Advertisement

ನೀರನು ಮಿತವಾಗಿ ಬಳಸಿ: ಶಾಸಕ

02:04 PM Mar 05, 2022 | Team Udayavani |

ಬಂಗಾರಪೇಟೆ: ನೀರು ಜಗತ್ತಿನ ಎಲ್ಲ ಜೀವ ಸಂಕುಲಗಳ ಬದುಕಿಗೆ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಈ ಜೀವಜಲವನ್ನು ಮಿತವಾಗಿ ಬಳಸಿದರೆ ಮಾತ್ರ ಭವಿಷ್ಯದ ಪೀಳಿಗೆಗೂ ಉಳಿಸಬಹುದು ಎಂದು ಶಾಸಕ ಎಸ್‌.ಎನ್‌. ನಾರಾಯಾಣಸ್ವಾಮಿ ಹೇಳಿದರು.

Advertisement

ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂ ಹುದುಕುಳ ಗ್ರಾಮದಲ್ಲಿ ಸುಸ್ಥಿರ ಅಂತರ್ಜಲ ವೃದ್ಧಿಗೆ ಅಟಲ್‌ ಭೂಜಲ ಯೋಜನೆಯ ಕರಿತು ಹಳ್ಳಿಗಳಲ್ಲಿ ಅರಿವು ಮೂಡಿಸುವ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಬರಪೀಡಿತ ಜಿಲ್ಲೆಯಾಗಿರುವ ಕೋಲಾರದಲ್ಲಿ ನೀರನ್ನು ಮಿತವಾಗಿ ಬಳಸಬೇಕು. ಮಳೆ ನೀರನ್ನು ಸಂರಕ್ಷಣೆ ಮಾಡಿ ಮರುಪೂರ್ಣ ಮಾಡಬೇಕು. ಅದಕ್ಕಾಗಿ ಕೊಳವೆ ಬಾವಿ, ತೋಡುಬಾವಿ ಸೇರಿದಂತೆ ಅಂತರ್ಜಲ ಬಳಸಿಕೊಂಡು ನೀರಾವರಿ ಆಧಾರಿತ ಕೃಷಿ ಮಾಡುವವರಿಗೆ ಎಚ್ಚರಿಕೆಯಿಂದ ನೀರು ಬಳಸುವ ಅರಿವಿರಬೇಕು ಎಂದರು.

ದೇಶದಲ್ಲಿ ಜನಸಂಖ್ಯಾ ಸ್ಫೋಟ, ಆಧುನಿಕತೆಯ ಪ್ರಭಾವ, ವಿಸ್ತಾರಗೊಳ್ಳುತ್ತಿರುವ ನಗರೀಕರಣ ದಂತಹಬೆಳವಣಿಗೆಗಳು ಅತಿಯಾದ ಅಂತರ್ಜಲ ಬಳಕೆಗೆ ಕಾರಣವಾಗುತ್ತಿದೆ. ಕೆಸಿ ವ್ಯಾಲಿ ಯೋಜನೆ ಜಿಲ್ಲೆಗೆವರದಾನವಾಗಿದ್ದು, ಎರಡನೇ ಅಂತಹ ಕೆಸಿ ವ್ಯಾಲಿಯೋಜನೆ ಜಾರಿಗೆ 450 ಕೋಟಿ ಮಂಜೂರಾಗಿದೆ. ಇದು ಕಾರ್ಯಗತವಾದರೆ ಕಸಬಾ ಹೋಬಳಿ ಎಲ್ಲ ಗ್ರಾಮಗಳಕೆರೆಗಳು ತುಂಬಿ ರೈತರ ಕೃಷಿಗೆ ಸಮೃದ್ಧಿಯಾಗಿ ನೀರು ಲಭ್ಯವಾಗಲಿದೆ ಎಂದರು.

ಹಿರೇಕರಪನಹಳ್ಳಿ ಕಲಾವಿದ ಯಲ್ಲಪ್ಪ ತಂಡ ಬೀದಿ ನಾಟಕ ಹಾಗೂ ಹಾಡುಗಾರಿಕೆಯಿಂದ ನೀರಿನ ಮಿತ ಬಳಕೆ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು. ಚಿಕ್ಕಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷ ಸಿ.ಎಂ. ಹರೀಶ್‌ ಕುಮಾರ್‌, ಟ್ರೀಸ್‌ ಸಂಸ್ಥೆಯ ಐಪಲ್ಲಿ ನಾರಾಯಣಸ್ವಾಮಿ, ಬಾಲು, ಹುದುಕುಳ ರವಿ, ಹನುಮಪ್ಪ, ಮುಖಂಡ ಶ್ರೀರಾಮ್‌, ಬಸವೇಗೌಡ, ಸುಹೇಲ್‌, ವೆಂಕಟರಾಮಶೆಟ್ಟಿ, ಪಿಡಿಒ ಚಿತ್ರಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next