ಇಂಗ್ಲೆಂಡಿನ 353 ರನ್ನುಗಳಿಗೆ ಜವಾಬಾಗಿ ಪಂದ್ಯದ 4ನೇ ದಿನವಾದ ರವಿವಾರ ನ್ಯೂಜಿಲ್ಯಾಂಡ್ 9 ವಿಕೆಟಿಗೆ 615 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. 262 ರನ್ ಹಿನ್ನಡೆಗೆ ಸಿಲುಕಿದ ಇಂಗ್ಲೆಂಡ್ ದ್ವಿತೀಯ ಸರದಿಯಲ್ಲಿ 3 ವಿಕೆಟಿಗೆ 55 ರನ್ ಗಳಿಸಿ ಸಂಕಟಕ್ಕೆ ಸಿಲುಕಿದೆ.
ಡ್ರಾ ಸಾಧ್ಯವೇ?
ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು, ಇಂಗ್ಲೆಂಡ್ ಉಳಿದ 7 ವಿಕೆಟ್‌ಗಳ ನೆರವಿನಿಂದ ಈ ಪಂದ್ಯವನ್ನು ಉಳಿಸಿಕೊಂಡೀತೇ ಎಂಬುದೊಂದು ಕುತೂಹಲ.
ವಾಟ್ಲಿಂಗ್ 473 ಎಸೆತ ಎದುರಿಸಿ ಜೀವನಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿದರು (24 ಬೌಂಡರಿ, 1 ಸಿಕ್ಸರ್). ಸ್ಯಾಂಟ್ನರ್ 269 ಎಸೆತಗಳ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ, 5 ಸಿಕ್ಸರ್ ಒಳಗೊಂಡಿತ್ತು.
Advertisement