Advertisement

ವಾಟರ್‌ ಟವರ್‌: ಸ್ಮಾರ್ಟ್‌ಸಿಟಿಯ ಆದ್ಯತೆಯಾಗಲಿ

11:44 PM Aug 24, 2019 | Team Udayavani |

ಭಾರತ ನಗರೀಕರಣಕ್ಕೆ ತೆರೆದುಕೊಂಡಿದೆ. ಇದಕ್ಕೆ ಪೂರಕವಾಗಿಯೇ ದೇಶದಲ್ಲಿ ನಗರಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆ, ಬಹುಮಹಡಿ ಕಟ್ಟಡ, ಹೊಟೇಲ್, ರೆಸ್ಟೋರೆಂಟ್, ಪಾರ್ಕ್‌ , ಬಸ್‌ ನಿಲ್ದಾಣ ಸಹಿತ ಹಲವಾರನ್ನು ಅತ್ಯಾಧುನಿಕವಾಗಿ ನಿರ್ಮಿಸಿ ನಗರವನ್ನು ಶ್ರೀಮಂತಗೊಳಿಸುತ್ತಿದ್ದೇವೆ. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಇದು ಎಷ್ಟು ಪೂರಕವಾಗಬಲ್ಲದು. ಇದು ಎಲ್ಲರಿಗೂ ವಾಸಿಸಲು ವಸತಿ ಸೌಲಭ್ಯ ಸಿಗಲಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ.

Advertisement

ಆದರೆ ಈ ಪ್ರಶ್ನೆಗೆ ಉತ್ತರವಾಗಿ ನಾವು ಮಿಕ್ಸ್‌ ಯೂಸ್ಡ್ ಬಿಲ್ಡಿಂಗ್‌ (ಮಿಶ್ರ ಕಟ್ಟಡ ಮಾದರಿ)ಯಲ್ಲಿ ನಿರ್ಮಿಸಿದಾಗ ಸಮರ್ಪಕವಾಗಿ ನಗರದ ಎಲ್ಲ ಜನರಿಗೂ ವಸತಿ ದೊರಕಿಸಬಹುದು ಎಂದು ಈ ಹಿಂದೆ ತಿಳಿಸಲಾಗಿತ್ತು. ಈ ಮಾದರಿಯ ಬಹುಮಹಡಿ ಕಟ್ಟಡದಲ್ಲಿ ಒಂದೇ ಸೂರಿನಡಿ ಹಲವು ಮಾದರಿ ಪ್ರಯೋಗಗಳನ್ನು ಮಾಡಬಹುದು. ಅಂದರೆ ವಾಸಿಸುವ ಬಹುಮಹಡಿ ಕಟ್ಟಡದಲ್ಲಿ ಆಫೀಸ್‌, ಮನೆ, ರೆಸ್ಟೋರೆಂಟ್, ಥಿಯೇಟರ್‌ ಸಹಿತ ನಿರ್ಮಿಸಿ ನಾವು ಮಾದರಿಯಾಗಿ ವಾಸಿಸಬಹುದು. ಹಾಗೆಯೇ ಇದೇ ಮಿಕ್ಸ್‌ ಯೂಸ್ಡ್ ಬಿಲ್ಡಿಂಗ್‌ ಮಾದರಿಯಲ್ಲಿ ಡೆನ್ಮಾರ್ಕ್‌ನ ಜೇಗಸ್ಬರ್ಗ್‌ ಎಂಬಲ್ಲಿ ಬಹುಮಹಡಿ ಕಟ್ಟಡಲ್ಲಿ ವಾಟರ್‌ ಟವರ್‌ ನಿರ್ಮಿಸಿ ಎಲ್ಲ ಬೆಳೆಯುತ್ತಿರುವ ನಗರಗಳಿಗೆ ಮಾದರಿಯಾಗಿದ್ದಾರೆ.

ಒಂದೇ ಸೂರಿನಡಿ ಹಲವು ಉಪಯೋಗ
ಇದರ ನಿರ್ಮಾಣದಿಂದ ನಾವು ನಗರೀಕರಣಕ್ಕೆ ಆಶಯವಾಗಿ ಉಪಯೋಗವಾಗಿ ಪಡೆದುಕೊಳ್ಳಬಹುದು. ಒಂದು ಕಟ್ಟಡ ಹಲವು ಮಾದರಿಯಲ್ಲಿ ಉಪಯೋಗವಾದಾಗ ಜನಸಂಖ್ಯೆ ವಾಸಿಸಲು ಜಾಗ ಮಾಡಿಕೊಳ್ಳಬಹುದು. ಒಂದು ಕಟ್ಟಡವನ್ನು ಕೇವಲ ವಾಸಿಸಲು ಮಾತ್ರವಲ್ಲದೇ ನೀರಿನ ಸಂಗ್ರಹಕ್ಕೆ, ಮಳೆ ನೀರಿನ ಕೊಯ್ಲುಗೆ ಮಾದರಿಯಾಗಿ ವಾಟರ್‌ ಟವರ್‌ನಿಂದ ಉಪಯೋಗಿಸಿಕೊಳ್ಳಬಹುದಾಗಿದೆ. ಜನ ವಸತಿಗೆ ಇದು ಪೂರಕವಾಗವಬಹುದು. ಇಂದು ಭಾರತದಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶದಲ್ಲಿ ವಸತಿ ಸಮಸ್ಯೆಯೇ ಒಂದು ದೊಡ್ಡ ತಲೆ ನೋವಾಗಿದೆ. ಈ ಮಾದರಿಯಲ್ಲಿ ನಾವು ಅಳವಡಿಸಿಕೊಂಡರೇ ಸ್ವಲ್ಪ ಪ್ರಮಾಣದಲ್ಲಾದರೂ ಪರಿಹಾರ ಕಂಡುಕೊಳ್ಳಬಹುದು. ಹೀಗಾಗಿ ಭಾರತದಂತ ದೇಶಗಳಿಗೆ ಡೆನ್ಮಾರ್ಕ್‌ನ ಜೇಗಸ್ಬರ್ಗ್‌ ಈ ಮಾದರಿ ತುಂಬಾ ಅನುಕೂಲವಾಗಲಿದೆ. ವಾಸ್ತವದಲ್ಲಿ ಸರಿಹೊಂದಲಿದೆ. ಮಂಗಳೂರಿಗೆ ಬರಲಿ

ಇನ್ನು ಇದಕ್ಕೆ ಉತ್ತರವೆಂಬಂತೆ, ಮಂಗಳೂರು ನಗರವೂ ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿದ್ದು, ನಗರದಲ್ಲಿ ಹಲವು ಮಾದರಿ ಗಗನ ಚುಂಬಿ ಹಾಗೂ ಬಹುಮಹಡಿ ಕಟ್ಟಡಗಳು ಕಾಣಬಹುದು. ಈ ಕಟ್ಟಡಗಳು ಕೇವಲ ಒಂದೇ ಉಪಯೋಗಕ್ಕಾಗಿ ಬಳಸದೇ ವಾಟರ್‌ ಟವರ್‌ ನಿರ್ಮಿಸಿ ಬಹು ಮಾದರಿಯಾಗಿ ಬಳಕೆ ಮಾಡಿದಾಗ ನಗರೀಕರಣ ಹಲವು ಸಮಸ್ಯೆಗಳಿಗೆ ಉತ್ತರವಾಗಲಿದೆ. ಇನ್ನು ಆಡಳಿತ ವ್ಯವಸ್ಥೆಯೂ ಕೂಡ ಸ್ಮಾರ್ಟ್‌ ಸಿಟಿ ಆದ್ಯತೆಗಳಲ್ಲಿ ಮಿಶ್ರ ಕಟ್ಟಡ ಮಾದರಿಯಾಗಿ ವಾಟರ್‌ ಟವರ್‌ ನಿರ್ಮಿಸಿದಾಗ ಕಳೆದ ಬೇಸಗೆಯಲ್ಲಿ ಬಂದಿದ್ದ ನೀರಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ.

ನಿರ್ಮಾಣ ಹೇಗೆ?
ವಾಟರ್‌ ಟವರ್‌ ನಿರ್ಮಾಣವೂ ಬಹುತೇಕ ತಂತ್ರಜ್ಞಾನ ಪೂರಿತವಾಗಿ ನಿರ್ಮಿಸಲಾಗಿದೆ. ಡೆನ್ಮಾರ್ಕ್‌ ಜನರ ಅಗತ್ಯ ಹಾಗೂ ಸ್ಥಳದ ಅಭಾವವನ್ನು ಗಮನದಲ್ಲಿ ಟ್ಟುಕೊಂಡು ಒಂದೇ ಸೂರಿನಡಿ, ಹಲವು ಉಪಯೋಗ ಎಂಬಂತೆ ವಾಟರ್‌ ಟವರ್‌ನ್ನು ನಿರ್ಮಿಸಲಾಗಿದೆ. ಈ ವಾಟರ್‌ ಟವರ್‌ ಸಂಪೂರ್ಣ ಕಾಂಕ್ರೀಟ್ನಿಂದ ರಚಿಸಲಾಗಿದೆ. ಕಟ್ಟಡದ ಒಂದು ಹೊರ, ಒಂದು ಒಳಗಿನ ಕಾಲಮ್‌ಗಳು ಮಹಡಿ ಗಳಿಗೆ ಹೊಂದಿಕೊಂಡುನಿರ್ಮಿಸಲಾಗಿದೆ.

Advertisement

ಏನಿದು ವಾಟರ್‌ ಟವರ್‌
ವಾಟರ್‌ ಟವರ್‌ ಬಿಲ್ಡಿಂಗ್‌ ಇದು ಮಿಕ್ಸ್‌ ಯೂಸ್ಡ್ ಬಿಲ್ಡಿಂಗ್‌ (ಮಿಶ್ರ ಕಟ್ಟಡ ಮಾದರಿ)ಗೆ ಪೂರಕವಾಗಿ ನಿರ್ಮಿಸಲಾಗಿದೆ. ಡೆನ್ಮಾರ್ಕ್‌ನ ಜೇಗಸºರ್ಗ್‌ನ ಸುಮಾರು 12 ಅಂತಸ್ತಿನಲ್ಲಿ ಬಹು ಮಹಡಿ ಕಟ್ಟಡದಲ್ಲಿ ನಿರ್ಮಿಸಲಾಗಿದೆ. ಕೆಳಗಡೆ ವಾಸಿ ಸುವ ಮನೆಗಳಿದ್ದು, ಮೇಲೆ ವಾಟರ್‌ ಟವರ್‌ನ್ನು ಅತ್ಯಾಧುನಿಕವಾಗಿ ಮಳೆ ನೀರನ್ನು ಸಂಗ್ರಹಿಸಲು, 12 ಅಂತಸ್ತಿನ ಕಟ್ಟಡದ ಜನರಿಗೆ ನೀರು ಪೊರೈಸಲು ಈ ಮಾದರಿ ವಾಟರ್‌ಟವರ್‌ ಸಹಾಯವಾಗಿದೆ.

•ಶಿವ ಸ್ಥಾವರಮಠ

Advertisement

Udayavani is now on Telegram. Click here to join our channel and stay updated with the latest news.

Next