Advertisement
12ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಏಳು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೆರೆ ಸುತ್ತಲಿನ ಅಂತರ್ಜಲ ವೃದ್ಧಿಗೆ, ಜೀವ ವೈವಿಧ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಲವಾರು ವರ್ಷಗಳಿಂದ ನೀರಕ್ಕಿಗಳು ಇಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದವು. ಆದರೆ ಈಗ ವಿರಳವಾಗಿವೆ ಎನ್ನುತ್ತಾರೆ ಪಕ್ಷಿ ವೀಕ್ಷಕರು.
ಸ್ಯಾಂಡ್ ಪೈಪರ್, ವುಡ್ ಸ್ಯಾಂಡ್ ಪೈಪರ್ ಸಹಿತ ಮೊದಲಾದ ನೀರಕ್ಕಿಗಳನ್ನು ಕಾರ್ಕಳ ಪರಿಸರದ ಕೆರೆ, ನದಿ, ಜರಿಗಳಲ್ಲಿ ಕಾಣಬಹುದು. ಆದರೆ, ಇವು ಆನೆಕೆರೆಯಲ್ಲಿ ಕಡಿಮೆಯಾಗುತ್ತಿದೆ. ಒಂದೇ ಒಂದು ನೀರಕ್ಕಿ ಕಾಣ ಸಿಕ್ಕಿಲ್ಲ
ಆನೆಕೆರೆಯಲ್ಲಿ ಈ ಹಿಂದೆ ಸಾಕಷ್ಟು ಸಂಖ್ಯೆಯಲ್ಲಿ ನೀರಕ್ಕಿಗಳು ಕಾಣಸಿಗುತ್ತಿದ್ದವು. ಇತ್ತೀಚಿನ ಮುಂಜಾನೆ ವೀಕ್ಷಣೆಯಲ್ಲಿ ಒಂದೇ ಒಂದು ನೀರಕ್ಕಿ ಕಾಣ ಸಿಕ್ಕಿಲ್ಲ. ಆಹಾರ ಸರಪಳಿಯಲ್ಲಾಗಿರುವ ಅಡಚಣೆಯಿಂದ ಹೀಗಾಗಿರುವ ಸಾಧ್ಯತೆ ಇರಬಹುದು.
ಜೀವ ವೈವಿದ್ಯತೆಗಳು ಸಮೃದ್ಧವಾಗಿದ್ದಲ್ಲಿ ಆರೋಗ್ಯಕರ ಪರಿಸರ ಎಂದು ಪರಿಗಣಿಸಬಹುದು. ಪರಿಸರವನ್ನು
ಸ್ವಚ್ಛವಾಗಿರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ನಡೆದಲ್ಲಿ ನಿಖರವಾದ ಕಾರಣ ತಿಳಿಯಬಹುದು.
*ಶಿವಶಂಕರ್ ಕಾರ್ಕಳ, ಪಕ್ಷಿ ವೀಕ್ಷಕರು ಮತ್ತು ಅಧ್ಯಯನಕಾರರು
Related Articles
Advertisement
ಕೆರೆಗೆ ಸೇರುತ್ತಿದೆ ತ್ಯಾಜ್ಯಆನೆಕೆರೆಯಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಬಾಟಲಿ, ಮದ್ಯದ ಬಾಟಲಿಗಳು ಕೆರೆಯಲ್ಲಿ ಕಾಣಸಿಗುತ್ತಿವೆ. ಪಾರ್ಕ್ ನಲ್ಲಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಡಸ್ಟ್‌ಬಿನ್ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲವರು ತ್ಯಾಜ್ಯವನ್ನು ಕೆರೆಗೆ ಎಸೆಯುವುದರಿಂದ ಕೆರೆ ಮಾಲಿನ್ಯವಾಗುತ್ತಿದೆ ಎಂಬುದು ಸ್ಥಳೀಯರ ಅಸಮಾಧಾನ. ವಿರಳವಾಗಲು ಕಾರಣಗಳೇನು?
*ತ್ಯಾಜ್ಯ, ಪ್ಲಾಸ್ಟಿಕ್ನಿಂದಾಗಿ ಜಲಮೂಲ ಕಲುಷಿತವಾಗುತ್ತಿದ್ದು, ಇವು ಜಲಚರಗಳಿಗೆ ಅಪಾಯಕಾರಿ. ಜಲಚರಗಳು ಕಡಿಮೆಯಾದರೆ ನೀರಕ್ಕಿಗಳು ಬರುವುದಿಲ್ಲ! *ನೀರಕ್ಕಿಗಳಿಗೆ ಪೂರಕವಾಗಿ ಜಲಚರ ಜೀವಿ, ಕೆರೆ, ನದಿ ಪರಿಸರ ಇಲ್ಲದಿದ್ದರೆ ಅವುಗಳ ಆರೋಗ್ಯದ ಮೇಲೂ ಪರಿಣಾಮ ಬೀರಿ ಸಂತತಿ ಕಡಿಮೆ ಆಗುತ್ತದೆ. ನೀರಕ್ಕಿಗಳ ಪ್ರಮುಖ ಪಾತ್ರವೇನು?
*ಮೀನು, ಹುಳುಗಳನ್ನು ಇವು ಸೇವಿಸುತ್ತವೆ. ಹದ್ದುಗಳು, ನರಿಗಳು, ಹಾವುಗಳಿವೆ ಇವು ಆಹಾರ. ಹೀಗಾಗಿ ಆಹಾರ ಸರಪಳಿಯ ಪ್ರಮುಖ ಕೊಂಡಿ. *ಕೀಟ, ಜಲಚರ, ಸಸ್ಯಗಳನ್ನು ತಿನ್ನುವ ಮೂಲಕ ಕೊಳಗಳು ಶುದ್ಧವಾಗಿರುತ್ತವೆ. *ಅವಿನ್ ಶೆಟ್ಟಿ