Advertisement

ಬೇಸಿಗೆ ದಾಹ ತಣಿಸಲು ಕಲ್ಲಂಗಡಿ ಮೊರೆ

01:23 PM Mar 14, 2022 | Team Udayavani |

ಜಗಳೂರು: ಬೇಸಿಗೆ ಕಾಲ ಪ್ರಾರಂಭವಾಗಿದ್ದು, ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಜನರು ತಂಪು ಪಾನಿಯ, ಎಳ ನೀರು, ಕಬ್ಬಿನ ಹಾಲು, ಕಲ್ಲಂಗಡಿ ಹಣ್ಣಿನ ಮೊರೆಹೋಗಿ ದಾಹ ತಿರಿಸಿಕೊಳ್ಳುತತಿದ್ದಾರೆ.

Advertisement

ಪಟ್ಟಣದ ಗಾಂಧಿ ವೃತ್ತ, ಭುವನೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ತಾಲೂಕು ಕಚೇರಿ, ತೋಟಗಾರಿಕೆ ಇಲಾಖೆಯ ಮುಂಭಾಗದಲ್ಲಿ ಕಲ್ಲಂಗಡಿ ವ್ಯಾಪಾರಿಗಳು ಶಾಮಿಯಾನ ಹಾಕಿ ಹತ್ತಾರು ಟನ್‌ ಕಲ್ಲಂಗಡಿಗಳನ್ನು ತಂದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.

ಆಯಾ ಋತುಮಾನಗಳಿಗೆ ಅನುಗುಣವಾಗಿ ಹಣ್ಣುಗಳ ಬೇಡಿಕೆ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಜಾಸ್ತಿ. ಕಲ್ಲಂಗಡಿ ಹಣ್ಣಿನಲ್ಲಿ ಶೇ.92ರಷ್ಟು ನೀರಿನಾಂಶವಿದ್ದು, ಇದನ್ನು ಸೇವನೆ ಮಾಡಿದಾಗ ದೇಹಕ್ಕೆ ಬೇಕಾಗುವ ನೀರಿನಾಂಶ ದೊರೆಯುವುದು. ಅದೇ ರೀತಿ ಕಲ್ಲಂಗಡಿ ಹಣ್ಣಿನ ಸಿಪ್ಪೆ, ಬೀಜವನ್ನು ಕೂಡ ಬಳಕೆ ಮಾಡಬಹುದು. ಇದು ಬೇಸಿಗೆಯಲ್ಲಿ ದೇಹಾರೋಗ್ಯಕ್ಕೆ ತುಂಬಾ ಒಳ್ಳೆಯದು.

100 ಗ್ರಾಂ ಕಲ್ಲಂಗಡಿ ಹಣ್ಣಿನಲ್ಲಿ ಕೇವಲ 30 ಗ್ರಾಂ ಕ್ಯಾಲರಿ ಮಾತ್ರವಿರುತ್ತದೆ. ಇದು ಬಾಯಾರಿಕೆ ಹಾಗೂ ಹಸಿವು ಕಡಿಮೆ ಮಾಡುತ್ತದೆ. ಅರ್ಜಿನೈನ್‌ ಎನ್ನುವ ಅಮೀನೋ ಆಮ್ಲವಿದ್ದು, ಇದು ಹೊಟ್ಟೆಯ ಭಾಗದಲ್ಲಿನ ಕೊಬ್ಬನ್ನು ಶೇ.60ರಷ್ಟು ಕಡಿಮೆ ಮಾಡುತ್ತದೆ. ಒಟ್ಟಾರೆಯಾಗಿ ಮನುಷ್ಯನ ಉತ್ತಮ ಆರೋಗ್ಯಕ್ಕೆ ಈ ಹಣ್ಣು ಉತ್ತಮವಾಗಿದೆ ಆದ್ದರಿಂದ ಕಲ್ಲಂಗಡಿ ಹಣ್ಣಿನ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ವೈದ್ಯರು.

ಪಟ್ಟಣದಲ್ಲಿ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಕಲ್ಲಂಗಡಿ ಹಣ್ಣಿನ ಅಂಗಡಿ ಮುಂದೆ ಜನವೋ ಜನ ಎನ್ನುವಂತಾಗಿದೆ. ಕಚೇರಿಗೆ ಕೆಲಸಕ್ಕೆ ಬರುವ ಅಧಿ ಕಾರಿಗಳು, ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಬಿಸಿಲಿನ ಜಳದಿಂದ ತಪ್ಪಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ.

Advertisement

ತಾಲೂಕಿನಲ್ಲಿ ಈ ಹಿಂದೆ ಕಲ್ಲಂಗಡಿ ಬೆಳೆ ಬೆಳೆಯಾಲಾಗುತ್ತಿತ್ತು ಆದರೆ ಇತ್ತೀಚೆಗೆ ಕಲ್ಲಂಗಡಿ ಹಣ್ಣಿನ ಬೆಳೆ ತೀರಾ ಕಡಿಮೆಯಾಗಿದ್ದು, ವ್ಯಾಪಾರಸ್ಥರು ದೂರದ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಣ ಸೇರಿದದಂತೆ ವಿವಿಧ ರಾಜ್ಯಗಳಿಂದ ನೂರಾರು ಟನ್‌ ಹಣ್ಣುಗಳನ್ನು ರವಾನೆ ಮಾಡಿಕೊಂಡು ಬಂದು ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

 

ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ವ್ಯಾಪಾರ ವಹಿವಾಟು ನೆಲಕಚ್ಚಿತ್ತು. ಈ ಬಾರಿ ಕೊರೊನಾ ಕಡಿಮೆ ಇರುವುದರಿಂದ ಪ್ರತಿನಿತ್ಯ 300 ಕೆ.ಜಿ ಹಣ್ಣು ಮಾರಾಟವಾಗುತ್ತಿದೆ.

-ಸದ್ದಾಂ, ಕಲ್ಲಂಗಡಿ ಹಣ್ಣಿನ ವ್ಯಾಪಾರಿ.

ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಕಲ್ಲಂಗಡಿ ಪಟ್ಟಣಕ್ಕೆ ಬರುತ್ತದೆ. ಟನ್‌ಗೆ 20ರಿಂದ 22 ಸಾವಿರಕ್ಕೆ ತಂದು 25 ಸಾವಿರಕ್ಕೆ ಮಾರಾಟ ಮಾಡುತ್ತೇವೆ.

-ಹಸೇನ್‌, ಕಲ್ಲಂಗಡಿ ಹಣ್ಣಿನ ವ್ಯಾಪಾರಿ.

ಋತುಮಾನಗಳಿಗೆ ತಕ್ಕಂತೆ ಎಲ್ಲ ಹಣ್ಣುಗಳ ವ್ಯಾಪಾರ ಮಾಡುತ್ತೇವೆ. ಆದರೆ ಕಲ್ಲಂಗಡಿ ಹಣ್ಣಿನ ವ್ಯಾಪಾರ ಮಾತ್ರ ಚೆನ್ನಾಗಿ ಆಗುತ್ತಾದೆ.

-ಮಹಬೂಬ್‌ ಸಾಬ್‌, ಹಣ್ಣಿನ ವ್ಯಾಪಾರಿ.

–ರವಿಕುಮಾರ ಜೆ.ಒ. ತಾಳಿಕೆರೆ

Advertisement

Udayavani is now on Telegram. Click here to join our channel and stay updated with the latest news.

Next