನ್ನಲೆಯಲ್ಲಿ ಕೇರಳ ಸಿಎಂ ಪರಿಹಾರ ನಿಧಿಗೆ ಆರ್ಥಿಕ ನೆರವು ಹರಿದು ಬರುತ್ತಿದೆ. ಲುಲು ಗ್ರೂಪ್‌ನ ಎಂ.ಎ. ಯೂಸುಫ್ ಅಲಿ, ಕಲ್ಯಾಣ್‌ ಜುವೆಲ್ಲರ್ಸ್‌ನ ಕಲ್ಯಾಣ ರಾಮನ್‌, ಹಾಗೂ ಉದ್ಯಮಿ ರವಿ ಪಿಳ್ಳೆ ತಲಾ 5 ಕೋ.ರೂ. ನೀಡಲಿದ್ದಾರೆ. ಗೌತಮ್‌ ಅದಾನಿ 5 ಕೋ.ರೂ. ಘೋಷಿಸಿದ್ದಾರೆ. ಕೆನರಾ ಬ್ಯಾಂಕ್‌ ಕೂಡ 5 ಕೋ.ರೂ. ನೀಡಲಿದೆ. ತಮಿಳುನಾಡು ಕಾಂಗ್ರೆಸ್‌ ಸಮಿತಿ (ಟಿಎನ್‌ಸಿಸಿ) 1 ಕೋ. ರೂ. ನೆರವಿನ ಹಸ್ತ ಚಾಚಿದೆ. ಕೇರಳದ ಸಂಪುಟದ ಎಲ್ಲ ಸಚಿವರು ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ಸಮಿತಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಕೇರಳ ಸಿಎಂ ತಿಳಿಸಿದ್ದಾರೆ.

ಕೇರಳದಲ್ಲಿ ಮತ್ತೆ ಹೆಚ್ಚಿನ ಮಳೆ ಸಾಧ್ಯತೆ: ಐಎಂಡಿ
ತಿರುವನಂತಪುರ: ಕೇರಳದಲ್ಲಿ ಹೆಚ್ಚಿನ ಮಳೆಯಾ ಗುವ ಸಾಧ್ಯತೆಯಿದ್ದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಆರೆಂಜ್‌ ಅಲರ್ಟ್‌ ಘೋಷಿಸಿದೆ. ಈಗಾಗಲೇ ಭೂಕುಸಿತಕ್ಕೊಳಗಾದ ಹಲವು ಭಾಗಗಳಲ್ಲಿ ಆ.1ರ ವರೆಗೂ ಮತ್ತಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಆ.2ರಂದೂ ಭಾರೀ ಮಳೆ ನಿರೀಕ್ಷೆಯಿದೆ. ಇದಲ್ಲದೇ ಕೇರಳಕ್ಕೆ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯು ಅಪ್ಪಳಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next