Advertisement
ಹಲಗಲಿ ಗ್ರಾಮದಲ್ಲಿ ಕಳೆದ ವರ್ಷ ಸುರಿದ ಮಳೆಗೆ ಹತ್ತಾರು ಕಡು ಬಡವ ಕುಟುಂಬಗಳ ಮನೆಗಳು ಕುಸಿದು ಬಿದ್ದಿದ್ದವು. ಸರ್ಕಾರ ಮನೆ ಬಿದ್ದವರಿಗೆ ಪರಿಹಾರ ನೀಡುವುದಾಗಿ ಘೋಷಿಸಿ ಸ್ಥಳೀಯ ಅಧಿಕಾರಿಗಳಿಗೆ ಕುಸಿದ ಮನೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಿಎಂದು ಸೂಚಿಸಿತ್ತು. ಆದರೆ ಸರ್ಕಾರದ ಆದೇಶವನ್ನು ಸರಿಯಾಗಿ ಪಾಲಿಸುವಲ್ಲಿವಿಫಲವಾದ ಸ್ಥಳೀಯ ಅಧಿಕಾರಿಗಳು ಮನೆಕಳೆದುಕೊಂಡವರ ಮಾಹಿತಿ ಸರಿಯಾಗಿ ನೀಡದ ಕಾರಣ ಬಡವರು ಪರಿಹಾರ ಕಾಣದೆ ಕಂಗಾಲಾಗಿದ್ದಾರೆ.
Related Articles
Advertisement
ಗ್ರಾಮದಲ್ಲಿ ಮನೆ ಕುಸಿತಕ್ಕೊಳಗಾದವರು ಬಹುತೇಕರು ಕಡುಬಡವರಾಗಿದ್ದಾರೆ. ಮನೆ ಕುಸಿದ ವೇಳೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯವರು ಮನೆ ಪಟ್ಟಿ ಕಟ್ಟಿದರೆ ಮಾತ್ರ ಕುಸಿದ ಮನೆಗಳ ಪರಿಹಾರಕ್ಕಾಗಿಸರ್ವೇ ನಡೆಸುತ್ತೇವೆಂಬ ಅಲಿಖೀತ ನಿಯಮ ಮುಂದಿಟ್ಟಿದ್ದರು. ಸರ್ಕಾರದ ಪರಿಹಾರಕ್ಕಾಗಿನಾಗಪ್ಪ ಕುಂದರಗಿ ಸಾಲ ಮಾಡಿ ಅಂದಾಜು 8000 ರೂ. ಮನೆ ಪಟ್ಟಿ ತುಂಬಿದ್ದ. ಆದರೆಈಗ ಮನೆ ಪರಿಹಾರವೂ ಇಲ್ಲ, ಮಾಡಿದ ಸಾಲವೂ ತೀರದೆ ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ.
ಗುಡಿಸಲು ಮನೆಯಲ್ಲಿ ವಾಸ: ಇದೊಂದು ಮನೆ ಮಳೆಗೆ ಕುಸಿದಿದ್ದರಿಂದವರ್ಷದಿಂದ ಗುಡಿಸಲು ಮನೆಯಲ್ಲಿಯೇ ವಾಸಿಸುವ ಪರಿಸ್ಥಿತಿ ಬಡವರಿಗೆ ಎದುರಾಗಿದೆ. ಮಳೆಗಾಲದಲ್ಲಿ ಗುಡಿಸಲು ಮನೆ ಸೋರುತ್ತಿದೆ. ಸರ್ಕಾರದ ಪರಿಹಾರ ಬಂದಿದ್ದರೆ ಒಂದು ಸೂರು ಕಟ್ಟಿಕೊಳ್ಳಲು ಅನುವಾಗುತ್ತಿತ್ತು. ಆದರೆಅಧಿಕಾರಿಗಳ ನಿರ್ಲಕ್ಷ್ಯದಿಂದ ಅದೂ ಮರೀಚಿಕೆಯಾದಂತಾಗಿದೆ ಎನ್ನುತ್ತಾರೆ ನಾಗಪ್ಪ ಕುಂದರಗಿ.
ಯಾವ ಸುಳಿವೂ ಇಲ್ಲ: ಮನೆ ಕುಸಿದು ವರ್ಷ ಕಳೆದಿದೆ. ಸರ್ಕಾರದ ಪರಿಹಾರ ಸಿಗುತ್ತದೆ ಎಂಬುದರ ಬಗ್ಗೆ ನಮಗೆ ಯಾವುದೇ ಭರವಸೆ ಉಳಿದಿಲ್ಲ. ಕನಿಷ್ಠ ಪಕ್ಷ ನಮಗೆಪರಿಹಾರ ಬರುತ್ತದೆಯೋ ಇಲ್ಲವೋಎಂಬುದೂ ತಿಳಿಯುತ್ತಿಲ್ಲ ಎಂಬುದು ಮನೆ ಕಳಕೊಂಡವರ ಗೋಳು.
ಅಧಿಕಾರಿಗಳು ಹೇಳ್ಳೋದೇನು?: ಮನೆ ಕಳೆದುಕೊಂಡವರ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿದರೆ ಅವರು ಹೇಳುವುದೇ ಬೇರೆ. ಸದ್ಯ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡವರ ಬಗ್ಗೆ ನಮಗೆ ತಿಳಿದಿಲ್ಲ. ಆದರೆ ಕಳೆದ ವರ್ಷ ಬಿದ್ದ ಮನೆಗಳ ಪೈಕಿ ಮೊದಲ ಹಂತದಲ್ಲಿ 26 ಹಾಗೂದ್ವಿತೀಯ ಹಂತದಲ್ಲಿ 21 ಮನೆಗಳ ಸರ್ವೇ ಮಾಡಲಾಗಿದೆ ಎಂಬ ಉತ್ತರ ನೀಡುತ್ತಾರೆ.
ಮಳೆಗಾಲದಲ್ಲಿ ಗ್ರಾಮದಲ್ಲಿ ಕುಸಿತ ಕಂಡ ಮನೆಗಳ ಬಗ್ಗೆ ಎರಡು ಹಂತದಲ್ಲಿ ಸರ್ವೇ ಮಾಡಲಾಗಿದೆ.ಮೊದಲ ಹಂತದಲ್ಲಿ 26 ಹಾಗೂ ದ್ವಿತೀಯ ಹಂತದಲ್ಲಿ 21 ಮನೆಗಳ ಸರ್ವೇ ನಡೆಸಿ ಇಂಜಿನಿಯರ್ ನೀಡಿರುವವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಮಂಜುನಾಥ ಕರಿಗೌಡರ, ಹಲಗಲಿ ಗ್ರಾಪಂ ಪಿಡಿಒ
ಕಳೆದ ವರ್ಷ ಸುರಿದ ಮಳೆಗೆ ನಮ್ಮ ಮನೆಗಳು ಕುಸಿದಿವೆ. ಸ್ಥಳೀಯ ಅಧಿಕಾರಿಗಳು ಆಗ ಮನೆ ಬಿದ್ದ ಬಗ್ಗೆ ಪರಿಶೀಲನೆಮಾಡಿಕೊಂಡು ಹೋದರೂ ಇದೂವರೆಗೂ ಯಾವುದೇ ರೀತಿಯ ಪರಿಹಾರ ಬಂದಿಲ್ಲ. ಆದ್ದರಿಂದ ನಾವು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ.– ಈರಪ್ಪ ಬಿಸನಾಳ, ಮನೆ ಕಳೆದುಕೊಂಡ ಸಂತ್ರಸ್ತ
ಗೋವಿಂದಪ್ಪ ತಳವಾರ