Advertisement

Wayanad Landslide: 3 ಕೋಟಿ ದೇಣಿಗೆ ನೀಡಿದ ನಟ ಮೋಹನ್‌ಲಾಲ್‌: ಸಾವು 357ಕ್ಕೇರಿಕೆ

11:58 PM Aug 03, 2024 | Team Udayavani |

ಮೇಪ್ಪಾಡಿ (ವಯನಾಡ್‌): ಭೂಕುಸಿತದಿಂದ ತೊಂದರೆಗೆ ಒಳಗಾಗಿರುವ ವಯನಾಡ್‌ನ‌ ಚೂರಲ್‌ವುಲ, ಮುಂಡಕ್ಕೆ„, ಪುಂಚಿರಿಮತ್ತೂಮ್‌ಗೆ ಮಲಯಾಳ ನಟ ಮೋಹನ್‌ಲಾಲ್‌ ಭೇಟಿ ನೀಡಿದ್ದಾರೆ. ಸೇನೆ ನಡೆಸುತ್ತಿರುವ ರಕ್ಷಣ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ತಮ್ಮ ವಿಶ್ವಶಾಂತಿ ಪ್ರತಿಷ್ಠಾನದ ವತಿಯಿಂದ ರಕ್ಷಣೆ ಮತ್ತು ಪರಿಹಾರ ಕಾಮಗಾರಿಗಾಗಿ 3 ಕೋಟಿ ರೂ. ದೇಣಿಗೆಯನ್ನೂ ನೀಡಿದ್ದಾರೆ. ದೇಶದ ಟೆರಿಟೋರಿಯಲ್‌ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯನ್ನು ಹೊಂದಿರುವ ಅವರು ಸೇನೆಯ ಸಮವಸ್ತ್ರ ಧರಿಸಿಯೇ ಅವರು ಸ್ಥಳಕ್ಕೆ ಆಗಮಿಸಿದ್ದರು. ಬಳಿಕ ಮಾತನಾಡಿದ ಅವರು ಖುದ್ದಾಗಿ ಭೇಟಿ ನೀಡಿದರಷ್ಟೇ ಇಲ್ಲಿಯ ಮಾಹಿತಿ ತಿಳಿದುಕೊಳ್ಳಲು ಸಾಧ್ಯ. ಸೇನೆ, ಭಾರತೀಯ ವಾಯುಪಡೆ, ಎನ್‌ಡಿಆರ್‌ಎಫ್ ಸೇರಿದಂತೆ ಎಲ್ಲ ಸಂಘಟನೆಗಳೂ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂದರು.

Advertisement

RSS ಸ್ವಯಂಸೇವಕರಿಬ್ಬರು ಸಾವು


ವಯನಾಡ್‌ ಭೂ ಕುಸಿತದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿ ಸುತ್ತಿದ್ದ ಆರ್‌ಎಸ್‌ಎಸ್‌ ಸಂಘ ಟನೆಯ ಶರತ್‌ ಹಾಗೂ ಪ್ರಜೀಶ್‌ ರಕ್ಷಣ ಕಾರ್ಯಾಚರಣೆ ವೇಳೆಯಲ್ಲಿ ಅಸುನೀಗಿ ದ್ದಾರೆ. ವಯನಾಡಿನ ಅಟ್ಟ ಮಾಲದಲ್ಲಿ ಭೂ ಕುಸಿತದಲ್ಲಿ ಸಿಲುಕಿದವರನ್ನು ರಕ್ಷಿಸುವಾಗ ಈ ದುರಂತ ಸಂಭವಿಸಿದೆ ಎಂದು ಸಂಘಟನೆ ಹೇಳಿಕೊಂಡಿದೆ. ವಯನಾಡಿನಲ್ಲಿ ನಡೆದ ಎರಡನೇ ಭೂ ಕುಸಿತದಲ್ಲಿ ಇವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸಾವು 357ಕ್ಕೇರಿಕೆ, 206 ಮಂದಿ ಇನ್ನೂ ನಾಪತ್ತೆ
ಭೂಕುಸಿತದಿಂದ ಜರ್ಝರಿತವಾಗಿರುವ ವಯನಾಡ್‌ನ‌ಲ್ಲಿ ಅಸುನೀಗಿದವರ ಸಂಖ್ಯೆ ಶನಿವಾರಕ್ಕೆ 357ಕ್ಕೆ ಏರಿಕೆಯಾಗಿದೆ. ಜತೆಗೆ ಇನ್ನೂ 206 ಮಂದಿ ನಾಪತ್ತೆಯಾಗಿದ್ದಾರೆ. ಅವರನ್ನು ಶ್ವಾನದಳ ಮತ್ತು ಸುಧಾರಿತ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಕುಸಿದು ಬಿದ್ದ ಅವಶೇಷಗಳ ನಡುವೆ ಸಿಕ್ಕಿ ಹಾಕಿಕೊಂಡಿರುವ ಮತ್ತಷ್ಟು ಮೃತದೇಹಗಳು ಪತ್ತೆಯಾಗುವ ಸಾಧ್ಯತೆಯನ್ನು ರಕ್ಷಣ ಕಾರ್ಯಕರ್ತರು ತಳ್ಳಿ ಹಾಕುತ್ತಿಲ್ಲ. ಹೀಗಾಗಿ, ಅಸುನೀಗಿದವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಕೇರಳ ಸರಕಾರದ ಮಾಹಿತಿಯಂತೆ ಇದುವರೆಗೆ 341 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅವುಗಳ ಪೈಕಿ 146 ಮೃತದೇಹ ಗಳನ್ನು ಗುರುತು ಪತ್ತೆ ಮಾಡಲಾಗಿದೆ.

ಭೂಕುಸಿತ ಸಂತ್ರಸ್ತರಿಗೆ ಟೌನ್‌ ಶಿಪ್‌ ನಿರ್ಮಾಣ:ಕೇರಳ ಸಿಎಂ
ಭೂಕುಸಿತದಲ್ಲಿ ನಿರಾಶ್ರಿತರಾದವರಿಗೆ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಸುರಕ್ಷಿತ ಪ್ರದೇಶ ಗಳಲ್ಲಿ ಟೌನ್‌ಶಿಪ್‌ ನಿರ್ಮಾಣ ಮಾಡಲಾಗುತ್ತದೆ ಎಂದು ಕೇರಳ ಸಿಎಂ ಪಿಣ ರಾಯಿ ವಿಜಯನ್‌ ಹೇಳಿ ದ್ದಾರೆ. ವಯನಾಡ್‌ನ‌ಲ್ಲಿ ಮಾತನಾಡಿ, ಪುನರ್ವಸತಿ ಕಲ್ಪಿಸುವ ಯೋಜನೆಯನ್ನು ಶೀಘ್ರ ಆರಂಭಿಸಲಾಗು ವುದು. ಮನೆ ನಿರ್ಮಿಸಲು ಅಗತ್ಯ ಭೂಮಿ, ಸಾಮಗ್ರಿಗಳನ್ನು ಒದಗಿಸಲು ಅನೇಕರು ಮುಂದೆ ಬಂದಿದ್ದಾರೆ. ಕರ್ನಾಟಕದಿಂದ 100 ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಅವರಿಗೆ ಕೃತಜ್ಞತೆ ಎಂದು ಹೇಳಿದ್ದಾರೆ.

Advertisement

ಮುಂಡಕೈ ಗ್ರಾ.ಪಂ. ಸದಸ್ಯನ ವಾರ್ಡ್‌ ಪೂರ್ಣ ನಾಶ!
ವಯನಾಡ್‌ನ‌ ಭೂಕುಸಿತ ದಿಂದ ಮುಂಡಕೈ ಗ್ರಾಮ ಪಂಚಾಯತ್‌ನ ವಾರ್ಡ್‌ ಪೂರ್ಣವಾಗಿ ನಾಶವಾಗಿದೆ. ವಾರ್ಡ್‌ ಸದಸ್ಯ ಬಾಬು ಈ ಬಗ್ಗೆ ಮಾತನಾಡಿ ತಮ್ಮ ವಾರ್ಡ್‌ನಲ್ಲಿ 504 ಕಟ್ಟ ಡಗಳು ನೋಂದಣಿಯಾಗಿದ್ದವು. ಈ ಪೈಕಿ 460 ಮನೆಗಳೇ ಆಗಿದ್ದು, ಅವೆಲ್ಲವೂ ನಾಶವಾಗಿವೆ. 30 ಮನೆಗಳು ಮಾತ್ರ ಈಗ ಅಲ್ಲಿ ಇವೆ ಎಂದಿದ್ದಾರೆ.

ಇಷ್ಟು ಮಾತ್ರವಲ್ಲದೆ ವಾರ್ಡ್‌ನಲ್ಲಿ 864 ಮತದಾರರಿದ್ದರು. ಈ ಪೈಕಿ ಕೆಲವರ ಸುಳಿವೇ ಇಲ್ಲದಾಗಿದೆ ಎಂದು ಹೇಳಿದ್ದಾರೆ. ಈ ಪೈಕಿ ಹೆಚ್ಚಿನವರು ನನಗೆ ಪರಿಚಿತರೇ ಆಗಿದ್ದಾರೆ. ಎಲ್ಲರೂ ಒಂದಲ್ಲ ಒಂದು ರೀತಿ ಸಂಕಷ್ಟ ದಲ್ಲಿದ್ದಾರೆ. ಅವರ ಬದುಕು ಮೊದಲಿನಂತೆ ಇರುವು ದಿಲ್ಲ ಎಂದು ಹೇಳಿದ್ದಾರೆ. ಕಳೆದ ಮಂಗಳವಾರ ಸ್ಥಳಕ್ಕೆ ನಾನೇ ಮೊದಲು ತಲುಪಿ ಘಟನೆಯ ಅವಲೋಕನ ಮಾಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next