Advertisement

ಕಲ್ಲಂಗಡಿ ತೋಟಕ್ಕೆ ಕರಡಿ ದಾಳಿ: ಅಧಿಕಾರಿಗಳಿಂದ ಪರಿಶೀಲನೆ

07:43 PM Dec 29, 2021 | Team Udayavani |

ಕುಷ್ಟಗಿ: ಕರಡಿಗಳಿಗೆ ಕಲ್ಲಂಗಡಿ ಹಣ್ಣು ಎಂದರೆ ತುಂಬಾ ಇಷ್ಟವಾಗಿರುವ ಹಿನ್ನೆಲೆಯಲ್ಲಿ ಪುನಃ ದಾಳಿ‌ ಮಾಡುವ ಸಾದ್ಯತೆಗಳಿರುತ್ತವೆ ಎಂದು ಪ್ರಾದೇಶಿಕ ಅರಣ್ಯ ಇಲಾಖೆಯ ಉಪ ವಲಯಾಧಿಕಾರಿ ರಿಯಾಜ್ ಗನಿ ಹೇಳಿದರು.

Advertisement

ಬುಧವಾರ ಬೆಳಗ್ಗೆ ಹೊನಗಡ್ಡಿ ಗ್ರಾಮದ ಶರಣಪ್ಪ ಮ್ಯಾದನೇರಿ ಅವರ ಕಲ್ಲಂಗಡಿ ತೋಟಕ್ಕೆ ಭೇಟಿ ನೀಡಿ, ಕರಡಿಗಳಿಂದಾಗಿರುವ ಹಾನಿಯನ್ನು ಸ್ಥಾನಿಕವಾಗಿ ಪರಿಶೀಲಿಸಿದರು.

ಕರಡಿಗಳಿಂದ ಕಲ್ಲಂಗಡಿ ಉತ್ಪನ್ನ ಹಾನಿಯಾಗಿದ್ದು ಇಲಾಖೆಯಿಂದ ಪರಿಹಾರಕ್ಕೆ ಪತ್ರ ಬರೆಯುವ ಭರವಸೆ ನೀಡಿದರು.ರೈತ ಶರಣಪ್ಪ ಮ್ಯಾದನೇರಿ ಅವರ ಕಲ್ಲಂಗಡಿ ತೋಟದಲ್ಲಿ ಕರಡಿಗಳ ದಾಳಿಯ ನಂತರ  ಒಣ ಭೂಮಿಯಾಗಿದ್ದರಿಂದ ಹೆಜ್ಜೆ ಗುರುತು ಮೂಡಿಲ್ಲ. ಹಣ್ಣುಗಳನ್ನು ಉಗುರುಗಳಿಂದ ಕಿತ್ತುಕೊಂಡು ತಿಂದಿವೆ. ಕರಡಿಗಳಿಗೆ ಹಸಿವಾದರೆ ಈ ರೀತಿ ದಾಳಿ ಇಟ್ಟು ಹಾಳು ಮಾಡುತ್ತವೆ. ಇದನ್ನು ನಿಯಂತ್ರಿಸಲು ಡಿ.30 ರಂದು ಕರಡಿಗಳ ಚಲನ ವಲನ ಗಮನಿಸಿ ಬೋನು ಇಡುವ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಕನಕಗಿರಿ, ಯಲಬುರ್ಗಾ ತಾಲೂಕುಗಳ ಗಡಿ ಪ್ರದೇಶದಲ್ಲಿ ಗುಡ್ಡಗಾಡು ಪ್ರದೇಶವಿದೆ.ಕರಡಿಗಳಿಂದ ದಾಳಿಯಾಗಿರುವ ಪ್ರದೇಶ ಕುಷ್ಟಗಿ ತಾಲೂಕಿನ ಹೊನಗಡ್ಡಿ ಪ್ರದೇಶವಾಗಿದೆ. ಮೂರು ತಾಲೂಕಿನ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಳ್ಳಬೇಕಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಗನಿ ಉದಯವಾಣಿ ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next