ಶಿಡ್ಲಘಟ್ಟ: ಸತತ ಬರಗಾಲದಿಂದ ತತ್ತರಿಸುತ್ತಿರುವ ಅವಿಭಜಿತ ಕೋಲಾರ ಜಿಲ್ಲೆಗೆ ಹೆಬ್ಟಾಳ ಮತ್ತು ನಾಗ ವಾರ ಕೆರೆಗಳ ಶುದ್ಧೀರಿಸಿದ ನೀರು ಜಿಲ್ಲಾ ಕೇಂದ್ರಕ್ಕೆ ಹರಿಯುತ್ತಿದ್ದು, ಮುಂಬರುವ ಆಗಸ್ಟ್ ಅಂತ್ಯದೊಳಗೆ ಶಿಡ್ಲಘಟ್ಟ ತಾಲೂಕಿನ ಕೆರೆಗಳಿಗೆ ಎಚ್. ಎನ್.ವ್ಯಾಲಿ ನೀರು ಹರಿಯಲಿದೆ ಎಂದು ಶಾಸಕ ವಿ. ಮುನಿಯಪ್ಪ ತಿಳಿಸಿದರು.
ಎಚ್.ಎನ್.ವ್ಯಾಲಿ ನೀರು ಸರಬರಾಜು ಮಾಡುವ ಸಂಬಂಧ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸಣ್ಣ ನೀರಾವರಿ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅವರು ಮಾತನಾಡಿದರು. ಶಿಡ್ಲಘಟ್ಟ ಕ್ಷೇತ್ರದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಜೊತೆಗೆ ಚಿಂತಾಮಣಿ ತಾಲೂಕಿನ ಕೆಲ ಗ್ರಾಮಗಳು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅಲ್ಲಿಯೂ ಸಹ ನೀರಿನ ಸಮಸ್ಯೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.
ಅಧಿಕಾರಿಗಳು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ರೈತರು ಮತ್ತು ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಸೂಚಿಸಿ ದರು. ಸಣ್ಣನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂ ತರ ನರೇಂದ್ರಬಾಬು ಮಾತನಾಡಿ, ಎಚ್.ಎನ್.ವ್ಯಾಲಿ ಯೋಜನೆ ರಾಜ್ಯದ ಪ್ರತಿಷ್ಟಿತ ಯೋಜನೆಯಾಗಿದೆ. ಈಗಾಗಲೇ ಜಿಲ್ಲೆಯ ಕಂದವಾರ- ಗೋಪಾಲಕೃಷ್ಣ-ದಿಬ್ಬೂರು ಕೆರೆಗೆ ಹರಿಯುತ್ತಿದೆ.
ಕೋವಿಡ್ 19 ಸೋಂಕಿನ ಸಂಕಷ್ಟದ ನಡುವೆಯೂ ಕಾಮಗಾರಿಯನ್ನು ಪೂರ್ಣಗೊಳಿಸಿ ಶಿಡ್ಲಘಟ್ಟ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿ ದ್ದೇವೆ. ಮುಂದಿನ ಆಗಸ್ಟ್ ಅಂತ್ಯದೊಳಗೆ ಅಮಾನಿಕೆರೆಗೆ ನೀರು ಹರಿಯಲಿದೆ ಎಂದು ಸ್ಪಷ್ಟಪಡಿಸಿದರು. ರೈತ ಸಂಘ ಹಾಗೂ ಹಸಿರು ಸೇನೆ(ಕೋಡಿಹಳ್ಳಿ ಚಂದ್ರಶೇಖರ ಬಣ) ಪ್ರಧಾನ ಕಾರ್ಯದರ್ಶಿ ಭಕ್ತರ ಹಳ್ಳಿ ಭೈರೇಗೌಡ ಮಾತನಾಡಿದರು.
ಸಭೆಯಲ್ಲಿ ಎಚ್.ಎನ್.ವ್ಯಾಲಿ ಯೋಜನೆಯ ಎಇಇ ರವೀಂದ್ರನಾಥ್, ಪ್ರದೀಪ್, ರೈತ ಸಂಘದ ಖಜಾಂಚಿ ಮಳಮಾಚನಹಳ್ಳಿ ರಮೇಶ್, ಸಂಘಟನಾ ಕಾರ್ಯ ದರ್ಶಿ ಶಿವಮೂರ್ತಿ, ಶಾಸಕರ ಆಪ್ತ ಕಾರ್ಯದರ್ಶಿ ನಾರಾಯಣಗೌಡ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮಧುಸುಧನ್ ಉಪಸ್ಥಿತರಿದ್ದರು.