Advertisement

ಆಸೆಗಣ್ಣಿನ ಅಲೆಗಳು

07:59 PM Dec 20, 2019 | Team Udayavani |

Every dog must have his day- ಖ್ಯಾತ ಐರಿಷ್‌ ಲೇಖಕ ಜೊನಾಥನ್‌ ಸ್ವಿಫ್ಟ್ನ ಮಾತು, ಈ ನಾಯಿಯನ್ನು ಕಂಡಾಗ ನೆನಪಿಗೆ ಬಂತು. ಸಮುದ್ರವೆಂದರೆ, ಶ್ವಾನಗಳಿಗೂ ಅದೇನೋ ರೋಮಾಂಚನ. ಸಮುದ್ರ ಕಂಡಾಗ ಕೆಲವು ನೀರಿಗೆ ಜಿಗಿದರೆ, ಮತ್ತೆ ಕೆಲವು ಮರಳು ಬಗೆಯುವ ಕ್ರೀಡೆಯಲ್ಲಿ ತಲ್ಲೀನ. ತೀರದಲ್ಲಿ ಮೇಲೆ ಕೆಳಕ್ಕೆ ಜಿಗಿದು, ಉದ್ದಗಲಕ್ಕೂ ಓಡಾಡಿ, ಆಸೆ ಪೂರೈಸಿಕೊಳ್ಳುವ; ಮಾಲೀಕರು ಅಲೆಗಳತ್ತ ಎಸೆಯುವ ಚೆಂಡನ್ನು ಹಿಡಿಯುವ; ಸಿಕ್ಕಿದ್ದೇ ಅವಕಾಶವೆಂದು, ಮರಳ ಮೇಲೆ ವಿಶ್ರಾಂತಿ ಬಯಸುವ ವೈವಿಧ್ಯ ಶ್ವಾನಗಳು, ಸಾಗರ ತೀರದಲ್ಲಿ ಕಾಣಸಿಗುತ್ತವೆ. ಇಲ್ಲೊಂದು ಲ್ಯಾಬ್ರಡಾರ್‌, ಮಾಲೀಕರೊಂದಿಗೆ ಹತ್ತದಿನೈದು ನಿಮಿಷ ನೀರಿನಲ್ಲಿ ನಿಂತು, ತೀರದಲ್ಲಿ ಆಟವಾಡುತ್ತಿದ್ದ ತನ್ನ ಕುಲಬಾಂಧವರನ್ನು ಆಸೆಗಣ್ಣುಗಳಲ್ಲಿ ನೋಡುತ್ತಿತ್ತು.

Advertisement

* ಅಲ್‌ ವಕ್ರಾ ಬೀಚ್‌, ಕತಾರ್‌

Advertisement

Udayavani is now on Telegram. Click here to join our channel and stay updated with the latest news.

Next