Advertisement

ಎನ್ನಾರ್ಬಿಸಿ ಕಾಲುವೆಗೆ ಫೆ.10ರವರೆಗೆ ನೀರು ಹರಿಸಿ

05:11 PM Dec 07, 2018 | Team Udayavani |

ದೇವದುರ್ಗ: ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಫೆ.10ರವರೆಗೆ ನೀರು ಹರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ನೂರಾರು ರೈತರು ಗುರುವಾರ ಸಿರವಾರ ಕ್ರಾಸ್‌ ಬಳಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಶಿವಶರಣಪ್ಪ ಕಟ್ಟೋಳಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಎನ್ನಾರಿºಸಿ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 2.50 ಲಕ್ಷ ಎಕರೆ ಜಮೀನಿನಲ್ಲಿ ರೈತರು ಕಾಲುವೆ ನೀರು ನಂಬಿ ಬೆಳೆ ಬೆಳೆದಿದ್ದಾರೆ. ರೈತರು ಪ್ರತಿ ಎಕರೆಗೆ 50ರಿಂದ 80 ಸಾವಿರ ಖರ್ಚು ಮಾಡಿದ್ದಾರೆ. ಜೋಳ, ಹತ್ತಿ, ಮೆಣಸಿನಕಾಯಿ, ಕಡಲೆ, ಶೇಂಗಾ ಬೆಳೆಗಳು ಇದೀಗ ಹೂ ಬಿಡುವ ಹಂತದಲ್ಲಿವೆ.

ತಾಲೂಕಿನಲ್ಲಿ ವಿತರಣಾ ಕಾಲುವೆ 15ರಿಂದ 18ರವರೆಗೆ ಸಮರ್ಪಕ ನೀರು ಹರಿಯುತ್ತಿಲ್ಲ. ಈ ಕುರಿತು ರೈತ ಸಂಘಟನೆ ಅನೇಕ ಬಾರಿ ನಿಗಮದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಕಾರಣ ನೀರಾವರಿ ನಿಗಮ ಅ ಧಿಕಾರಿಗಳು ಸ್ಥಿತಿ ಅರಿತು ಫೆ.10ರವರೆಗೆ ನಾರಾಯಣಪುರ ಬಲದಂಡೆ ನಾಲೆಗೆ ನೀರು ಹರಿಸಬೇಕೆಂದು ಆಗ್ರಹಿಸಿದರು. ಪದಾ ಕಾರಿಗಳದ ಅಮರಣ್ಣ ಗುಡಿಹಾಳ, ಎನ್‌.ಲಕ್ಷ್ಮಣಗೌಡ,
ಸೂಗುರಯ್ಯ ಸ್ವಾಮಿ ಜಾನೇಕಲ್‌, ಶಿವನಗೌಡ, ಬೂದೆಯ್ಯ ಸ್ವಾಮಿ ಇತರರು ಮಾತನಾಡಿದರು.

ಕೆಬಿಜೆಎನ್‌ಎಲ್‌ ಅಧಿಕಾರಿಗಳಾದ ಹರೀಶ, ಶ್ರೀನಿವಾಸ, ಶೌಖತ್‌ಅಲಿ, ರಾಮಪ್ರಸಾದ, ಶ್ರೀಧರ ಬಲ್ಲಿದವ ಹಾಗೂ ಇತರರು ರೈತರೊಂದಿಗೆ ಚರ್ಚಿಸಿದರು. ಡಿವೈಎಸ್ಪಿ ಎಸ್‌.ಬಿ.ಸುಬೇದಾರ, ಸಿಪಿಐ ಸಂಜೀವಕುಮಾರ ತ್ರಿಲೋಕ, ಪಿಎಸ್‌ಐ ಲಕ್ಕಪ್ಪ ಬಿ.ಅಗ್ನಿ ನೇತೃತ್ವದಲ್ಲಿ ಬಂದೋಬಸ್ತ್
ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರಯಾಣಿಕರ ಪರದಾಟ: ರೈತರು ಸುಮಾರು ಮೂರು ತಾಸು ರಸ್ತೆ ತಡೆ ನಡೆಸಿದ್ದರಿಂದ ರಾಯಚೂರು ಮತ್ತು ದೇವದುರ್ಗ ರಸ್ತೆ ಮಾರ್ಗದಲ್ಲಿ ನೂರಾರು ವಾಹನಗಳು ನಿಂತಿದ್ದವು. ರಾಯಚೂರು, ಸಿರವಾರ, ಚಿಕ್ಕಬೂದೂರು ಸೇರಿ ಇತರೆ ಗ್ರಾಮಗಳಿಗೆ ಹೋಗುವ ಬಸ್‌, ಖಾಸಗಿ ವಾಹನಗಳ
ಪ್ರಯಾಣಿಕರು ಪರದಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next