Advertisement

ಕೃಷಿಭೂಮಿಗೆ ನೀರು: ಕಂಗಾಲಾದ ಕೃಷಿಕರು

07:50 AM Jun 12, 2018 | Team Udayavani |

ಕೋಟೇಶ್ವರ: ಗೋಪಾಡಿ, ಬೀಜಾಡಿ ಪರಿಸರದಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮಳೆಗಾಲದ ನೀರಿನ ಹೊರ ಹರಿವಿಗೆ ಅನುಕೂಲ ಕಲ್ಪಿಸುವ ನೆಲಯಲ್ಲಿ ಪಂಚಾಯತ್‌ ಕೆಲವೆಡೆ ಹೂಳೆತ್ತದಿರುವುದರಿಂದ ಆ ಭಾಗದ ಚರಂಡಿಗಳಲ್ಲಿ ನೀರು ತುಂಬಿ ಅಕ್ಕಪಕ್ಕದ ಗದ್ದೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿರುವುದು ಕೃಷಿಕರಿಗೆ ಆತಂಕದ ವಾತಾವರಣ ಸೃಷ್ಟಿಸಿದೆ.

Advertisement

ಗೋಪಾಡಿಯಲ್ಲಿ ಉಂಟಾಗಿರುವ ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಗ್ರಾ.ಪಂ. ಸಹಕಾರದೊಡನೆ ಆ ಭಾಗದ ನಿವಾಸಿಗಳು ಸ್ವಯಂಪ್ರೇರಣೆಯಿಂದ ತೋಡಿನ ತೊಡಕನ್ನು ನಿಭಾಯಿಸಿದರೂ ಕೂಡ ಅನೇಕ ಗದ್ದೆಗಳು ಜಲಾವೃತಗೊಂಡಿದೆ. ಈ ರೀತಿಯ ವಿದ್ಯಮಾನಕ್ಕೊಂದು ಪರಿಹಾರ ಕಂಡುಕೊಳ್ಳುವಲ್ಲಿ ಮಳೆಗಾಲದ ಮೊದಲು ಎಲ್ಲಾ ಗ್ರಾಮ ಪಂಚಾಯತ್‌ ಗಳು ಒಳಚರಂಡಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಕೃತಕ ನೆರೆಯ ಹಾವಳಿಯನ್ನು ತಪ್ಪಿಸಲು ಸಾಧ್ಯವೆಂದು ಅಲ್ಲಿನ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನಾದರೂ ಹೂಳೆತ್ತಿಯಾರೇ ?
ಬಹುತೇಕ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಒಳಚರಂಡಿ ಮಾಯವಾಗಿದ್ದು ಆ ಭಾಗದ ನಿವಾಸಿಗಳ ಮನೆಯ ಪಾಗಾರವು ಚರಂಡಿಯನ್ನು ಚಾಚಿರುವುದು ಪಂಚಾಯತ್‌ಗಳಿಗೆ ಇರಿಸು ಮುರಿಸಾದರೂ ಮುಂಬರುವ ದಿನಗಳಲ್ಲಿ ಸುರಿಯುವ ಭಾರೀ ಮಳೆಗೆ ಗ್ರಾಮೀಣ ಪ್ರದೇಶಗಳ ಮನೆಗಳು ನೀರಿನ ಹೊರ ಹರಿವಿಗೆ ವ್ಯವಸ್ಥೆ ಇಲ್ಲದೇ ಜಲಾವೃತಗೊಳ್ಳುವ ಮೊದಲೇ ಪಂಚಾಯತ್‌ಗಳು ಎಚ್ಚೆತ್ತುಕೊಳ್ಳಬೇಕಾಗಿದೆ .

Advertisement

Udayavani is now on Telegram. Click here to join our channel and stay updated with the latest news.

Next